ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿ ಅಶ್ವಿನಿ ಗೌಡ (Ashwini Gowda) ಅವರು ಸ್ಪರ್ಧಿಯೊಬ್ಬರಿಗೆ ಬಳಸಿದ ʼಅಮಾವಾಸ್ಯೆʼ ಪದ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ದೊಡ್ಡ ಮಟ್ಟ ಚರ್ಚೆಗೆ ಗ್ರಾಸವಾಗಿದೆ.
ಸುದೀಪ್ ಅವರು ಈ ವಾರ ಸ್ಪರ್ಧಿಗಳು ಡ್ರೆಸ್ಸಿಂಗ್ ಕೊಠಡಿಯಲ್ಲಿ ಪಿಸುಮಾತಿನಲ್ಲಿ ಮಾತನಾಡಬಾರದು. ಸ್ಪರ್ಧಿಗಳಿಗೆ ನೀಡಲಾಗಿರುವ ಈ ಕೊಠಡಿಯಲ್ಲಿ ಆಟ, ಸ್ಪರ್ಧಿಗಳ ಬಗ್ಗೆ ಚರ್ಚೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರು.
ಕಿಚ್ಚ ಸುದೀಪ್ (Sudeep) ಅವರು ಎಚ್ಚರಿಕೆ ನೀಡಿದ್ದರೂ ಅಶ್ವಿನಿ ಗೌಡ ಮತ್ತು ಜಾಹ್ನವಿ (Jahnavi) ಅವರು ಮತ್ತೆ ಡ್ರೆಸ್ಸಿಂಗ್ ಕೊಠಡಿಯಲ್ಲಿ ಪಿಸುಮಾತಿನಲ್ಲಿ ಮಾತನಾಡಿ ಮನೆಯ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದರು. ಉಲ್ಲಂಘನೆ ಮಾಡಿದ್ದಕ್ಕೆ ಈ ವಾರ ಮನೆಯಿಂದ ಹೊರಹೋಗಲು ಬಿಗ್ ಬಾಸ್ ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.
@KicchaSudeep sir, you really have to address it in a way you addressed Rakshitha, they said “hook thagyak hogiddo”, but we listened to that “manly” word.
Ask Ashwini who is the Amavasye with Gilli.
I hope there won’t be diplomacy this week.@ColorsKannada#BBK12 #BBKSeason12 pic.twitter.com/KPDaODc62s
— Avenger (@Sirivanth18) November 17, 2025
ಈ ವಿಚಾರದ ಬಗ್ಗೆ ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್ ತಮ್ಮ ಮಲಗುವ ಕೋಣೆಯಲ್ಲಿ ಚರ್ಚೆ ಮಾಡುತ್ತಿದ್ದರು. ಈ ವೇಳೆ ಗಿಲ್ಲಿ (Gilli Nata) ಅವರು ಮೂವರನ್ನು ಕಾಲೆಳೆಯಬೇಕೆಂದು ರೂಮಿನ ಬಾಗಿಲಿನ ಹತ್ತಿರ ಬಂದು, ಧ್ರುವ್ ಅಣ್ಣನಿಗೆ ಮಲ್ಲಮ್ಮ ಹತ್ತಿರವಾಗಿದ್ದರು ಅವರು ಮನೆಯಿಂದ ಹೋದರು. ಚಂದ್ರಣ್ಣ ಧ್ರುವ್ ಜೊತೆ ಮಾತನಾಡುತ್ತಿದ್ದರು. ಅವರೂ ಮನೆಯಿಂದ ಹೊರಹೋದರು. ಕಳೆದ ಏಳು ವಾರದಲ್ಲಿ ಕಾಕ್ರೋಚ್ ಸುಧಿ ಅಣ್ಣ ಧ್ರುವ್ ಜೊತೆ ಜಾಸ್ತಿ ಮಾತನಾಡುತ್ತನೇ ಇರಲಿಲ್ಲ. ಆದರೆ ಕಳೆದ ವಾರ ಕ್ಲೋಸ್ ಆಗಿದ್ದರು. ಅವರು ಹೋದ್ರು. ಈಗ ನೀವು ಕ್ಲೋಸ್ ಆಗಿದ್ದೀರಿ. ಹೇಳಬೇಕು ಅಂತ ಅನಿಸಿತ್ತು. ಅದಕ್ಕೆ ಹೇಳ್ದೆ ಎಂದು ಕಿಚಾಯಿಸಿದರು. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ವಿರುದ್ಧ ದೂರು
ಇದಕ್ಕೆ ಧ್ರುವಂತ್, ಮಲ್ಲಮ್ಮ ಮತ್ತು ಚಂದ್ರಣ್ಣ ರಕ್ಷಿತಾ ಜೊತೆ ಕ್ಲೋಸ್ ಇದ್ದರು ಎಂದು ತಿರುಗೇಟು ನೀಡಿದರು. ಈ ಸಂಭಾಷಣೆಯ ಕೊನೆಯಲ್ಲಿ ಅಶ್ವಿನಿ ಗೌಡ ಅವರು, “ಅಮಾವಾಸ್ಯೇನ (Amavasye) ಜೊತೆಲಿ ಇಟ್ಕೊಂಡಿದ್ದೀಯಾ ಹೋಗು” ಎಂದು ಹೇಳಿ ಗಿಲ್ಲಿ ಮಾತಿಗೆ ಖಡಕ್ ಆಗಿ ಪ್ರತಿಕ್ರಿಯಿಸಿದರು.
ಈ ಚರ್ಚೆ ನಡೆಯುವಾಗ ಗಿಲ್ಲಿ ನೇರವಾಗಿ ಧ್ರುವಂತ್ ಅವರನ್ನು ಉದ್ದೇಶಿಸಿ ತಮಾಷೆ ಮಾಡಿದ್ದರು. ಆದರೆ ಈ ಚರ್ಚೆಯಲ್ಲಿ ರಕ್ಷಿತಾ ಭಾಗಿಯಾಗದೇ ಇದ್ದರೂ ಇದ್ದರೂ ಆಕೆಯ ಹೆಸರನ್ನು ಧ್ರುವಂತ್ ಪ್ರಸ್ತಾಪ ಮಾಡಿದ್ದರು. ಕೊನೆಯಲ್ಲಿ ಅಶ್ವಿನಿ ಮಾತ್ರ ʼಅಮಾವಾಸ್ಯೆʼ ಎಂದು ಸ್ಪರ್ಧಿಯೊಬ್ಬರನ್ನು ಕರೆದು ಅವರನ್ನು ಐರನ್ ಲೆಗ್‌ಗೆ ಹೋಲಿಸಿದರು. ಇದನ್ನೂ ಓದಿ: ರಕ್ಷಿತಾಗೆ ಆ *** ಪದ ಬಳಸಿದ್ದಕ್ಕೆ ಬೇಜಾರಿದೆ, ಕೈಮುಗಿದು ಕ್ಷಮೆ ಕೇಳ್ತೀನಿ: ಕಾಕ್ರೋಚ್ ಸುಧಿ
@kicchasudeep ….You need to ask Ashwini openly who is amavasye with Gilli ..i think you have handled ashwini diplomatically so far for whatever reason may be ….its high time she needs to be shown her place and bring her ego down #BBK12
— poorna mokhasi (@PMokhasi) November 17, 2025
ದೂರು ದಾಖಲಾಗಿತ್ತು:
ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ S ಪದವನ್ನು ಬಳಕೆ ಮಾಡಿದಕ್ಕೆ ಅಶ್ವಿನಿಗೌಡ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಠಾಣೆಯಲ್ಲಿ ದೂರು ನೀಡಿದ್ದರು. ಬಿಗ್‌ಬಾಸ್ 12 ಕಾರ್ಯಕ್ರಮದಲ್ಲಿ ಸ್ಪರ್ಧಿ ರಕ್ಷಿತಾ ಅವರಿಗೆ ‘She is S, ಆ Category ನ ಎಂದು ಸ್ಪರ್ಧಿಯಾದ ಅಶ್ವಿನಿ ಗೌಡ ಅವರು ಪದ ಬಳಕೆಯನ್ನು ಮಾಡಿರುತ್ತಾರೆ. ಇದು ಜಾತಿ ನಿಂದನೆ ಮತ್ತು ವ್ಯಕ್ತಿತ್ವದ ನಿಂದನೆ ಮಾಡುವಂತಹ ವಿಷಯ. ಈ ಸಮಾಜದಲ್ಲಿ ಎಲ್ಲರೂ ಒಂದೇ ಯಾವ ಜಾತಿ ಅಥವಾ ಭೇದವನ್ನು ಹರಡುವಂತಿಲ್ಲ. ಇದರಿಂದ ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಬಿಡದಿ ಪೊಲೀಸರು ದೂರು ಸ್ವೀಕರಿಸಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದರು.


