ಬಿಗ್‌ಬಾಸ್ (Bigg Boss Kannada 12) ಮನೆಯಿಂದ ಈ ಬಾರಿ ಸ್ಪರ್ಧಿ ಕಾಕ್ರೋಚ್ ಸುಧಿ (Cockroach Sudhi) ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಆರಂಭದಲ್ಲಿ ಸುಧಿ ಕುರಿತು ಫಿನಾಲೆ ವಾರದ ವರೆಗೂ ಇರಬಹುದಾದ ಕಂಟೆಸ್ಟಂಟ್ ಅನ್ನೋ ಥರದಲ್ಲಿ ನಿರೀಕ್ಷೆ ಮೂಡಿಸಿದ್ದರು. ಆದರೆ, ಈಗ ಸುಧಿ ಬಿಗ್‌ಬಾಸ್ ಮನೆಯಿಂದ ಆಶ್ಚರ್ಯಕರ ರೀತಿಯಲ್ಲಿ ಹೊರಬಂದಿದ್ದಾರೆ. ಇದೀಗ ಬಿಗ್‌ಬಾಸ್ ಮನೆಯಲ್ಲಿ ಪ್ರತಿಸ್ಪರ್ಧಿ ರಕ್ಷಿತಾಗೆ ಕೆಟ್ಟ ಪದ ಬಳಸಿದ್ದಕ್ಕೆ ಸುಧಿ ‘ಪಬ್ಲಿಕ್ ಟಿವಿ’ ಮುಖಾಂತರ ಕ್ಷಮೆ ಕೇಳಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ (Rakshitha Shetty) ದ್ವೇಷಿಗಳು ಅನ್ನೋದಾಗಿ ಸುಧಿ ಹಾಗೂ ಅಶ್ವಿನಿ ಆರಂಭದಿಂದ ಗುರುತಿಸಿಕೊಳ್ಳುತ್ತಾ ಬಂದ್ರು. ಜಗಳ ಪೀಕ್‌ನಲ್ಲಿದ್ದ ಸಮಯದಲ್ಲಿ ರಕ್ಷಿತಾ ವಿಚಾರಕ್ಕೆ ಸುಧಿ ಹಗುರವಾಗಿ ಮಾತನಾಡಿದ್ದಕ್ಕೆ ಇದೀಗ ಸುಧಿ ಕ್ಷಮೆ ಕೇಳಿದ್ದಾರೆ. ಕೆಟ್ಟ ಪದ ಬಳಸಿ ರಕ್ಷಿತಾರನ್ನು ನಿಂದಿಸಿದ್ದಕ್ಕೆ, ರಕ್ಷಿತಾ ಅಭಿಮಾನಿಗಳು ಮತ್ತು ಕನ್ನಡಿಗರಿಗೆ ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ವಿರುದ್ಧ ದೂರು
ಬಿಗ್‌ಬಾಸ್ ಮನೆಯಲ್ಲಿದ್ದಾಗ ಪ್ರತಿಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಆಕ್ಷೇಪಾರ್ಹ ಪದ ಬಳಸಿದ್ದಕ್ಕೆ ಸುಧಿ ಎಲ್ಲರ ಆಕ್ರೋಶಕ್ಕೆ ಕಾರಣರಾದ್ರು. ಆ*** ಪದದ ಅರ್ಥ `ಸಿಲ್ಲಿ’ ಎಂದು ಹೇಳಿ ಇನ್ನಷ್ಟು ಕೋಪಕ್ಕೆ ಕಾರಣರಾದ್ರು ಸುಧಿ. ಬಳಿಕ ಕಿಚ್ಚ ಸುದೀಪ್ ಮುಂದೆ ರಕ್ಷಿತಾಗೆ ಕ್ಷಮಾಪಣೆಯನ್ನೂ ಕೇಳಿದ್ದರು. ಇದೀಗ ಮನೆಯಿಂದ ಹೊರ ಬಂದ ಬಳಿಕ ರಕ್ಷಿತಾ ಸಾಧನೆ ಬಗ್ಗೆ ಕೇಳಿದೆ. ನನ್ನ ಪತ್ನಿ ಹೇಳಿದ್ರು ರಕ್ಷಿತಾ ಅನೇಕ ಮೆಡಲ್ ಗೆದ್ದಿದ್ದಾರಂತೆ ಅಂತ ಗೊತ್ತಾಯ್ತು. ಅದೇನೇ ಇದ್ರೂ ನಾನು ಆ ಪದ ಬಳಸಬಾರದಾಗಿತ್ತು. ತಪ್ಪಾಯ್ತು ಎಂದಿದ್ದಾರೆ.
ಆ ಪದ ಬಾಯಿಂದ ಬಂದಿರೋ ಕುರಿತು ಕಾಕ್ರೋಚ್ ಸುಧಿ ಹೇಳಿದ್ದೇನು?
‘ಆಗ ಬೀನ್ ಬ್ಯಾಗ್ ಮೇಲೆ ಕುಳಿತಿದ್ದಾಗ ಧ್ರುವಂತ್ ಬಂದು ಎಲ್ಲೋ ಕರ್ಕೊಂಡ್ ಹೋಗ್ತಾನೆ.. ಆ ಸಂದರ್ಭದಲ್ಲಿ ನನಗೂ ಧ್ರುವಂತ್‌ಗೂ ಆಗ್ತಿರಲಿಲ್ಲ… ಆಗ ನಾನು ಮಾತಿನ ಭರದಲ್ಲಿ ಒಂದು ಸಣ್ಣ *** ಮಾತು ಬರುತ್ತೆ, ಒಂದು ತಪ್ಪು ಮಾತು ಬಂದ್ಬಿಡುತ್ತೆ, ಸಾರಿ ಕೇಳೋದ್ರಲ್ಲೂ ತಮಾಷೆ ಮಾಡ್ಬಿಡ್ತೀನಿ. ಅಲ್ಲಿ ಎಲ್ಲಾ ತಮಾಷೆ ಅನ್ಸುತ್ತೆ ಗೊತ್ತಾಗಲ್ಲ. ಸುದೀಪ್ ಅಣ್ಣ ಬಂದಾಗ ಸೀರಿಯಸ್ ಆಗಿ ಸಾರಿ ಕೇಳಿದೀನಿ, ಅದಾದ್ಮೇಲೂ ಸಾರಿ ಅಪ್ಪಿ.. ನನ್ನ ಬಾಯಿಂದ ಹೀಗೆ ಬಂತು ಕ್ಷಮಿಸು ಅಂತ. ಈಗ ಮತ್ತೆ ನಿಮ್ಮ ಚಾನಲ್ ಮೂಲಕ ನನ್ನಿಂದ ನೋವಾಗಿರೋ ಕನ್ನಡಿಗರಿಗೆ ಸಾರಿ ಕೇಳ್ತೀನಿ, ರಕ್ಷಿತಾಗೂ ಸಾರಿ ಕೇಳ್ತೀನಿ’ ಎಂದಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಕಾಕ್ರೋಚ್ ಸುಧಿ ಔಟ್


