ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೇನೂ ಗೊತ್ತಿಲ್ಲ. ಅಧಿವೇಶನ ನಡೆಸಲು ನಾವು ಸಿದ್ಧತೆ ಮಾಡಿಕೊಳ್ತಿದ್ದೇವೆ ಅಂತ ಸ್ಪೀಕರ್ ಖಾದರ್ (U.T. Khader) ತಿಳಿಸಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ಹಿನ್ನಲೆ ಸಿಎಂ (Siddaramaiah) ದೆಹಲಿಗೆ ಹೋಗಿರೋ ವಿಚಾರ ಮತ್ತು ತಾವು ಮಂತ್ರಿಯಾಗುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ನನಗೆ ಇದರ ಬಗ್ಗೆ ಏನು ಗೊತ್ತಿಲ್ಲ. ಸದ್ಯ ನಮ್ಮ ಮುಂದೆ ಇರೋದು ಡಿಸೆಂಬರ್ 8 ರಿಂದ ನಡೆಯೋ ಅಧಿವೇಶನ ಯಶಸ್ವಿಯಾಗಿ ನಡೆಯಬೇಕು. ಯಾವುದೇ ಸಮಸ್ಯೆ ಆಗದಂತೆ ಅಧಿವೇಶನ ನಡೆಸಬೇಕು. ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗಳು ನಡೆಯಬೇಕು. ಈ ಬಗ್ಗೆ ನಾವು ಸಿದ್ಧತೆ ಮಾಡಿಕೊಳ್ತಿದ್ದೇವೆ. ಸಂಪುಟ ವಿಸ್ತರಣೆ ಬಗ್ಗೆ ರಾಜಕೀಯದ ಬಗ್ಗೆ ಗೊತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರೋ ರಾಜಕೀಯ ಚಟುವಟಿಕೆಗಳ ಬಗ್ಗೆ ನನಗೆ ABCDಯೂ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಮಹೇಶ್ ತಿಮರೋಡಿಗೆ ತಾತ್ಕಾಲಿಕ ರಿಲೀಫ್
ವಿಧಾನಸೌಧದಲ್ಲಿ ನೀರು ಕುಡಿಯಲು ವಿಶೇಷ ವ್ಯವಸ್ಥೆ
ವಿಧಾನಸೌಧಕ್ಕೆ ಆಗಮಿಸೋ ಸಾರ್ವಜನಿಕರಿಗಾಗಿ ಕುಡಿಯೋ ನೀರಿನ ವ್ಯವಸ್ಥೆಯನ್ನ ಮಾಡಲಾಗಿದೆ. ನೂತನವಾಗಿ ನಿರ್ಮಿಸಿರೋ ಶುದ್ಧ ಕುಡಿಯುವ ನೀರಿನ ಘಟಕವನ್ನ ಸ್ಪೀಕರ್ ಖಾದರ್, ಸಭಾಪತಿ ಹೊರಟ್ಟಿ ಉದ್ಘಾಟನೆ ಮಾಡಿದ್ರು.
ಲೋಕೋಪಯೋಗಿ ಇಲಾಖೆ ವತಿಯಿಂದ ಈ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ವಿಧಾನಸೌಧದ ಪ್ರಮುಖ ದಿಕ್ಕುಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಕುಡಿಯೋ ನೀರಿನ ಘಟಕ ಉದ್ಘಾಟನೆ ಮಾಡಿ ಮಾತನಾಡಿದ ಸ್ಪೀಕರ್ ಖಾದರ್, ವಿಧಾನಸೌಧಕ್ಕೆ ಸಾವಿರಾರು ಜನರು ನಿತ್ಯ ಬರ್ತಾರೆ. ಅವರಿಗೆ ಕುಡಿಯುವ ನೀರು ಬೇಕು ಅಂತ ನೀರಿನ ವ್ಯವಸ್ಥೆ ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆ ಇದನ್ನ ನಿರ್ವಹಣೆ ಮಾಡಲಿದೆ. ವಿಧಾನಸೌಧದ 6 ಕಡೆ ಇದನ್ನ ಹಾಕಿದ್ದೇವೆ. ಶುದ್ಧವಾದ ನೀರು ಕೊಡಬೇಕು. ಇದು ಸರಿಯಾಗಿ ನಿರ್ವಹಣೆ ಮಾಡಬೇಕು ಅಂತ ಸೂಚನೆ ನೀಡಿದ್ದೇವೆ ಎಂದರು.
ಪಕ್ಷಿಗಳಿಗೂ ವಿಶೇಷ ವ್ಯವಸ್ಥೆ
ವಿಧಾನಸೌಧದಲ್ಲಿ ಮನುಷ್ಯರಂತೆ ಪಕ್ಷಿಗಳಿಗೂ ನೀರಿನ ವ್ಯವಸ್ಥೆ ಮಾಡಲು ಚಿಂತನೆ ಮಾಡಿದ್ದೇವೆ. ಹಲವು ಕಡೆ ಸ್ಥಳಗಳನ್ನ ಹುಡುಕಿದ್ದೇವೆ. ಆದಷ್ಟೂ ಬೇಗ ಪಕ್ಷಿಗಳಿಗೂ ನೀರಿನ ವ್ಯವಸ್ಥೆ ಮಾಡ್ತೀವಿ ಎಂದರು.
ವಿಧಾನಸೌಧದಲ್ಲಿ ನಾಯಿಗಳಿಗೆ ಶೆಡ್ ಮಾಡೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಾನು ಸಭಾಪತಿಗಳು, ಬಿಬಿಎಂಪಿ, ಪ್ರಾಣಿ ಸಂಘಟನೆಗಳ ಸಭೆ ಮಾಡಿ ಪ್ರಪೋಸಲ್ ಸಿದ್ಧತೆ ಮಾಡಿ ಸರ್ಕಾರಕ್ಕೆ ಕೊಟ್ಟಿದ್ದೇವೆ. ಸರ್ಕಾರ ಮುಂದಿನ ನಿರ್ಧಾರ ಮಾಡಬೇಕು. ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಲಿ ಎಂದರು.
ಸಭಾಪತಿ ಹೊರಟ್ಟಿ ಮಾತಾಡಿ, ಸಭಾಪತಿ, ಸ್ಪೀಕರ್ ಕೆಲಸ ಕೇವಲ ಸದನ ನಡೆಸೋದು ಅಲ್ಲ. ಸಾರ್ವಜನಿಕರಿಗೆ ಅನುಕೂಲ ಮಾಡೋದು ಇದೆ. ಹೀಗಾಗಿ ನಾನು, ಸ್ಪೀಕರ್ ಅವರು ಚರ್ಚೆ ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ನನ್ನ ಮತ್ತು ಸ್ಪೀಕರ್ ನಡುವೆ ಉತ್ತಮ ಹೊಂದಾಣಿಕೆ ಇದೆ. ಹೊಂದಾಣಿಕೆಯಿಂದ ನಾವಿಬ್ಬರು ಕೆಲಸ ಮಾಡಿಕೊಂಡು ಹೋಗ್ತಾ ಇದ್ದೀವಿ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಮ್ಯುನಿಕೇಶನ್ ಗ್ಯಾಪ್ ಆದರೆ ಕೂತು ನಾವಿಬ್ಬರು ಮಾತಾಡುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಎಲ್ಲೆಂದರಲ್ಲಿ ಕಸ ಸುಟ್ಟರೆ ಒಂದು ಲಕ್ಷ ದಂಡ, ಐದು ವರ್ಷ ಜೈಲು!


