ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ (RJD) ಸೋಲಿಗೆ ನೀನೇ ಕಾರಣ ಎಂದು ಸಹೋದರಿ ರೋಹಿಣಿಯನ್ನು ನಿಂದಿಸಿ, ಆಕೆ ಕಡೆಗೆ ಚಪ್ಪಲಿ ಎಸೆದು ತೇಜಸ್ವಿ ಯಾದವ್ (Tejashwi Yadav) ಆಕ್ರೋಶ ಹೊರಹಾಕಿದ್ದರೆಂದು ಮೂಲಗಳು ತಿಳಿಸಿವೆ.
ಚುನಾವಣೆಯಲ್ಲಿ ಆರ್‌ಜೆಡಿ ಹೀನಾಯ ಸೋಲಿನ ವಿಚಾರವಾಗಿ ಶನಿವಾರ ಮಧ್ಯಾಹ್ನ ಕುಟುಂಬದಲ್ಲಿ ವಾಗ್ದಾವ ನಡೆದಿದೆ. ವಿರೋಧ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಯಾದವ್, ಪಕ್ಷದ ಸೋಲಿಗೆ ಸಹೋದರಿ ಆಚಾರ್ಯ ಅವರನ್ನೇ ದೂಷಿಸಿದ್ದಾರೆ. ಇದನ್ನೂ ಓದಿ: ಕೊಳಕು ಕಿಡ್ನಿ ನೀಡಿದ್ದೇನೆ ಎಂದಿದ್ದಾರೆ, ಹೆಣ್ಣು ಮಕ್ಕಳು ತಂದೆಗೆ ಸಹಾಯ ಮಾಡಬೇಡಿ: ನಿಂದಿಸಿದ್ದಕ್ಕೆ ತೇಜಸ್ವಿ ವಿರುದ್ಧ ಲಾಲು ಪುತ್ರಿ ಆಕ್ರೋಶ
ನಿನ್ನಿಂದಾಗಿ ನಾವು ಚುನಾವಣೆಯಲ್ಲಿ ಸೋತಿದ್ದೇವೆ. ನಿನ್ನಿಂದಾಗಿ ನಾವು ಶಾಪಗ್ರಸ್ತರಾಗಿದ್ದೇವೆ ಎಂದು ಯಾದವ್ ತನ್ನ ಸಹೋದರಿಗೆ ಬೈದಿದ್ದಾರೆ ಎನ್ನಲಾಗಿದೆ. ನಂತರ ಕೋಪದಿಂದ ಆಕೆಯ ಮೇಲೆ ಚಪ್ಪಲಿ ಎಸೆದು ನಿಂದಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಒಂಬತ್ತು ಮಕ್ಕಳಲ್ಲಿ ರೋಹಿಣಿ ಆಚಾರ್ಯ ಕೂಡ ಒಬ್ಬರು. ಚುನಾವಣೆ ಸೋಲಿನ ಬೆನ್ನಲ್ಲೇ ರೋಹಿಣಿ ಅವರು ರಾಜಕೀಯ ಹಾಗೂ ತಮ್ಮ ಕುಟುಂಬದಿಂದ ದೂರಾಗುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಬಿಹಾರ ಸೋಲಿನ ಬೆನ್ನಲ್ಲೇ ರಾಜಕೀಯಕ್ಕೆ ಲಾಲು ಪುತ್ರಿ ಗುಡ್‌ಬೈ – ಕುಟುಂಬದ ಜೊತೆಯೂ ಸಂಬಂಧ ಕಡಿದುಕೊಳ್ಳುತ್ತಿದ್ದೇನೆ ಎಂದ ರೋಹಿಣಿ
ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಸರನ್‌ನಿಂದ ಸ್ಪರ್ಧಿಸಿ ಆಚಾರ್ಯ ಸೋತಿದ್ದರು. ಕೆಲ ದಿನಗಳ ಹಿಂದಷ್ಟೇ ನಡೆದ 243 ಸದಸ್ಯರ ವಿಧಾನಸಭೆಯಲ್ಲಿ ಆರ್‌ಜೆಡಿ ಕೇವಲ 25 ಸ್ಥಾನಗಳನ್ನು ಗೆದ್ದಿದೆ. ವಿಧಾನಸಭಾ ಚುನಾವಣೆ ಸೋಲಿಗೆ ತನ್ನನ್ನೇ ಹೊಣೆಗಾರ್ತಿಯನ್ನಾಗಿ ಮಾಡಿದ್ದಾರೆಂದು ಕುಟುಂಬದವರ ವಿರುದ್ಧ ಆಚಾರ್ಯ ಬೇಸರ ಹೊರಹಾಕಿದ್ದಾರೆ.


