ಕಾರವಾರ: ಖ್ಯಾತ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಯಾರಿಗೆ ತಾನೆ ಗೊತ್ತಿಲ್ಲ. ಈ ನಟ ಸಿನಿಮಾ ನಟನೆ ಜೊತೆ ದೇಶ ಸುತ್ತಿ ಅಲ್ಲಿನ ಆಹಾರ ಪದ್ಧತಿ ಬಗ್ಗೆ ಫುಡ್ ವ್ಲಾಗಿಂಗ್‌ನಲ್ಲಿ ತೊಡಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡುವ ಮೂಲಕ ಮಿಲಿಯನ್‌ಗಟ್ಟಲೇ ಅಭಿಮಾನಿಗಳನ್ನು ಹೊಂದಿದ್ದಾರೆ.
ದೇಶದ ನಗರ ಸುತ್ತಿ ಫುಡ್ ವಾಗ್ಲಿಂಗ್ ಮಾಡುವ ಇವರು ಇಂದು ಕಾರವಾರಕ್ಕೆ ಆಗಮಿಸಿದ್ದಾರೆ. ಕಾರವಾರದ ನಗರ ಸುತ್ತಿದ ಇವರು ಕಾರವಾರದ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ವಿಶೇಷ ಮೀನುಗಳ ಬಗ್ಗೆ ಮಾಹಿತಿ ಪಡೆದು ತಮ್ಮ ಫುಡ್ ವ್ಲಾಗಿಂಗ್‌ಗಾಗಿ ಚಿತ್ರೀಕರಣ ನಡೆಸಿದರು. ಇನ್ನು ಇಲ್ಲಿನ ಸ್ಥಳೀಯ ಹೋಟಲ್, ಕ್ಯಾಂಟೀನ್‌ಗಳಿಗೆ ತೆರಳಿ ಚಹಾ, ಬನ್ಸ್, ಮಸಾಲದೋಸೆ, ಮೀನಿನ ಖಾಧ್ಯ ಸವಿದ ಅವರು ಕಾರವಾರದ ಕಡಲ ತೀರದಲ್ಲಿ ಒಂದಿಷ್ಟು ಸಮಯ ಕಳೆದರು. ಇದನ್ನೂ ಓದಿ: ನಾನು ಬಯಸಿದಾಗ ನನ್ನೊಟ್ಟಿಗಿರಲಿಲ್ಲ, ದೂರ ಹೋಗ್ಬೇಕು ಅಂದಾಗ ಹತ್ತಿರ ಬರ್ತಿದ್ರು: ಸಂತ್ರಸ್ತ ನಟಿ ಭಾವುಕ

ಕಾರವಾರದ ನಂಟು!
ಆಶಿಶ್ ವಿದ್ಯಾರ್ಥಿ ತಂದೆ ಕಾರವಾರದಲ್ಲಿ ಬ್ರಿಟಿಷ್ ಕಾಲದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಇದ್ದರು. ಹೀಗಾಗಿ, ಆಶಿಶ್ ವಿದ್ಯಾರ್ಥಿಗೆ ಕಾರವಾರ ಹಳೆಯ ನಂಟು. ಕಾರವಾರಕ್ಕೆ ಬಂದ ಅವರು ತಾವು ಚಿಕ್ಕ ವಯಸ್ಸಿನಲ್ಲಿ ತಂದೆಯೊಂದಿಗೆ ಓಡಾಡಿದ ಜಾಗಗಳಲ್ಲಿ ತಿರುಗಾಡಿದರು. ತಾನೂ ಹಿಂದೆ ಕಾರವಾರದಲ್ಲಿ ಓಡಾಡಿದ ರಸ್ತೆಗಳಲ್ಲಿ ಓಡಾಡಿ ಹಳೆಯ ನೆನಪನ್ನು ನೆನಸಿಕೊಂಡರು. ಸಮಯ ಕಡಿಮೆ ಇದೆ. ಇಂದು ಬೇರೆಡೆ ಹೋಗಬೇಕಿದ್ದು, ಮತ್ತೊಮ್ಮೆ ಇಲ್ಲಿಗೆ ಬರುವುದಾಗಿ ಹೇಳಿ ಮರಳಿದರು.
ಆಶಿಶ್ ವಿದ್ಯಾರ್ಥಿ ಫುಡ್ ವ್ಲಾಗರ್ ಆಗಿದ್ದು ಹೇಗೆ?
ಕೋವಿಡ್ ಸಮಯದಲ್ಲಿ ಖಾಲಿ ಇದ್ದ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲ ಚ್ಯೂಸಿ ಆಗಿದ್ದಾರೆ. 2024ರಲ್ಲಿ ರಿಲೀಸ್ ಆದ ‘ಕಿಲ್’ ಬಳಿಕ ಅವರ ನಟನೆಯ ಸಿನಿಮಾ ತೆರೆಗೆ ಬಂದಿದ್ದು ಕಡಿಮೆ. ಆಹಾರದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಅವರು ಮೊದಲು ಚಿಕ್ಕಪುಟ್ಟ ವಿಡಿಯೋವನ್ನ ಪೋಸ್ಟ್ ಮಾಡುತಿದ್ದರು. ಇವರ ಫುಡ್ ವ್ಲಾಗಿಂಗ್‌ಗೆ ಕೆಲವೇ ತಿಂಗಳಲ್ಲಿ 2 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಸೃಷ್ಟಿಯಾಗಿದ್ದಾರೆ. ತಮ್ಮ ಇತರ ಚಟುವಟಿಕೆ ಜೊತೆ ಈಗ ಅವರು ಫುಡ್ ವ್ಲಾಗಿಂಗ್ ಕೂಡ ಮಾಡುತ್ತಾರೆ. ಇದನ್ನೂ ಓದಿ: ನನ್ನ ಕೆಪಾಸಿಟಿ ಇದ್ದಿದ್ದು 10,000 ರೂ. – ಖರ್ಚು ಮಾಡಿದಷ್ಟೂ ಹಣ ವಾಪಸ್ ಕೊಡುವ ತಾಕತ್ತು ಇಲ್ಲ: ಸಂತ್ರಸ್ತ ನಟಿ
ತಿಂಡಿಗಳನ್ನು ನಾನು ಯಾವಾಗಲೂ ಇಷ್ಪಪಡುತ್ತೇನೆ. ನನ್ನ ತಾಯಿ ವಿವಿಧ ಖಾದ್ಯಗಳನ್ನು ಮಾಡುತ್ತಿದ್ದರು. ನಾನು ಈಗ ಬೇರೆ ಬೇರೆ ಜಾಗಗಳಿಗೆ ಹೋಗಿ ಅಲ್ಲಿನ ತಿಂಡಿಗಳನ್ನು ಹುಡುಕುತ್ತಿದ್ದೇನೆ. ನಾನು ತಿಂಡಿಗಳನ್ನು ಹುಡುಕಿ, ಮೆಚ್ಚುಗೆ ಸೂಚಿಸುತ್ತೇನೆ. ನನಗೆ ಇದು ಇಷ್ಟ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.
ಆಶಿಶ್ ಅವರು ಕಾಮಿಡಿ ಶೋ, ಟಾಕ್ ಶೋಗಳನ್ನು ಮಾಡಿದ್ದಾರೆ. ಅವರು ಈಗ ವಿವಿಧ ನಗರಗಳಿಗೆ ತೆರಳಿ ಅಲ್ಲಿನ ವಿಶೇಷ ರೆಸ್ಟೋರೆಂಟ್, ರಸ್ತೆ ಬದಿಯ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ತಿಂಡಿಗಳನ್ನು ಮೆಚ್ಚಿ ಹೊಗಳುವ ಕೆಲಸ ಮಾಡುತ್ತಿದ್ದಾರೆ. ಅವರು ಫೇಮಸ್ ಆಗಿರುವುದರಿಂದ ಅವರ ಯೂಟ್ಯೂಬ್‌ಗೆ ಸಬ್‌ಸ್ಕ್ರೈಬ್‌ಗಳು ಕೂಡ ಸುಲಭವಾಗಿ ಬರುತ್ತಿವೆ. ಹಲವು ಭಾಷೆಯಲ್ಲಿ ನಟನಾಗಿ ಮಿಂಚಿರುವ ಅವರು ವಿಲನ್ ಪಾತ್ರಗಳ ಮೂಲಕ ಫೇಮಸ್ ಆದವರು. ಅವರು ಪೊಲೀಸ್ ಪಾತ್ರ ಮಾಡಿದರೆ, ಅಲ್ಲಿಯೂ ನೆಗೆಟಿವ್ ಶೇಡ್ ಇರುತ್ತಿತ್ತು. ಆ ರೀತಿಯಲ್ಲಿ ಆಶಿಶ್ ಅವರು ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಕನ್ನಡದಲ್ಲಿ ಅವರು ಸುದೀಪ್ ಜೊತೆ ‘ಬಚ್ಚನ್’ ಹೆಸರಿನ ಚಿತ್ರ ಮಾಡಿದ್ದರು. ಈ ಸಿನಿಮಾದಲ್ಲಿ ಅವರ ನಟನೆ ಪ್ರೇಕ್ಷಕರ ಮನಸ್ಸು ತಟ್ಟಿತ್ತು.

