ಬೆಂಗಳೂರು: ಬಿಹಾರ ಚುನಾವಣೆಯ ಫಲಿತಾಂಶ (Bihar Election Results) ಪ್ರಕಟವಾದ ಬೆನ್ನಲ್ಲೇ ಸಂಪುಟ ಪುನಾರಚನೆಯ (Cabinet Reshuffle) ಚರ್ಚೆ ಜೋರಾಗಿದೆ. ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ ಅಸ್ತು ಎಂದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (Siddaramaiah) 12 ಸಚಿವರನ್ನು ಕೈ ಬಿಟ್ಟು ಖಾಲಿ ಇರುವ 2 ಸ್ಥಾನವನ್ನು ಭರ್ತಿ ಮಾಡಲು ಮುಂದಾಗಿದ್ದಾರೆ.
ಈಗಾಗಲೇ 12 ಸಚಿವರ ಕೈ ಬಿಟ್ಟು ಸಂಪುಟ ಪುನಾರಚನೆಗೆ ಸಿದ್ದರಾಮಯ್ಯ (Siddaramaiah) ತಯಾರಿ ನಡೆಸಿದ್ದಾರೆ. ಹೈಕಮಾಂಡ್ ಹೆಚ್ಚಿನ ಸಚಿವರ ಹೆಸರು ಹೇಳಿದರೆ ಮತ್ತಷ್ಟು ಸಚಿವರಿಗೆ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ.
ಕೈ ಬಿಡಬಹುದಾದ ಸಂಭವನೀಯ ಸಚಿವರ ಪಟ್ಟಿ
ಕೆ.ಹೆಚ್.ಮುನಿಯಪ್ಪ- ಆಹಾರ ಮತ್ತು ನಾಗರೀಕ ಸರಬರಾಜು (ದೇವನಹಳ್ಳಿ)
ದಿನೇಶ್ ಗುಂಡೂರಾವ್- ಆರೋಗ್ಯ ಸಚಿವ (ಗಾಂಧಿನಗರ)
ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ ( ಟಿ.ನರಸೀಪುರ)
ಶರಣಬಸ್ಪ ದರ್ಶನಾಪುರ್- ಸಣ್ಣ ಕೈಗಾರಿಕೆ (ಶಹಾಪುರ್)
ಎನ್.ಎಸ್.ಬೋಸರಾಜು- ಸಣ್ಣ ನೀರಾವರಿ ವಿಜ್ಞಾನ ತಂತ್ರಜ್ಞಾನ (ವಿಧಾನ ಪರಿಷತ್)
ಡಾ.ಎಂ.ಸಿ.ಸುಧಾಕರ- ಉನ್ನತ ಶಿಕ್ಷಣ ಸಚಿವ(ಚಿಂತಾಮಣಿ)
ಶಿವಾನಂದ ಪಾಟೀಲ್- ಸಕ್ಕರೆ ಮತ್ತು ಜವಳಿ(ಬಸವನ ಬಾಗೇವಾಡಿ)
ರಹೀಂಖಾನ್- ಪೌರಾಡಳಿತ(ಬೀದರ್)
ಎಸ್.ಎಸ್.ಮಲ್ಲಿಕಾರ್ಜುನ- ತೋಟಗಾರಿಕೆ ಮತ್ತ ಗಣಿ (ದಾವಣಗೆರೆ)
ಆರ್.ಬಿ.ತಿಮ್ಮಾಪುರ್- ಅಬಕಾರಿ (ಮುದೋಳ)
ಕೆ.ವೆಂಕಟೇಶ್- ಪಶು ಸಂಗೋಪನೆ(ಪಿರಿಯ ಪಟ್ಟಣ)
ಡಿ.ಸುಧಾಕರ್- ಯೋಜನೆ ಮತ್ತು ಸಾಂಖ್ಯಿಕ (ಹಿರಿಯೂರು)
ಸೇರ್ಪಡೆಯಾಗಲಿರುವ ಶಾಸಕರ ಪಟ್ಟಿ
ಯು.ಟಿ.ಖಾದರ್ – ಸ್ಪೀಕರ್
ಕೆ.ಎನ್.ರಾಜಣ್ಣ – ಮಧುಗಿರಿ ಶಾಸಕ
ಆರ್.ವಿ.ದೇಶಪಾಂಡೆ – ಹಳಿಯಾಳ ಶಾಸಕ
ಬಿ.ಕೆ.ಹರಿಪ್ರಸಾದ್ – ಪರಿಷತ್ ಸದಸ್ಯ
ಎಂ.ಕೃಷ್ಣಪ್ಪ – ವಿಜಯನಗರ ಶಾಸಕ
ತನ್ವೀರ್‌ಸೇಠ್ – ನರಸಿಂಹರಾಜ ಶಾಸಕ
ಸಲೀಂ ಅಹಮದ್ – ಪರಿಷತ್ ಸದಸ್ಯ
ರಿಜ್ವಾನ್ ಅರ್ಷದ್ – ಶಿವಾಜಿನಗರ ಶಾಸಕ
ಮಾಗಡಿ ಬಾಲಕೃಷ್ಣ – ಮಾಗಡಿ ಶಾಸಕ
ಎನ್.ಎ.ಹ್ಯಾರಿಸ್ – ಶಾಸಕ
ರೂಪಕಲಾ ಶಶಿಧರ್ – ಶಾಸಕಿ
ಶಿವಲಿಂಗೇಗೌಡ – ಅರಸೀಕೆರೆ ಶಾಸಕ
ನರೇಂದ್ರಸ್ವಾಮಿ – ಮಳವಳ್ಳಿ ಶಾಸಕ
ಲಕ್ಷ್ಮಣ ಸವದಿ – ಅಥಣಿ ಶಾಸಕ
ಪ್ರಸಾದ್ ಅಬ್ಬಯ್ಯ – ಹುಬ್ಬಳ್ಳಿ ಧಾರವಾಡ ಪೂರ್ವ ಶಾಸಕ
ಸಿ.ಎಸ್.ನಾಡಗೌಡ – ಮುದ್ದೇಬಿಹಾಳ ಶಾಸಕ
ಬೇಳೂರು ಗೋಪಾಲಕೃಷ್ಣ – ಸಾಗರ ಶಾಸಕ
ಬಸವರಾಜ ರಾಯರೆಡ್ಡಿ – ಯಲಬುರ್ಗ ಶಾಸಕ
ಬಿ.ಆರ್.ಪಾಟೀಲ್ – ಆಳಂದ ಶಾಸಕ

