ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಬೀದಿ ಕಾಮಣ್ಣರ ಕಾಟ ಹೆಚ್ಚಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣಾ (Jnana Bharati Police Station) ವ್ಯಾಪ್ತಿಯ ಉಪಕಾರ್ ಲೇಔಟ್‌ನಲ್ಲಿ ನಡೆದ ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.
ವಾಕಿಂಗ್ ಮಾಡಿಸುತ್ತಿದ್ದ ನಾಯಿಯನ್ನ ಮುದ್ದು ಮಾಡುವ ನೆಪದಲ್ಲಿ ಯುವತಿಗೆ ಬ್ಯಾಡ್ ಟಚ್ (Bad Touch) ಮಾಡಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಕ್ಕಳ ಪರಿಶುದ್ಧ ಸಂತೋಷ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ : ರಾಧಿಕಾ ಪಂಡಿತ್

ನವೆಂಬರ್ 7ರ ರಾತ್ರಿ 10:30ರ ಸುಮಾರಿಗೆ ಯುವತಿ ತನ್ನ ಮನೆಯ ಹತ್ತಿರ ನಾಯಿಯನ್ನ ವಾಕಿಂಗ್ ಮಾಡಿಸುತ್ತಿದ್ದಳು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಅಪರಿಚಿತ ಯುವಕ, ನಿಮ್ಮ ನಾಯಿ ನೋಡೋಕೆ ತುಂಬಾ ಕ್ಯೂಟ್ ಆಗಿದೆ. ಒಂದು ಸಾರಿ ಮುದ್ದು ಮಾಡಬಹುದಾ ಅಂತಾ ಯುವತಿಗೆ ಕೇಳಿದ್ದ. ಯುವಕನ ಮಾತಿನಿಂದ ಖುಷಿಯಾದ ಯುವತಿ, ಹು ಅಂತಾ ಒಪ್ಪಿಗೆ ಕೊಟ್ಟಿದ್ಲು. ಆದರೆ ನಾಯಿಯನ್ನು ಮುದ್ದು ಮಾಡುತ್ತಾ ಹಾಗೇ ಜೊತೆಗೆ ನಿಂತಿದ್ದ ನಾಯಿ ಓನರ್ ಯುವತಿಗೆ ಬ್ಯಾಡ್ ಟಚ್ ಮಾಡಿ ಕ್ಷಣಮಾತ್ರದಲ್ಲಿ ಎಸ್ಕೇಪ್ ಆಗಿದ್ದಾನೆ.
ಈ ಸಂಬಂಧ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕೃತ್ಯವೆಸಗಿದ ಯುವಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ನಾನು 3 ಕೋಟಿ ಖರ್ಚು ಮಾಡಿ, ಸೈಟ್, ಕಾರು ಕೊಡ್ಸಿದ್ದೆ, ಆದ್ರೆ ಅವ್ಳು ಬೇರೆಯವನೊಂದಿಗೆ ಕಾಣಿಸಿಕೊಳ್ತಿದ್ಲು – ನಟಿ ವಿರುದ್ಧ ಅರವಿಂದ್ ರೆಡ್ಡಿ ಆರೋಪ

