ಬೆಂಗಳೂರು: ಬೇಲೆಕೇರಿ ಅದಿರು ಅಕ್ರಮ ಸಾಗಾಟ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ (ED) ಚಾರ್ಜ್‌ಶೀಟ್ ಸಲ್ಲಿಸಿದೆ. ಕಬ್ಬಿಣದ ಅದಿರು ರಫ್ತಿನಿಂದ ಸರ್ಕಾರದ ಖಜಾನೆಗೆ ಸುಮಾರು 44.09 ಕೋಟಿ ರೂ. ನಷ್ಟ ಆಗಿದೆ ಎಂದು ಇ.ಡಿ ಉಲ್ಲೇಖಿಸಿದೆ.
ಇತರ ಆರೋಪಿಗಳೊಂದಿಗೆ ಸೇರಿ ಸತೀಶ್ ಸೈಲ್ ಅಪರಾಧಿಕ ಸಂಚು ಮಾಡಿದ್ದರು. ವಿದೇಶದಲ್ಲಿ ಬ್ಯಾಂಕ್ ಅಕೌಂಟ್ ಹೊಂದಿದ್ದಾರೆ. ಹಾಂಕಾಂಗ್ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಐಸಿಬಿಸಿ ಬ್ಯಾಂಕ್ ಹಾಂಕಾಂಗ್‌ನಲ್ಲಿ ಖಾತೆಗಳನ್ನು ಹೊಂದಿದ್ದಾರೆ. ನೈಜ ಚೀನಾ ಖರೀದಿದಾರರಿಗೆ ರಪ್ತು ಮಾಡದೆ ಮಧ್ಯದಲ್ಲಿ ವಿದೇಶಿ ಕಂಪನಿ ಮೂಲಕ ಅಪರಾಧ ಸಂಚು ಮಾಡಿದ್ದರೆಂದು ಇ.ಡಿ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.
ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿ ಕಂಪನಿಗೆ 27 ಕೋಟಿ ಲಾಭವಾಗಿದೆ ಎಂದು ತಿಳಿಸಿದೆ. ಸತೀಶ್ ಸೈಲ್ ಮನೆ ಮೇಲೆ ಇಡಿ ದಾಳಿ ವೇಳೆ 1.68 ಕೋಟಿ ರೂ. ನಗದು, 6.75 ಕೆಜಿ ತೂಕದ ಚಿನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿದ್ದ 14.13 ಕೋಟಿ ಸ್ಥಗಿತ ಮಾಡಲಾಗಿದೆ. 21 ಕೋಟಿ ಮೌಲ್ಯದ 3 ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

