ಶಿವಮೊಗ್ಗ: ಯುವತಿಯೊಬ್ಬಳು ಮನೆ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿ (Tirthahalli) ತಾಲೂಕಿನ ಬೆಜ್ಜವಳ್ಳಿ ಸಮೀಪದ ಬಚ್ಚನಕೂಡಿಗೆಯಲ್ಲಿ ನಡೆದಿದೆ.
ಬಚ್ಚನಕುಡಿಗೆಯ ರಮೇಶ್ ಆಚಾರ್ ಅವರ ಪುತ್ರಿ ಪ್ರಾಪ್ತಿ (21) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ತಿಳಿದು ಬಂದಿದೆ. ಆಕೆ ತೀರ್ಥಹಳ್ಳಿಯ ಬಾಳೆಬಯಲು ಸರ್ಕಾರಿ ಪದವಿ ಕಾಲೇಜಿನ ತೃತೀಯ ಬಿಬಿಎ ವ್ಯಾಸಾಂಗ ಮಾಡುತ್ತಿದ್ದಳು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಬೆಂಗಳೂರು | ಪತ್ನಿಯಿಂದ ಕಿರುಕುಳ ಆರೋಪ – ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
ಈ ಸಂಬಂಧ ಮಾಳೂರು ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಫ್ಯಾನ್‌ಗೆ ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ

