ಸೋಶಿಯಲ್ ಮೀಡಿಯಾದಲ್ಲಿ (Social Media) ಬಹಳ ಸಕ್ರೀಯವಾಗಿರುವ ಇರುವ ಸ್ಯಾಂಡಲ್‌ವುಡ್ (Sandalwood) ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit) ಇದೀಗ ಮಕ್ಕಳ ದಿನಾಚರಣೆಯ (Children’s Day) ಅಂಗವಾಗಿ ವಿಶೇಷ ಪೋಸ್ಟ್ ಹಾಕಿದ್ದಾರೆ. ವಿಶೇಷ ಸಂದೇಶವನ್ನು ಒಳಗೊಂಡ ಫ್ಯಾಮಿಲಿ ಫೋಟೋ ಪೋಸ್ಟ್ ಮಾಡಿದ್ದಾರೆ ರಾಧಿಕಾ ಪಂಡಿತ್.
ಫೋಟೋದಲ್ಲಿ ಯಶ್, ರಾಧಿಕಾ ಹಾಗೂ ಐರಾ, ಯಥರ್ವ್ ಮುದ್ದಾದ ಪೋಸ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ ಸಹೋದರನ ಮಕ್ಕಳಿಬ್ಬರ ಫೋಟೋವನ್ನೂ ರಾಧಿಕಾ ಪೋಸ್ಟ್ ಮಾಡಿದ್ದಾರೆ.
View this post on Instagram
ಮಕ್ಕಳ ಪರಿಶುದ್ಧ ಸಂತೋಷ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ ಮಕ್ಕಳ ದಿನಾಚರಣೆಯ ಶುಭಾಶಯಗಳು ಎಂದು ಸರ್ವರಿಗೂ ಶುಭ ಕೋರಿದ್ದಾರೆ. ಇದು ವಿದೇಶ ಪ್ರವಾಸದಲ್ಲಿ ತೆಗೆದ ಫೋಟೋವಾಗಿದ್ದು ಯಶ್ ಲುಕ್ ಫ್ಯಾನ್ಸ್ ಫಿದಾ ಆಗಿದ್ದಾರೆ.

