ಬೆಂಗಳೂರು ಗ್ರಾಮಾಂತರ: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಬನ್ನೇರುಘಟ್ಟದಲ್ಲಿ ಕೆಎಸ್‌ಟಿಡಿಸಿ ಸಫಾರಿ ವಾಹನದ ಮೇಲೆ ಚಿರತೆ ಎಗರಿ ದಾಳಿ ಮಾಡಿದೆ. 50 ವರ್ಷದ ವಹಿತ ಬಾನು ವಾಹನ ಗ್ಲಾಸ್ ಓಪನ್ ಮಾಡಿ ನೋಡುತ್ತಿದ್ದಾಗ ಚಿರತೆ ದಾಳಿ ನಡೆಸಿತು. ಮಹಿಳೆ ಕೈಗೆ ಗಾಯವಾಗಿದೆ.
ವಹಿತಾ ಬಾನು ಮೂಲತಃ ಚೆನ್ನೈ ಮೂಲದವರು. ಪತಿ, ಮಗ ಜೊತೆ ಸಫಾರಿಗೆ ಬಂದಿದ್ದಾಗ ದಾಳಿ ನಡೆದಿದೆ. ಸದ್ಯ ಗಾಯಗೊಂಡ ಮಹಿಳೆಗೆ ಜಿಗಣಿಯ ವಿಜಯಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಚಿರತೆಯಿAದ ಸಫಾರಿಯಲ್ಲಿ ಒಂದು ವರ್ಷದಲ್ಲಿ ಎರಡು ಬಾರಿ ಪ್ರವಾಸಿಗರ ಮೇಲೆ ದಾಳಿ ಆಗಿರುವ ಹಿನ್ನೆಲೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಇಂತಹ ದಾಳಿಗಳು ಮತ್ತೆ ನಡೆಯಬಹುದು ಎಂಬ ಆತಂಕದಿಂದ ನಾಳೆಯಿಂದ ಸಂಪೂರ್ಣವಾಗಿ ನಾನ್ ಎಸಿ ಬಸ್‌ಗಳನ್ನು ಸ್ಟಾಪ್ ಮಾಡುತ್ತಿದ್ದಾರೆ. ಕೇವಲ ಎಸಿ ಬಸ್‌ಗಳನ್ನು ಮಾತ್ರ ಇನ್ನು ಸಫಾರಿಗೆ ಕಳಿಸಲಾಗುತ್ತದೆ.
ಪಾರ್ಕ್ನಲ್ಲಿ ಅತಿ ಹೆಚ್ಚು ನಾನ್ ಎಸಿ ಬಸ್‌ಗಳೇ ಇದ್ದು, ಎಸಿ ಬಸ್‌ಗಳು ಕಡಿಮೆ ಇವೆ. ಜೊತೆಗೆ ಎಸಿ ಬಸ್ಸುಗಳು ದುಬಾರಿ ಶುಲ್ಕ ಆದ್ದರಿಂದ ಬಹುತೇಕ ಮಂದಿ ನಾನ್ ಎಸಿ ಬಸ್ಗಳಲ್ಲಿ ಹೋಗುತ್ತಿದ್ದರು. ಕಳೆದ ಬಾರಿ ಬಾಲಕನ ಮೇಲೆ ಚಿರತೆ ಅಟ್ಯಾಕ್ ಮಾಡಿದಾಗ ಎಚ್ಚೆತ್ತುಕೊಳ್ಳಬೇಕಿದ್ದ ಅಧಿಕಾರಿಗಳು ಸ್ವಲ್ಪ ತಡವಾಗಿ ಎಚ್ಚೆತ್ತುಕೊಂಡಿದ್ದಾರೆ. ಇದರಿಂದ ಇನ್ನು ಮುಂದೆ ನಾನ್ ಎಸಿ ಬಸ್‌ಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹಾಗಾಗಿ ಇನ್ಮುಂದೆ ಎಸಿ ಬಸ್ಗಳಲ್ಲಿ ಸಫಾರಿ ಪ್ರಿಯರು ಸಫಾರಿಗೆ ಹೋಗಬೇಕಾಗಿರುತ್ತದೆ. ಅಲ್ಲದೆ, ಎಸಿ ಬಸ್ಗಳಲ್ಲಿ ಶುಲ್ಕವು ಸಹ ಹೆಚ್ಚಾಗಿ ಇದ್ದು ಇದು ಪ್ರವಾಸಿಗರಿಗೆ ಹೊರೆಯಾಗಲಿದೆ.

