ಕಳೆದ ಕೆಲ ದಿನಗಳ ಹಿಂದಷ್ಟೇ ತಮಿಳು ಚಿತ್ರರಂಗದಲ್ಲಿ ದೊಡ್ಡ ಘೋಷಣೆಯೊಂದು ಹೊರಬಂದಿತ್ತು. ಸೂಪರ್ ರಜನಿ ಕಾಂತ್, ನಟ ರಾಕ್ಷಸ, ಉಳಗನಾಯಕ ಕಮಲ್ ಹಾಸನ್ (Kamal Haasan) ಜೊತೆಯಾಗಿ ನಟಿಸುವ ಬಹುನಿರೀಕ್ಷಿತ ಚಿತ್ರ `ತಲೈವರ್ 173′ (Thalaivar 173) ಘೋಷಣೆಯಾಗಿತ್ತು. ಕಾಲಿವುಡ್‌ನಲ್ಲಿ ಹಲವು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದ ಖುಷ್ಬು ಅವರ ಪತಿ ಸುಂದರ್ ಸಿ, ನಿರ್ದೇಶನ ಮಾಡ್ತಿದ್ದಾರೆ ಅಂತಲೇ ಹೇಳಲಾಗ್ತಿತ್ತು. ಆದ್ರೆ ಸಿನಿ ಚಿತ್ರೀಕರಣ ಶುರುವಾಗುವ ಮೊದಲೇ ಅಭಿಮಾನಿಗಳಿಗೆ ನಿರಾಸೆಯಾಗಿದೆ.
SUNDAR C wont be directing #Thalaivar173 — Official Statement. pic.twitter.com/tHmsZvdiRG
— LetsCinema (@letscinema) November 13, 2025
ಹೌದು. ತಲೈವರ್-173 ರಜನಿಕಾಂತ್ (Rajinikanth) ವೃತ್ತಿ ಬದುಕಿನ ಕೊನೆಯ ಸಿನಿಮಾ ಅನ್ನೋ ಮಾತುಗಳು ಕೇಳಿಬರುತ್ತಿರುವ ನಡುವೆ ಸಿನಿಮಾದ ಬಗ್ಗೆ ಶಾಕಿಂಗ್ ವಿಚಾರವೊಂದು ಹೊರಬಿದ್ದಿದೆ. ಪ್ರಾಜೆಕ್ಟ್‌ನಿಂದ ನಿರ್ದೇಶಕ ಸುಂದರ್ ಸಿ. ಹೊರನಡೆಯುವುದಾಗಿ ಘೋಷಿಸಿದ್ದಾರೆ.
`ತಲೈವರ್ 173′ ಚಿತ್ರತಂಡದಿಂದ ಹೊರನಡೆಯುತ್ತಿರುವುದಾಗಿ ನಿರ್ದೇಶಕ ಸುಂದರ್ ಸಿ (Sundar C) ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ನಿರ್ಮಿಸಿರುವ ಭಾರೀ ನಿರೀಕ್ಷಿತ ಚಿತ್ರತಂಡ ಸುಂದರ್ ಸಿ ಹೊರನಡೆಯಲು ನಿರ್ಧರಿಸಿರೋದಾದ್ರೂ ಏಕೆ ಎಂಬ ಚರ್ಚೆ ಕಾಲಿವುಡ್‌ನಲ್ಲಿ ಜೋರಾಗಿದೆ. ಜೊತೆಗೆ ನಿರ್ದೇಶಕ ಸುಂದರ್ ಸಿ ಪತ್ನಿ ಖುಷ್ಬು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಟೇಟ್ಮೆಂಟ್‌ನ್ನು ಪೋಸ್ಟ್ ಮಾಡಿ ಬಳಿಕ ಡಿಲೀಟ್ ಮಾಡಿರುವುದು ವಿಚಿತ್ರ ಬೆಳವಣಿಗೆಯಾಗಿದೆ.
ಬಿಗ್ ಪ್ರಾಜೆಕ್ಟ್‌ನಿಂದ ಹೊರಬರಲು ಕಾರಣವೇನು?
ಕೆಲ ʻಅನಿರೀಕ್ಷಿತ ಮತ್ತು ಅನಿವಾರ್ಯ ಕಾರಣಗಳಿಂದಾಗಿ, ಪ್ರತಿಷ್ಠಿತ ಯೋಜನೆಯಾದ #ತಲೈವರ್ 173 ನಿಂದ ಹಿಂದೆ ಸರಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ. ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರೊಂದಿಗೆ ಕೆಲಸ ಮಾಡುವುದನ್ನ ತಮ್ಮ ವೃತ್ತಿಜೀವನದ ಮಹತ್ವದ ಕ್ಷಣ. ಈ ಇಬ್ಬರು ದಿಗ್ಗಜರೊಂದಿಗಿನ ನನ್ನ ಒಡನಾಟ ಬಹಳ ಹಿಂದಿನಿಂದಲೂ ಇದೆ. ನಾನು ಅವರನ್ನು ಯಾವಾಗಲೂ ಅತ್ಯುನ್ನತ ಗೌರವದಿಂದ ಕಾಣುತ್ತೇನೆ.
ನಾನು ಈ ಅವಕಾಶದಿಂದ ಹಿಂದೆ ಸರಿಯುತ್ತಿದ್ದರೂ, ಅವರ ಮಾರ್ಗದರ್ಶನ ಮುಂದೆಯೂ ಪಡೆಯುತ್ತೇನೆ. ಇಂತಹ ಮಹೋನ್ನತ ಪ್ರಾಜೆಕ್ಟ್‌ಗಾಗಿ ನನ್ನನ್ನ ಪರಿಗಣಿಸಿದ್ದಕ್ಕಾಗಿ ಅವರಿಬ್ಬರಿಗೂ ನನ್ನ ಹೃದಯದಾಳದಿಂದ ಧನ್ಯವಾದ ಅರ್ಪಿಸುತ್ತೇನೆ. ಇದಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದವರನ್ನ ನಿರಾಶೆಗೊಳಿಸಿದ್ದರೆ ಅಂಥವರಿಗೆ ಕ್ಷಮೆಯಾಚಿಸುತ್ತೇನೆ. ಅಲ್ಲದೇ ನಿಮ್ಮ ಉತ್ಸಾಹ ಹೆಚ್ಚಿಸುವ ಮನರಂಜನೆಯನ್ನ ಮುಂದೆ ನಿಗಮೆ ನೀಡುತ್ತೇನೆ ಎಂದು ಹೇಳಿದ್ದಾರೆ.



