ನವದೆಹಲಿ: ದೆಹಲಿ ಕಾರು ಸ್ಫೋಟ (Delhi Car Explosion) ಹೊಸ ತಿರುವು ಪಡೆದಿದೆ. 70 ಎಕ್ರೆಯಷ್ಟು ವಿಶಾಲ ಪ್ರದೇಶದಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯ (Al Falah university,) ಈಗ ದೆಹಲಿ ಸ್ಫೋಟದ ಕೇಂದ್ರಬಿಂದುವಾಗಿದೆ.
ಹೌದು. ಹರಿಯಾಣ-ದೆಹಲಿ ಗಡಿಯಿಂದ ಸುಮಾರು 27 ಕಿಮೀ ದೂರದಲ್ಲಿ ಅಲ್ ಫಲಾಹ್ ವಿಶ್ವವಿದ್ಯಾಲಯ ಇದೆ. ವಿವಿಯ ಕೋಣೆಯಲ್ಲಿ ಉಗ್ರರಾದ ಡಾ. ಉಮರ್ ಮೊಹಮ್ಮದ್ ನಬಿ ಮತ್ತು ಡಾ. ಮುಜಾಮಿಲ್ ಶಕೀಲ್‌ಗೆ ಸೇರಿದ 2 ಡೈರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: 32 ವಾಹನ ಬಳಸಿ 4 ನಗರಗಳಲ್ಲಿ ಏಕಕಾಲದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಡಾಕ್ಟರ್ ಗ್ಯಾಂಗ್‌ನಿಂದ ಸಂಚು!
ಅಲ್ ಫಲಾಹ್ ವಿವಿಯಲ್ಲಿ ಉಗ್ರ ಡಾ. ಮುಜಮ್ಮಿಲ್ ವಾಸವಿದ್ದ 17ನೇ ಕಟ್ಟಡದ 13ನೇ ನಂಬರ್ ರೂಂನಲ್ಲಿ ಎಲ್ಲಾ ಭಯೋತ್ಪಾದಕರು ಆಗಾಗ್ಗೆ ಭೇಟಿಯಾಗುತ್ತಿದ್ದರು. ದೆಹಲಿ ಮತ್ತು ಉತ್ತರ ಪ್ರದೇಶದ ಹಲವಾರು ಭಾಗಗಳಲ್ಲಿ ಸ್ಫೋಟ ನಡೆಸಲು ಇಲ್ಲಿಯೇ ಕುಳಿತು ಸಂಚು ರೂಪಿಸಲಾಗಿತ್ತು. ಅನ್ನೋದು ಗೊತ್ತಾಗಿದೆ. ರೂಮ್ ನಂ.13ರಲ್ಲಿ ದಾಳಿ ನಡೆಸಿದಾಗ ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ 2 ಡೈರಿಗಳು ಸಿಕ್ಕಿವೆ. ಈ ಡೈರಿಗಳಲ್ಲಿ ‘ಆಪರೇಷನ್’ ಎಂಬ ಪದವನ್ನ ಪದೇ ಪದೇ ಉಲ್ಲೇಖಿಸಲಾಗಿದೆ.
ಸ್ಫೋಟಕಗಳ ಬಳಕೆ ಕುರಿತು ಮೊಬೈಲ್‌ನಲ್ಲಿ ‘ಪ್ಯಾಕೇಜ್’ ಮತ್ತು ‘ಶಿಪ್‌ಮೆಂಟ್’ ಎಂದು ಕೋಡ್ ಬಳಸಿ ವಿದೇಶಿ ನಿರ್ವಾಹಕರೊಂದಿಗೆ ಸಂವಹನ ನಡೆಸಿರುವುದು ಸಹ ಬಯಲಾಗಿದೆ. ಈ ಪದಗಳನ್ನು ಅಮೋನಿಯಂ ನೈಟ್ರೇಟ್, ಆಕ್ಸೈಡ್ ಮತ್ತು ಇಂಧನ ತೈಲದಂತಹ ಸ್ಫೋಟಕಗಳಿಗೆ ಬಳಸುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಪಾಕ್ ಬೆಂಬಲಿತ ಮತ್ತೊಂದು ಉಗ್ರರ ಜಾಲ ಪತ್ತೆ; 10 ಐಎಸ್‌ಐ ಏಜೆಂಟ್‌ಗಳು ಅರೆಸ್ಟ್
ಪರಿಶೀಲನೆ ನಡೆಸುತ್ತಿರುವ ಫೋರೆನ್ಸಿಕ್ ತಂಡವು ರೂಮ್ ನಂ.13 ಮತ್ತು ಲ್ಯಾಬ್‌ನಿಂದ ಕೆಲವು ರಾಸಾಯನಿಕದ ಕುರುಹುಗಳು ಮತ್ತು ಡಿಜಿಟಲ್ ಡೇಟಾ ಸೀಜ್ ಮಾಡಿದೆ. ದೆಹಲಿಯಿಂದ ಸುಮಾರು 27 ಕಿ.ಮೀ. ದೂರದ ಅಲ್ ಫಲಾಹ್ ವಿವಿಯನ್ನೇ ರಹಸ್ಯ ಕಾರ್ಯಾಚರಣೆಯ ಕಾರಾಸ್ತಾನ ಮಾಡಿಕೊಂಡಿದ್ದಾರೆ. ನ.10ರಂದು ನಡೆದ ಸ್ಫೋಟದ ಬಗ್ಗೆ ಚರ್ಚೆ ಸಹ ಡಾ. ಮುಜಾಮಿಲ್ ಚರ್ಚಿಸಿದ್ದು, ವಿವಿಯ ಲ್ಯಾಬ್‌ನಿಂದಲೇ ಸ್ಫೋಟಕ ತಯಾರಿಸಲು ಬೇಕಾದ ರಾಸಾಯನಿಕವನ್ನು ತೆಗೆದುಕೊಂಡು ಬರುತ್ತಿದ್ದರು ಎಂಬ ಅಚ್ಚರಿಯ ವಿಚಾರಗಳು ಬೆಳಕಿಗೆ ಬಂದಿವೆ. ವೈದ್ಯರಿಗೆ ಜೈಶ್-ಇ-ಮೊಹಮ್ಮದ್ ಸಂಘಟನೆಯ ನಂಟಿರುವುದು ಕಿಲಾಡಿ ಲೇಡಿ ವೈದ್ಯೆ ಶಾಹೀನ್ ಶಹೀದ್ ಬಂಧನದಿಂದ ರುಜುವಾತಾಗಿದೆ.


