ಚಿಕ್ಕಮಗಳೂರು: ನಗರದ (Chikkamagaluru) ಪಿಯುಸಿ ಕಾಲೇಜೊಂದರ 25 ವಿದ್ಯಾರ್ಥಿಗಳ (Students) ಮೇಲೆ ಹೆಜ್ಜೇನು (Honey Bee Attack) ದಾಳಿ ನಡೆಸಿದೆ. ಅದರಲ್ಲಿ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ವಿದ್ಯಾರ್ಥಿಯೊಬ್ಬ ಜೇನಿನ ಗೂಡಿಗೆ ಕಲ್ಲು ಹೊಡೆದಿದ್ದಾನೆ. ಇದರಿಂದ ಕೆರಳಿದ ಜೇನುನೊಣಗಳು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿವೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ. ವಿದ್ಯಾರ್ಥಿನಿಯ ಮೇಲೆ ನೂರಕ್ಕೂ ಹೆಚ್ಚು ಜೇನುಗಳು ದಾಳಿ ಮಾಡಿವೆ ಎಂದು ತಿಳಿದುಬಂದಿದೆ. ಮತ್ತೋರ್ವ ವಿದ್ಯಾರ್ಥಿಯನ್ನು ಹಾಸನಕ್ಕೆ ರವಾನಿಸುವ ಸಾಧ್ಯತೆ ಇದೆ.
ಶಾಲಾ ಆವರಣದ ಮರದಲ್ಲಿದ್ದಂತಹ ಜೇನಿನ ಗೂಡನ್ನ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವಾಗಿ ತೆಗೆಸಬೇಕಿತ್ತು. ಏಕೆ ತೆಗೆಸಿಲ್ಲ. ಈ ಅನಾಹುತಕ್ಕೆ ಹೊಣೆ ಯಾರೆಂದು ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

