– ರಾಜು ಕಾಗೆ ಪ್ರತ್ಯೇಕ ರಾಜ್ಯದ ಹೇಳಿಕೆಗೆ ನಮ್ಮ ಪಕ್ಷದ ಬೆಂಬಲ ಇಲ್ಲ
ಬೆಂಗಳೂರು: ಬಿಹಾರ ಚುನಾವಣೆ (Bihar Election) ಸಮಯದಲ್ಲಿ ದೆಹಲಿಯಲ್ಲಿ ಬ್ಲಾಸ್ಟ್ ಆಗಿರೋದು ಅನುಮಾನಕ್ಕೆ ಕಾರಣವಾಗಿದೆ ಅಂತ ವಿಧಾನಸಭೆ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ದೆಹಲಿ ಬಾಂಬ್ ಸ್ಫೋಟ ಸಂಪೂರ್ಣವಾಗಿ ಭದ್ರತಾ ವೈಫಲ್ಯ. ಬ್ಲಾಸ್ಟ್ ಆದ ಕಾರ್ ಒಂದೇ ಜಾಗದಲ್ಲಿ 5 ಗಂಟೆ ನಿಂತಿತ್ತು ಅಂತ ಹೇಳ್ತಿದ್ದಾರೆ. ಹಾಗಾದ್ರೆ ಯಾಕೆ ಯಾರು ಅದನ್ನ ಪರಿಶೀಲನೆ ಮಾಡಿಲ್ಲ ಅಂತ ಆರೋಪ ಮಾಡಿದ್ದಾರೆ.ಇದನ್ನೂ ಓದಿ: ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಈ ಬಾರಿ ಮಂತ್ರಿ ಸ್ಥಾನ ಸಿಗುತ್ತೆ: ನಾರಾಯಣಸ್ವಾಮಿ
ಚುನಾವಣೆ ಸಮಯದಲ್ಲಿ ಇಂತಹ ಬಾಂಬ್ ಸ್ಫೋಟ ಯಾಕೆ ಆಗುತ್ತದೆ. ಹಿಂದೆ ಪುಲ್ವಾಮಾ ದಾಳಿ ಆಗಿತ್ತು .ಈಗ ಬಿಹಾರ ಎಲೆಕ್ಷನ್ ಟೈಂಗೆ ಈ ಸ್ಫೋಟ ಆಗಿದೆ. ಅದಕ್ಕೆ ನಮಗೆ ಈ ಸ್ಪೋಟದ ಬಗ್ಗೆ ಅನುಮಾನವಿದೆ. ನಮ್ಮ ನಾಯಕರಿಗೂ ಇದರ ಬಗ್ಗೆ ಡೌಟ್ ಆಗಿದೆ. ಎಲೆಕ್ಷನ್ ಟೈಂನಲ್ಲಿ ಹೀಗೆ ಮಾಡಿ ಸಿಂಪತಿ ಕ್ರಿಯೇಟ್ ಮಾಡ್ತಿದ್ದಾರೆ ಅನ್ನೋದು ನಮ್ಮ ಅನುಮಾನ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಶಾಸಕ ರಾಜು ಕಾಗೆಯಿಂದ ಪ್ರತ್ಯೇಕ ರಾಜ್ಯದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜು ಕಾಗೆ ಅಭಿಪ್ರಾಯ ಅವರ ವೈಯಕ್ತಿಕ. ನಾನು ವಿಪ್ ಆಗಿ ಹೇಳ್ತಾ ಇದ್ದೀನಿ ನಮ್ಮ ಪಕ್ಷಕ್ಕೂ ಅವರ ಹೇಳಿಕೆಗೆ ಸಂಬಂಧವಿಲ್ಲ. ನಮ್ಮ ಪಕ್ಷ, ಸಿಎಂ, ಜನ ಯಾರೂ ಅವರ ಹೇಳಿಕೆಯನ್ನು ಒಪ್ಪಲ್ಲ. ಅವರು ಸೀನಿಯರ್ ಲೀಡರ್ ಹಾಗೆ ಮಾತಾಡೋದು ಸರಿಯಲ್ಲ. ಅವರ ಹೇಳಿಕೆ ಕರ್ನಾಟಕಕ್ಕೆ ಅಪಮಾನ ಮಾಡಿದ ಹಾಗೆ ಆಗುತ್ತದೆ ಎಂದು ಹೇಳಿದ್ದಾರೆ.
ಉಮೇಶ್ ಕತ್ತಿ ಕೂಡಾ ಅನೇಕ ಬಾರಿ ಮಾತಾಡಿದ್ರು. ಅದಾದ ಮೇಲೆ ಯಾರು ಮಾತಾಡಲಿಲ್ಲ. ಈಗ ಅವರು ಯಾಕೆ ಮಾತಾಡಿದ್ರೋ ಗೊತ್ತಿಲ್ಲ. ಸಿಎಂ ಅವರು ಉತ್ತರ ಕರ್ನಾಟಕಕ್ಕೂ ಅನುದಾನ ಕೊಟ್ಟಿದ್ದಾರೆ. ಸಿಎಂ ಅವರು ಸಾಕಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ಧಿಯೂ ಆಗಿದೆ. ಮತ್ತಷ್ಟು ಹಣ ಬೇಕು ಅಂತ ಅವರು ಹೇಳಿರಬೇಕು. ನಾವು ಅವರ ಹೇಳಿಕೆ ಪರ ಇಲ್ಲ. ಅವರ ಹೇಳಿಕೆಗೆ ನಮ್ಮ ವಿರೋಧ ಇದೆ ಅಂತ ಕಿಡಿಕಾರಿದ್ದಾರೆ.ಇದನ್ನೂ ಓದಿ: 32 ವಾಹನ ಬಳಸಿ 4 ನಗರಗಳಲ್ಲಿ ಏಕಕಾಲದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಡಾಕ್ಟರ್ ಗ್ಯಾಂಗ್‌ನಿಂದ ಸಂಚು!

