ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಖೈದಿಗಳ ವಿಲಾಸಿ ಜೀವನದ ವಿಡಿಯೋ ವೈರಲ್ ಆಗಿದ್ದ ಪ್ರಕರಣ ಸಂಬಂಧ ಗ್ಯಾಂಗ್‌ನ್ನು ಪೊಲೀಸರು ಪತ್ತೆ ಹಚ್ಚಿದ್ದು, ನಾಲ್ವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಖೈದಿಗಳನ್ನು ಕಾರ್ತಿಕ್ @ ಚಿಟ್ಟೆ, ಧನಂಜಯ್, ಮಂಜುನಾಥ್ @ ಕೋಳಿ ಮಂಜ ಹಾಗೂ ಚರಣ್ ರಾವ್ ಎಂದು ಗುರುತಿಸಲಾಗಿದ್ದು, ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು ಕಂಟಪೂರ್ತಿ ಕುಡಿದು, ಕುಣಿದು ಕುಪ್ಪಳಿಸಿದ್ದ ವಿಡಿಯೋ ವೈರಲ್ ಆಗಿತ್ತು.ಇದನ್ನೂ ಓದಿ: `ಕೊರಗಜ್ಜ’ ಸಿನಿಮಾದ ವರ್ಣರಂಜಿತ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕರಾವಳಿ
ಎಫ್‌ಐಆರ್ ದಾಖಲಾಗುತ್ತಿದ್ದಂತೆ ಖೈದಿಗಳ ಎಣ್ಣೆ ಪಾರ್ಟಿಯ ಬಾಟಲ್, ಗ್ಲಾಸ್‌ಗಳನ್ನ ಪರಪ್ಪನ ಅಗ್ರಹಾರ ಪೊಲೀಸರು ಎಫ್‌ಎಸ್‌ಎಲ್‌ಗೆ ಕಳಿಸಿದ್ದಾರೆ. ಈ ಮೂಲಕ ಎಣ್ಣೆ ಹೊರಗಡೆಯಿಂದ ತರಿಸಲಾಗಿತ್ತಾ? ಅಥವಾ ಒಳಗಡೆ ಕೆಮಿಕಲ್ ಬಳಸಿ ತಯಾರಿಸಲಾಗಿತ್ತಾ? ಎನ್ನುವುದನ್ನು ಪತ್ತೆ ಹಚ್ಚಲಿದ್ದಾರೆ.
ಜೈಲಿನ ಬ್ಯಾರಕ್ ನಂ.8ರಲ್ಲಿ ರೂಮ್ ನಂಬರ್ 7ರಲ್ಲಿ ನಿಷೇಧಿತ ವಸ್ತುಗಳನ್ನ ಇಟ್ಟುಕೊಂಡು ಡ್ಯಾನ್ಸ್ ಮಾಡಿರುತ್ತಾರೆ. ಮೊಬೈಲ್ ಎಲ್ಲಿಂದ ಬಂತು? ವಿಡಿಯೋ ಚಿತ್ರೀಕರಿಸಿದವರು ಯಾರು? ವಿಡಿಯೋ ವೈರಲ್ ಹೇಗೆ ಆಯ್ತು? ಅನ್ನೋದನ್ನ ಪತ್ತೆ ಹಚ್ಚಲು ನಾಲ್ವರು ಬಂಧಿತ ವಿಚಾರಣಾ ಖೈದಿಗಳನ್ನು ತನಿಖೆಗೆ ಒಳಪಡಿಸಿದ್ದಾರೆ.ಇದನ್ನೂ ಓದಿ: ಬೆಂಗಳೂರು | ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಆತ್ಮಹತ್ಯೆ

