ಹೈದ್ರಾಬಾದ್‌ನಲ್ಲಿ ನಡೆದ ದಿ ಗರ್ಲ್ಫ್ರೆಂಡ್ ಚಿತ್ರದ ಸಕ್ಸಸ್‌ಮೀಟ್ ಸುದ್ದಿಗೋಷ್ಠಿಗೆ ಅತಿಥಿಯಾಗಿ ವಿಜಯ್ ದೇವರಕೊಂಡ ಆಗಮಿಸಿದ್ದರು. ಈ ವೇಳೆ ರಶ್ಮಿಕಾರನ್ನ ವಿಜಯ್ ಹಾಡಿ ಹೊಗಳಿದ್ದಾರೆ. ರಶ್ಮಿಕಾ ನಿಜಜೀವನದಲ್ಲೂ ಗರ್ಲ್ಫ್ರೆಂಡ್ ಚಿತ್ರದ ನಾಯಕಿ ಪಾತ್ರದ ರೀತಿಯ ಹುಡುಗಿ. ನಾವೆಲ್ಲಾ ತೊಂದರೆ ಕೊಡುವವರ ವಿರುದ್ಧ ತಿರುಗಿ ಬಿದ್ರೆ ರಶ್ಮಿಕಾ ಸಹಿಸಿಕೊಂಡು ತಮ್ಮ ಕೆಲಸದಲ್ಲಿ ತಲ್ಲೀನರಾಗುತ್ತಾರೆ ಎಂದಿದ್ದಾರೆ. ಮದುವೆ ವಿಚಾರ ಅಧಿಕೃತ ಘೋಷಣೆ ಮಾಡದಿದ್ದರೂ ಇಬ್ಬರ ನಡವಳಿಕೆ ಎಲ್ಲವನ್ನೂ ಹೇಳಿದೆ.ಇದನ್ನೂ ಓದಿ: `Iʼll Marry Vijay’ – ಮದುವೆ ವದಂತಿಗೆ ರಶ್ಮಿಕಾ ಫುಲ್‌ಸ್ಟಾಪ್ – ಫಸ್ಟ್ ರಿಯಾಕ್ಷನ್ ಏನು?
ಫೆಬ್ರವರಿ 26ಕ್ಕೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆಯಾಗುತ್ತಿದ್ದು, ಈಗಾಗಲೇ ರಹಸ್ಯವಾಗಿ ನಿಶ್ಚಿತಾರ್ಥ ನಡೆದಿದೆ. ಗೀತ ಗೋವಿಂದಂ ಹಾಗೂ ಡಿಯರ್ ಕಾಂಬ್ರೆಡ್ ಚಿತ್ರದಲ್ಲಿ ವಿಜಯ್ ರಶ್ಮಿಕಾ ಜಂಟಿಯಾಗಿ ನಟಿಸಿದ್ದರು. ಗೀತ ಗೋವಿಂದಂ ಸಿನಿಮಾ ಚಿತ್ರೀಕರಣದ ವೇಳೆಯೇ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನಲಾಗುತ್ತಿದ್ದು, ಏಳು ವರ್ಷದಿಂದ ಪ್ರೀತಿಸುತ್ತಿರುವ ಈ ಜೋಡಿ ಮುಂದಿನ ವರ್ಷ ಮದುವೆಯಾಗುತ್ತಿದೆ.
ಇದೀಗ ಚಿತ್ರತಂಡಕ್ಕೆ ಸಂಬಂಧವಿಲ್ಲದಿದ್ದರೂ ಚಿತ್ರದ ನಾಯಕಿ ಜೊತೆ ಸಂಬಂಧವಿದೆ ಅನ್ನೋ ಕಾರಣಕ್ಕೆ ವಿಜಯ್ ದಿ ಗರ್ಲ್ಫ್ರೆಂಡ್ ಚಿತ್ರದ ಸಕ್ಸಸ್‌ಮೀಟ್‌ಗೆ ಆಗಮಿಸಿ, ಪರೋಕ್ಷವಾಗಿ ರಶ್ಮಿಕಾ ಜೊತೆಗಾರ ಅನ್ನೋದನ್ನ ವಿಜಯ್ ತೋರಿಸಿಕೊಟ್ಟಿದ್ದಾರೆ. ಪ್ರತ್ಯಕ್ಷವಾಗಿಯೇ ಮುತ್ತಿಟ್ಟು ರಶ್ಮಿಕಾ ನನ್ನಾಕೆ ಅನ್ನೋದನ್ನ ವಿಜಯ್ ದೇವರಕೊಂಡ ನಡವಳಿಕೆಯಲ್ಲೇ ತೋರಿಸಿಕೊಟ್ಟಿದ್ದಾರೆ.ಇದನ್ನೂ ಓದಿ: ಉದಯಪುರದ ಅರಮನೆಯಲ್ಲಿ ಫೆ.26ಕ್ಕೆ ರಶ್ಮಿಕಾ-ವಿಜಯ್ ಕಲ್ಯಾಣ?

