ನವದೆಹಲಿ: ದೆಹಲಿಯ ಕೆಂಪು ಕೋಟೆ (Delhi Red Fort) ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಕುರಿತು ಮೂರನೇ ದಿನವಾದ ಇಂದು ಮಹತ್ವದ ಬೆಳವಣಿಗೆಗಳು ನಡೆದಿವೆ. ಸುಮಾರು 200 ಕಡೆ ಸರ್ಚಿಂಗ್ ಆಪರೇಷನ್ ನಡೆಸಿದ ಉನ್ನತ ತನಿಖಾ ಏಜೆನ್ಸಿಗಳು ಮಹತ್ವದ ಸಾಕ್ಷ್ಯಗಳನ್ನ ಕಲೆಹಾಕಿವೆ. ಸ್ಫೋಟದ ರುವಾರಿ ಉಗ್ರ ಡಾ.ಉಮರ್ ಮೊಹಮ್ಮದ್‌ನ 2ನೇ ಕಾರು ಫರಿದಾಬಾದ್‌ನ ಗ್ರಾಮವೊಂದರಲ್ಲಿ ಪತ್ತೆಯಾಗಿದೆ.
Red Ford EcoSport, with number plate DL10CK0458, linked to prime suspect of Delhi blast Dr Umar has been found in a Haryana village https://t.co/flUmoiipxB pic.twitter.com/yB7bLyuZjB
— Sidhant Sibal (@sidhant) November 12, 2025
ಫರಿದಾಬಾದ್ ಪೊಲೀಸರು (Faridabad Police) ಖಂಡವಾಲಿ ಗ್ರಾಮದ ಬಳಿ ರೆಡ್ ಫೋರ್ಡ್ ಇಕೋ ಸ್ಪೋರ್ಟ್ (Eco Sport) ಕಾರನ್ನ (DL10CK0458) ವಶಕ್ಕೆ ಪಡೆದಿದ್ದಾರೆ. ದೆಹಲಿ ಪೊಲೀಸರ ಅಲರ್ಟ್ ಬೆನ್ನಲ್ಲೇ ಸರ್ಚಿಂಗ್ ಆಪರೇಷನ್ ನಡೆಸಿದ ಫರಿದಾಬಾದ್ ಪೊಲೀಸರು 2ನೇ ಕಾರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆಗಳೊಂದಿಗೆ ನಂಟು; ಈ ಹಿಂದೆ ವಜಾಗೊಂಡಿದ್ದ ಪ್ರೊಫೆಸರ್ ನೇಮಿಸಿಕೊಂಡಿತ್ತು ಅಲ್ ಫಲಾಹ್ ವಿವಿ
ಕಾರು ಪತ್ತೆಯಾಗುತ್ತಿದ್ದಂತೆ ದೆಹಲಿ ಪೊಲೀಸರು ಹಾಗೂ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಎಫ್‌ಎಸ್‌ಎಲ್ ತಜ್ಞರು ಸ್ಥಳಕ್ಕೆ ಬರುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: Delhi Blast | 8 ಮೃತದೇಹಗಳ ಗುರುತು ಪತ್ತೆ – 2 ಶವಗಳು ಉಗ್ರರದ್ದು ಅನ್ನೋ ಶಂಕೆ; ಒಂದು ಶವದ ತಲೆ ಮಿಸ್ಸಿಂಗ್!
ಈ ಕಾರನ್ನು ಉಗ್ರ ಉಮರ್ ಉನ್ ನಬಿ ಅಲಿಯಾಸ್ ಉಮರ್ ಮೊಹಮ್ಮದ್ ಹೆಸರಿನಲ್ಲೇ ಖರೀದಿಸಲಾಗಿತ್ತು. 2017ರ ನವೆಂಬರ್ 22ರಂದು ದೆಹಲಿ ರಾಜೌರಿ ಗಾರ್ಡನ್ ಆರ್‌ಟಿಓನಲ್ಲಿ ನೋಂದಾಯಿಸಲಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: Delhi Blast | ಭೂತಾನ್‌ನಿಂದ ನೇರವಾಗಿ ಆಸ್ಪತ್ರೆಗೆ ಪ್ರಧಾನಿ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿದ ನಮೋ
ನಕಲಿ ವಿಳಾಸ ಬಳಸಿ ಕಾರು ಖರೀದಿ
ಉಗ್ರ ಡಾ. ಉಮರ್ ಕಾರು ಖರೀದಿಸುವಾಗ ನಕಲಿ ವಿಳಾಸ ಬಳಸಿದ್ದಾನೆ. ದಾಖಲೆಗಳಲ್ಲಿ ಈಶಾನ್ಯ ದೆಹಲಿಯಲ್ಲಿರುವ ಮನೆಯ ವಿಳಾಸ ನೀಡಿದ್ದಾನೆ. ನಿನ್ನೆ ತಡರಾತ್ರಿ ಕಾರಿನ ಹೆಸರಿನಲ್ಲಿದ್ದ ವಿಳಾಸದ ಮೇಲೆ ದಾಳಿ ನಡೆಸಿದಾಗ ಇದು ಗೊತ್ತಾಗಿದೆ. ದಾಳಿ ನಡೆದ ಸ್ಥಳದಲ್ಲಿ ಯಾರೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಕಾರನ್ನ ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಲಾಗಿದೆ. ಖಂಡವಾಲಿ ಗ್ರಾಮದಲ್ಲಿ ಕಾರನ್ನ ಯಾರು? ಯಾವಾಗ ಬಿಟ್ಟಿದ್ದಾರೆ? ಎಂಬುದನ್ನ ಪತ್ತೆಹಚ್ಚಲು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.


