-ನವೆಂಬರ್ ಕ್ರಾಂತಿ ಏನಿಲ್ಲ, ಬಿಜೆಪಿಯವರು ವಾಂತಿ ಮಾಡಿಕೊಳ್ತಾರೆ ಅಷ್ಟೇ
-ದೆಹಲಿ ಸ್ಫೋಟ ಕೇಂದ್ರ, ದೆಹಲಿ ಸರ್ಕಾರದ ವೈಫಲ್ಯ
ಬೆಂಗಳೂರು: ಬಿಹಾರ ಚುನಾವಣೆಯಲ್ಲಿ (Bihar Election) ಜನರ ಆದೇಶ ಏನೇ ಬಂದರೂ ಸ್ವೀಕಾರ ಮಾಡ್ತೀವಿ. ಆದರೆ ಬಿಹಾರ ಚುನಾವಣೆಯಲ್ಲಿ ವೋಟ್ ಚೋರಿ ಆಗಿದೆ ಅಂತ ಸಚಿವ ಬೋಸರಾಜು (Bosaraju) ಆರೋಪ ಮಾಡಿದ್ದಾರೆ.
ಬಿಹಾರ ಚುನಾವಣೆ ಎಕ್ಸಿಟ್ ಪೋಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನರ ಅಭಿಪ್ರಾಯ ಏನೇ ಬಂದರು ನಾವು ಒಪ್ಪುತ್ತೇವೆ. ಆದರೆ ಬಿಜೆಪಿ ಅವರು ಇಡೀ ದೇಶದಲ್ಲಿ ವೋಟ್ ಚೋರಿ ಮಾಡ್ತಿದ್ದಾರೆ. ಬಿಹಾರದಲ್ಲೂ ಕೂಡ ಆಗಿದೆ. ಮೋದಿ, ಅಮಿತ್ ಶಾ ವೋಟ್ ಚೋರಿ ಮಾಡೋ ಕೆಲಸ ಮಾಡ್ತಿದ್ದಾರೆ. ಬಿಹಾರ ಫಲಿತಾಂಶ ಏನ್ ಬರುತ್ತೋ ನೋಡೋಣ ಎಂದಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯದ್ದು ಐರನ್ ಲೆಗ್, ಅವರು ಹೋದ ಕಡೆ ಚುನಾವಣೆ ಸೋಲು: ಅಶೋಕ್
ಬಿಹಾರದಲ್ಲಿ ತೇಜಸ್ವಿ ಯಾದವ್ (Tejaswi Yadav) ಸಿಎಂ ಆಗಬೇಕು ಅಂತ ಜನರ ಅಭಿಪ್ರಾಯ ಇದೆ. ಇಡೀ ದೇಶದಲ್ಲಿ ವೋಟ್ ಚೋರಿ ಅಭಿಯಾನ ರಾಹುಲ್ ಗಾಂಧಿ ಮಾಡ್ತಿದ್ದಾರೆ. ಬಿಹಾರದಲ್ಲಿ ಫಲಿತಾಂಶ ಬಂದರೆ ಇದು ಸತ್ಯ ಅಂತ ಗೊತ್ತಾಗುತ್ತದೆ. ಈಗ ಚುನಾವಣಾ ಆಯೋಗ, ಇಡಿ, ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡ್ತಿಲ್ಲ. ಕಾಂಗ್ರೆಸ್ ಇದ್ದಾಗ ಇವೆಲ್ಲ ಸ್ವತಂತ್ರವಾಗಿ ಕೆಲಸ ಮಾಡ್ತಿದ್ದವು. ಯಾವುದೇ ಆರೋಪ ಇರಲಿಲ್ಲ. ಬಿಜೆಪಿ ಬಂದಾಗಿನಿಂದ ಬೇಕಾದರವನ್ನ ಹಾಕಿಕೊಂಡು ಕುತಂತ್ರ ರಾಜಕೀಯ ಮಾಡ್ತಿದ್ದಾರೆ. ವೋಟ್ ಚೋರಿ ಬಗ್ಗೆ ದಾಖಲಾತಿ ಸಿಕ್ಕಿದೆ. ಇದಕ್ಕೆ ಚುನಾವಣೆ ಆಯೋಗ, ಕೇಂದ್ರ ಸರ್ಕಾರ ಉತ್ತರ ಕೊಡಬೇಕು. ಆದರೆ ಇಬ್ಬರು ಉತ್ತರ ಕೊಡದೇ ಜವಾಬ್ದಾರಿಯಿಂದ ತಪ್ಪಿಸಿಕೊಳ್ತಿದ್ದಾರೆ. ನಾವು ಜನರ ಮುಂದೆ ಇಡ್ತಾ ಇದ್ದೇವೆ. ಏನ್ ಆಗುತ್ತೋ ನೋಡೋಣ ಎಂದು ಹೇಳಿದ್ದಾರೆ.
ಇದೇ ವೇಳೆ ದೆಹಲಿ ಬಾಂಬ್ ಸ್ಫೋಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಕಾಂಗ್ರೆಸ್ ಮೇಲೆ ಆರೋಪ ಮಾಡೋದು ಬೇಡ. ದೆಹಲಿ ಬಾಂಬ್ ಸ್ಫೋಟ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳ ವೈಫಲ್ಯ. ಘಟನೆ ಯಾಕೆ ಆಯ್ತು? ಏನ್ ಆಯ್ತು? ಅಂತ ಅವರು ಪರಿಶೀಲನೆ ಮಾಡಲಿ. ಕೇಂದ್ರದ ಇಂಟೆಲಿಜೆನ್ಸ್ ಸಂಪೂರ್ಣವಾಗಿ ಫೇಲ್ ಆಗಿದೆ. ಇದು 100% ಕೇಂದ್ರ, ದೆಹಲಿ ಸರ್ಕಾರದ ವೈಫಲ್ಯ. ಕೇಂದ್ರ ಸರ್ಕಾರವೇ ಜವಾಬ್ದಾರಿ ಹೊರಬೇಕು. ದೇಶದಲ್ಲಿ ಎಲ್ಲಿಯೂ ಇಂತಹ ಘಟನೆ ಆಗಬಾರದು. ಇಂತಹ ಘಟನೆ ಆಗದಂತೆ ಕೇಂದ್ರ ಸರ್ಕಾರ ಎಚ್ಚರವಹಿಸಬೇಕು ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಇನ್ನೂ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆ ಇಟ್ಟಿರೋ ಕಾಂಗ್ರೆಸ್ ಶಾಸಕ ರಾಜುಕಾಗೆ ಹೇಳಿಕೆ ಬಗ್ಗೆ ಮಾತನಾಡಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಹಿಂದೆ ಉಮೇಶ್ ಕತ್ತಿ ಅವರು ಕೂಡಾ ಮಂತ್ರಿ ಆಗಿದ್ದಾಗ ಪ್ರತ್ಯೇಕದ ಬಗ್ಗೆ ಮಾತಾಡಿದ್ದರು. ಹೀಗೆ ವೈಯಕ್ತಿಕ ಅಭಿಪ್ರಾಯಗಳನ್ನ ಅನೇಕರು ವ್ಯಕ್ತಪಡಿಸುತ್ತಾರೆ. ಅವರ ಭಾಗಕ್ಕೆ ತಾರತಮ್ಯ ಆಗಿದೆ ಅನ್ನೋ ಉದ್ದೇಶಕ್ಕೆ ಇಂತಹ ಮಾತು ಬರುತ್ತವೆ. ಕಲ್ಯಾಣ ಕರ್ನಾಟಕ ಭಾಗದಲ್ಲೂ ಇಂತಹ ಕೂಗು ಕೇಳಿ ಬಂದಿತ್ತು. ಅದಕ್ಕಾಗಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಅವರ ಯುಪಿಎ ಸರ್ಕಾರ 371ರಿ ಜಾರಿ ಮಾಡಿದ್ದರು. ಹೀಗೆ ಏನಾದರೂ ಲೋಪ ಇದ್ದರೆ ಸರಿ ಮಾಡೋ ಕೆಲಸ ಸರ್ಕಾರ ಮಾಡಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿ ದೀಪಾವಳಿ ಪಟಾಕಿ ಸಿಡಿದಂತೆ ದೇಶದಲ್ಲಿ ಬಾಂಬ್ ಸ್ಫೋಟ ಆಗ್ತಿತ್ತು: ಅರಗ ಜ್ಞಾನೇಂದ್ರ
ಸಿಎಂ ದೆಹಲಿ ಪ್ರವಾಸ, ನವೆಂಬರ್ ಕ್ರಾಂತಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ಪುಸ್ತಕ ಬಿಡುಗಡಗೆ ದೆಹಲಿಗೆ ಹೋಗ್ತಿದ್ದಾರೆ. ರಾಹುಲ್ ಟೈಂ ಕೊಟ್ಟರೆ ಭೇಟಿಯಾಗೋದಾಗಿ ಸಿಎಂ ಹೇಳಿದ್ದಾರೆ. ಸಮಯ ಸಿಕ್ಕರೆ ಸಹಜವಾಗಿ ಕ್ಯಾಬಿನೆಟ್ ಪುನರ್ ರಚನೆ ಬಗ್ಗೆ ಮಾತಾಡ್ತಾರೆ. ದೆಹಲಿಗೆ ಹೋದ್ರೆ ಹೈಕಮಾಂಡ್ ಭೇಟಿಯಾಗೋದು ಸಹಜ ಎಂದಿದ್ದಾರೆ.
ಸತೀಶ್ ಜಾರಕಿಹೊಳಿ ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸತೀಶ್ ಜಾರಕಿಹೊಳಿ ಇಲಾಖೆ ಕೆಲಸಕ್ಕೆ ದೆಹಲಿಗೆ ಹೋಗಿದ್ದಾರೆ. ಹಾಗೇ ಹೈಕಮಾಂಡ್ ಅವರನ್ನ ಭೇಟಿಯಾಗಿದ್ದಾರೆ ಅಷ್ಟೆ. ಅದೊಂದು ಸಹಜ ಭೇಟಿ. ಅದು ರಾಜಕೀಯ ಭೇಟಿಯಲ್ಲ. ಬಿಜೆಪಿ ಅವರು ಹೇಳಿದಂತೆ ಯಾವುದೇ ಕ್ರಾಂತಿ ಇಲ್ಲ. ಬ್ರಾಂತಿಯೂ ಇಲ್ಲ. ಕೊನೆದಾಗಿ ಬಿಜೆಪಿ ಅವರು ವಾಂತಿ ಮಾಡಿಕೊಳ್ತಾರೆ ಅಷ್ಟೆ. ಸೆಪ್ಟೆಂಬರ್, ನವೆಂಬರ್ ಕ್ರಾಂತಿ ಅಂದಿದ್ದು ಅಶೋಕ್, ವಿಜಯೇಂದ್ರ ಹೇಳಿಕೊಟ್ಟಿದ್ದರು. ಅವರು ಹೇಳಿದಂತೆ ಸಿಎಂ ಬದಲಾವಣೆ ಆಗಿಲ್ಲ. ಅಶೋಕ್, ವಿಜಯೇಂದ್ರ ಅವರ ಸ್ಥಾನ ಬದಲಾವಣೆ ಆಗ್ತಿದೆ ಅಷ್ಟೆ. ಬಿಜೆಪಿಯಲ್ಲಿ ಅಶೋಕ್, ವಿಜಯೇಂದ್ರ ಇಬ್ಬರ ಸ್ಥಾನ ಬದಲಾವಣೆ ಅಂತ ಚರ್ಚೆ ಆಗ್ತಿದೆ. ಅವರು ಬದಲಾವಣೆ ಆದ್ರೆ ಅವರಿಗೆ ವಾಂತಿ ಬರುತ್ತೆ ಅಷ್ಟೆ. ಮೊದಲು ಬಿಜೆಪಿಯವರು ಅವರ ಕುರ್ಚಿ ನೋಡಿಕೊಳ್ಳಲಿ. ನಮ್ಮ ಬಗ್ಗೆ ಯಾಕೆ ಮಾತಾಡ್ತಾರೆ ಅಂತ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜನರು ನಮ್ಮ ಸರ್ಕಾರದಿಂದ ಖುಷಿಯಾಗಿದ್ದಾರೆ. ಅಭಿವೃದ್ಧಿ ಕೆಲಸಗಳು ಆಗ್ತಿದೆ. ಕಬ್ಬು ಸಮಸ್ಯೆಯನ್ನು ಸಿಎಂ ಸರಿ ಮಾಡಿದ್ದಾರೆ. ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಯಾವುದೇ ಕ್ರಾಂತಿ ಇಲ್ಲ ಎಂದಿದ್ದಾರೆ.ಇದನ್ನೂ ಓದಿ: ಬೆಂಗಳೂರಿಂದಲೇ ಐಪಿಎಲ್ ಎತ್ತಂಗಡಿ- ಪುಣೆಯಲ್ಲಿ ಆರ್‌ಸಿಬಿ ಮ್ಯಾಚ್!

