ಬಾಗಲಕೋಟೆ: ಕಬ್ಬು ಬೆಳೆಗೆ ಆಗ್ರಹಿಸಿ ಮುಧೋಳ ಭಾಗದ ಕಬ್ಬು ಬೆಳೆದ ರೈತರು ನಡೆಸುತ್ತಿರುವ ಹೋರಾಟ (Sugarcane Growers’ Protest) ಈಗ ಉಗ್ರಸ್ವರೂಪವನ್ನು ಪಡೆದುಕೊಂಡಿದೆ.
ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆಯುತ್ತಿದ್ದ ಹೋರಾಟ ತಾಲೂಕಿನ ಪ್ರತೀ ಹಳ್ಳಿ ಹಳ್ಳಿಗೂ (Village) ವ್ಯಾಪಿಸಿದೆ. ಬೇರೆ ಬೇರೆ ಊರುಗಳಿಗೆ ಸಂಪರ್ಕ ಕಲ್ಪಿಸುವ ತಾಲೂಕು ರಸ್ತೆ, ಜಿಲ್ಲಾ ರಸ್ತೆ, ರಾಜ್ಯ ಹೆದ್ದಾರಿ ರಸ್ತೆಗಳನ್ನು ಬಂದ್ ಮಾಡಿ ರೈತರು ಕಬ್ಬಿನ ಬೆಲೆಗಾಗಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಇದನ್ನೂ ಓದಿ: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಮಾಯಗಾತಿ – ಲಾಡ್ಜ್‌ಗೆ ಹೋಗಿ ಹಣ, ಚಿನ್ನ ಕಳೆದುಕೊಂಡ ಯುವಕ!
ಮುಧೋಳ (Mudhol) ತಾಲೂಕಿನ ಕಸಬಾ ಜಂಬಗಿ ಕ್ರಾಸ್ ನಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿದ ರೈತರು, ರಸ್ತೆಯಲ್ಲಿ ಅಡುಗೆ ಮಾಡಿ, ಉಪಹಾರ ಮಾಡುವ ಮೂಲಕ ನಮ್ಮ ಬದುಕು ಬೀದಿಗೆ ಬಂದಿದೆ ಎಂದು ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತ ಪಡಿಸ್ತಿದ್ದಾರೆ.
ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ರೈತರು ಟನ್ ಕಬ್ಬಿಗೆ 3500 ರೂ. ಸಿಗೋವರೆಗೂ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.


