ಬಳ್ಳಾರಿ: ವಿದ್ಯುತ್ ಪರಿವರ್ತಕವೊಂದು (Transformer) ಶಾಲಾ ಕಾಂಪೌಂಡ್‌ಗೆ (School Compund) ಹೊಂದಿಕೊಂಡ ಪರಿಣಾಮ ಸರ್ಕಾರಿ ಶಾಲೆಯ ನೂರಾರು ವಿದ್ಯಾರ್ಥಿಗಳ ಜೀವ ಅಪಾಯದಲ್ಲಿದೆ.
ಬಳ್ಳಾರಿ ಜಿಲ್ಲೆಯ ಗಡಿ ಗ್ರಾಮದ ಕೆ ವೀರಾಪುರದ ಸರ್ಕಾರಿ ಶಾಲೆ (Government School) ಹಾಗೂ ಅಂಗನವಾಡಿ ಕೇಂದ್ರದ ಗೋಡೆಗೆ ಹೊಂದಿಕೊಂಡ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಪಕ್ಕದಲ್ಲೇ ಸರ್ಕಾರಿ ಶಾಲೆಯ ಮುಖ್ಯ ಗೇಟ್ ಇದೆ. ಅಲ್ಲದೇ ಅದರ ಮತ್ತೊಂದು ಬದಿಯಲ್ಲಿ ಅಂಗನವಾಡಿ ಕೇಂದ್ರವೂ ಇದೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಅಣ್ಣ-ತಂಗಿ? – ನವದಂಪತಿಗೆ ಮನೆಯವರಿಂದ ಶಾಕ್!
ಈಗಾಗಲೇ ಟಿಸಿ ಮೇಲ್ಭಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಗಾಳಿ ಮಳೆಗೆ ವಿದ್ಯುತ್ ತಂತಿ ತುಂಡಾಗುವ ಆಗುವ ಭೀತಿ ಎದುರಾಗಿದೆ. ಅನಾಹುತದ ಅರಿವಿದ್ದರೂ ಜೆಸ್ಕಾಂ ಅಧಿಕಾರಿಗಳು ಗಪ್ ಚುಪ್ ಆಗಿರೋದ್ರಿಂದ ವಿದ್ಯಾರ್ಥಿಗಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಇಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬೇರೆಡೆ ಶಿಪ್ಟ್ ಮಾಡುವ ಮೂಲಕ ವಿದ್ಯಾರ್ಥಿಗಳ ಜೀವ ಉಳಿಸಬೇಕು ಅಂತಾ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

