ನವದೆಹಲಿ: ರಾಜಧಾನಿಯ ಕೆಂಪು ಕೋಟೆಯ (RedFort) ಬಳಿ ಐ20 ಕಾರು ಸ್ಫೋಟಗೊಂಡ (Car Blast) ದೃಶ್ಯಗಳು ಲಭ್ಯವಾಗಿದೆ. ನಿಧಾನವಾಗಿ ಚಲಿಸುತ್ತಿದ್ದ ಕಾರು ಒಮ್ಮಿಂದೊಮ್ಮೆಗೆ ಸ್ಫೋಟಗೊಂಡಿದೆ.
ಘಟನೆಯ 15 ಸೆಕೆಂಡುಗಳ ಕ್ಲಿಪ್ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಜನದಟ್ಟಣೆಯ ಪ್ರದೇಶವನ್ನು ತೋರಿಸುತ್ತದೆ. ಡಜನ್ಗಟ್ಟಲೆ ವಾಹನಗಳು ನಿಧಾನವಾಗಿ ಚಲಿಸುತಿದ್ದವು.
ಸೋಮವಾರ ಸಂಜೆ 6:50 ಕ್ಕೆ ಸ್ಫೋಟಕ ತುಂಬಿದ ಐ20 ಕಾರು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕೂಡಲೇ ಸಿಸಿಟಿವಿ ಕ್ಯಾಮೆರಾಗಳು (CCTV Camera) ಆಫ್ ಆಗಿದೆ.
ದೆಹಲಿ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ. ಆರಂಭದಲ್ಲಿ 9 ಮಂದಿ ಮೃತಪಟ್ಟಿದ್ದರು. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಾಯಗೊಂಡವರ ಪೈಕಿ 4 ಮಂದಿ ಮೃತಪಟ್ಟಿದ್ದು ಇಲ್ಲಿಯವರೆಗೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

