ಬೆಂಗಳೂರು: ವಸತಿ ಕಟ್ಟಡಗಳಿಗೆ ಸ್ವಾಧೀನ ಪ್ರಮಾಣಪತ್ರ (OC) ಹಾಗೂ ನಿರ್ಮಾಣ ಮುಕ್ತಾಯ ಪ್ರಮಾಣಪತ್ರ (CC) ಸಿಗದ ಕಾರಣ ಲಕ್ಷಾಂತರ ಜನರಿಗೆ ಸಮಸ್ಯೆಯಾಗಿತ್ತು. ಕೊನೆಗೆ ಸರ್ಕಾರ 30*40 ಚದರ ಅಡಿ ನಿವೇಶನದಲ್ಲಿ ಕಟ್ಟಿದ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡಿತ್ತು. ಆದರೆ ಒಂದು ಕಾರಣದಿಂದ ಇನ್ನೂ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ (Electricity Connection) ನೀಡಲು ಸಾಧ್ಯವಾಗುತ್ತಿಲ್ಲ.
ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿದ್ದರೂ ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲಲ್ಲಿತ್ತು. ಜನರ ಹಾಗೂ ವಿದ್ಯುತ್ ಗುತ್ತಿಗೆದಾರರ ಬೇಡಿಕೆ ಒತ್ತಾಯಕ್ಕೆ ಸರ್ಕಾರ 30*40 ನಿವೇಶನದಲ್ಲಿನ ಕಟ್ಟಡಗಳಿಗೆ ಒಸಿ ಕಡ್ಡಾಯವಲ್ಲ ಎನ್ನುವ ನಿರ್ಧಾರಕ್ಕೆ ಬಂತು. ಜೊತೆಗೆ ಜಿ ಪ್ಲಸ್ ಟು ಫ್ಲೋರ್ ಮೀರದಂತೆ ಹಾಗೂ ಸ್ಟಿಲ್ಟ್ ಪ್ಲಸ್ ಮೂರು ಅಂತಸ್ತಿಗೆ ಅವಕಾಶ ನೀಡಲಾಗಿದೆ. ಅದರೂ ಸಾವಿರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗುತ್ತಿಲ್ಲ. ಸ್ಟಿಲ್ಟ್ ಅಂದರೆ ಗ್ರೌಂಡ್ ಅಲ್ಲಿ ಸಂಪೂರ್ಣ ಪಾರ್ಕಿಂಗ್ ಬಿಡದೇ ರೂಮ್ ಹಾಗೂ ಮೂರನೇ ಫ್ಲೋರ್ ಮೇಲೆ ರೂಂ ಅಥವಾ ಟಾಯ್ಲೆಟ್ ನಿರ್ಮಿಸಿದ್ದರಿಂದ ವಿದ್ಯುತ್ ಸಂಪರ್ಕಕ್ಕೆ ತೊಡಕಾಗುತ್ತಿದೆ. ಇದನ್ನೂ ಓದಿ: ಬಂಧಿತ ಉಗ್ರ, ವೈದ್ಯ ಆದಿಲ್‌ಗೆ ಸಿಗುತ್ತಿತ್ತು ತಿಂಗಳಿಗೆ 5 ಲಕ್ಷ ರೂ. ಸಂಬಳ!
30*40 ವಿಸ್ತೀರ್ಣದ ಕಟ್ಟಡಗಳಿಗೆ ವಿನಾಯಿತಿ ಸಿಕ್ಕಿದರೂ ನಿವಾಸಿಗಳು ಈಗ ಅಡಕತ್ತರಿಯಲ್ಲಿ ನಿವಾಸಿಗಳು ಸಿಲುಕಿದ್ದಾರೆ. ಸಾವಿರಾರು ಕಟ್ಟಡಗಳಲ್ಲಿ ಇದೆ ಸಮಸ್ಯೆ ಅಂತಿದ್ದಾರೆ ವಿದ್ಯುತ್ ಗುತ್ತಿಗೆದಾರರು. ಒಟ್ಟು ಮೂರು ಅಂತಸ್ತಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ. ಮೂರು ಅಂತಸ್ತು ಮೀರಿ ಒಂದು ಸಣ್ಣ ಬಾತ್ ರೂಂ, ಸ್ಟೋರ್ ರೂಂ ಕಟ್ಟಿದರೂ ಅನುಮತಿ ಸಿಗುತ್ತಿಲ್ಲ. ಈ ರೀತಿಯ ಕಟ್ಟಡಗಳನ್ನು ಪರಿಗಣಿಸುವಂತೆ ಗುತ್ತಿಗೆದಾರರು ಒತ್ತಾಯ ಮಾಡ್ತಿದ್ದಾರೆ. ಇದನ್ನೂ ಓದಿ: ಕಾಲೇಜಿನಲ್ಲಿ ಟಾಪರ್, ಪತಿಗೆ ತಲಾಖ್, ಪ್ರೊಫೆಸರ್ ಹುದ್ದೆಗೆ ಚಕ್ಕರ್ – ಟೆರರ್ ಡಾಕ್ಟರ್ ಶಾಹೀನ್ ಬದುಕೇ ನಿಗೂಢ ರಹಸ್ಯ

