ನವದೆಹಲಿ: ಕೆಂಪುಕೋಟೆ ಬಳಿ ಕಾರ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಶಂಕಿತರ ಹಿನ್ನೆಲೆ ಜಾಲಾಡುವ ವೇಳೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಭಾರತದಲ್ಲಿ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮಹಿಳಾ ವಿಭಾಗ ಸ್ಥಾಪನೆಯ ಹೊಣೆ ಹೊತ್ತಿದ್ದ ವೈದ್ಯೆ ಶಾಹೀನ್ ಶಾಹಿದ್(46) ಬದುಕೇ ನಿಗೂಢ ರಹಸ್ಯವಾಗಿ ಉಳಿದಿದೆ.
ಹೌದು. ಹರಿಯಾಣದ ಫರಿದಾಬಾದ್‌ನಲ್ಲಿ(Faridabad) ಬೃಹತ್ ಸ್ಫೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಲಕ್ನೋದ ಕೈಸರ್‌ಬಾಗ್ ನಿವಾಸಿಯಾದ ಶಾಹೀನ್‌ಳನ್ನು (Dr Shaheen Shahid) ಬಂಧಿಸಲಾಗಿದೆ. ರಷ್ಯಾದ ಅಸಾಲ್ಟ್ ರೈಫಲ್ ಮತ್ತು ಲೈವ್ ಕಾರ್ಟ್ರಿಜ್‌ಗಳನ್ನು ವಶಪಡಿಸಿಕೊಂಡ ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಲಕ್ನೋ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಓದಿದ್ದ ಶಾಹೀನ್ ಶಾಹಿದ್ 10 ಮತ್ತು 12 ನೇ ತರಗತಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಳು. ಉತ್ತರ ಪ್ರದೇಶದ (Uttar Pradesh) ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಶಾಹೀನ್ ಪ್ರಯಾಗ್‌ರಾಜ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದಿದ್ದಾಳೆ. ಇದನ್ನೂ ಓದಿ: ನನ್ನ ಮಗಳು ಇಂತಹ ಕೃತ್ಯದಲ್ಲಿ ತೊಡಗಿದ್ದಾಳೆ ಅಂತ ನಂಬೋಕಾಗ್ತಿಲ್ಲ: ಸ್ಫೋಟಕ ಸಾಗಣೆಯಲ್ಲಿ ಅರೆಸ್ಟ್ ಆದ ಪುತ್ರಿ ಬಗ್ಗೆ ತಂದೆ ಪ್ರತಿಕ್ರಿಯೆ
ಮದುವೆಯಾದ ನಂತರ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿರುತ್ತದೆ. ಹೀಗಾಗಿ ಪತಿಗೆ 2015 ರಲ್ಲಿ ತಲಾಖ್ ನೀಡಿ ಲಕ್ನೋದಲ್ಲಿ ಶಾಹೀನ್ ವಾಸಿಸುತ್ತಿದ್ದಳು. ಪತಿಗೆ ವಿಚ್ಚೇದನ ನೀಡಿದ ಬಳಿಕ ಉಗ್ರ ಮುಜಮ್ಮಿಲ್ ಜೊತೆ ನಂಟು ಬೆಳೆಸಿದ್ದಾಳೆ. ಇದನ್ನೂ ಓದಿ: ದೆಹಲಿ ಸ್ಫೋಟಕ್ಕೆ ಛಿದ್ರಗೊಂಡ ಕುಟುಂಬಗಳ ಕನಸು – ಸಂತ್ರಸ್ತರ ಮನೆಯ ಕಣ್ಣೀರ ಕತೆ
ಜಿಎಸ್‌ವಿಎಂ ತೊರೆದ ಬಳಿಕ ಶಾಹೀನ್ ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಬೆಳೆಸಿ ಅಲ್ಲಿ ಮುಜಮ್ಮಿಲ್‌ನನ್ನು ಭೇಟಿಯಾಗಿದ್ದಾಳೆ. ಶಾಹೀನ್ ಜೈಶ್ ಮಹಿಳಾ ವಿಂಗ್‌ಗೆ ಭಾರತದ ನಾಯಕಿಯಾಗಿದ್ದು, ಜೆಇಎಂ ಸಂಸ್ಥಾಪಕ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಇಎಂನ ಮಹಿಳಾ ವಿಭಾಗವಾದ ಜಮಾತ್ ಉಲ್-ಮೊಮಿನಾತ್‌ನ ಕಮಾಂಡ್ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಳು.

