– ಯಾದಗಿರಿಯ ನಾರಾಯಣಪುರ ಡ್ಯಾಂಗೂ ಖಾಕಿ ಕಟ್ಟೆಚ್ಚರ
ಕೊಪ್ಪಳ: ದೆಹಲಿಯ (Delhi) ಕೆಂಪುಕೋಟೆಯ (Redfort Blast) ಬಳಿ ಕಾರು ಬ್ಲಾಸ್ಟ್ ಬೆನ್ನಲ್ಲೇ ರಾಜ್ಯದೆಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆ ಕೊಪ್ಪಳದಲ್ಲಿ (Koppal) ತಪಾಸಣೆ ಮಾಡುವಾಗ ಜಾರ್ಖಂಡ್ ಮೂಲದ ಎಂಟು ಕಾರ್ಮಿಕರ ಗುಂಪಿನಲ್ಲಿ ಗಾಂಜಾ ಪತ್ತೆಯಾಗಿದೆ.
ಕೊಪ್ಪಳ ಬಸ್ ನಿಲ್ದಾಣದಲ್ಲಿ ಪೊಲೀಸ್ ಶ್ವಾನ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಈ ವೇಳೆ ಯಲಬುರ್ಗಾದಲ್ಲಿ ಕಟ್ಟಡವೊಂದರ ಕೆಲಸಕ್ಕೆ ಬಂದಿದ್ದ ಜಾರ್ಖಂಡ್ ಮೂಲದ ಕಾರ್ಮಿಕರ ಬಳಿ ಗಾಂಜಾ ಪತ್ತೆಯಾಗಿದೆ. ಶ್ವಾನ ಬಿಂದು ತಪಾಸಣೆ ವೇಳೆ ಈ ಬ್ಯಾಗ್ ಬಳಿ ನಿಂತುಬಿಟ್ಟಿತ್ತು. ಆಗ ತಪಾಸಣೆ ಮಾಡಿದಾಗ ಬ್ಯಾಗ್‌ನಲ್ಲಿ ಎರಡು ಪ್ಯಾಕೆಟ್ ಗಾಂಜಾ ಪತ್ತೆಯಾಗಿದೆ. ಎಂಟು ಕಾರ್ಮಿಕರ ಪೈಕಿ ಆರು ಜನರ ಬ್ಯಾಗ್‌ನಲ್ಲಿ ಗಾಂಜಾ ಸಿಕ್ಕಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಸದ್ಯ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಇದನ್ನೂ ಓದಿ: ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಹಳೇಕಲ್ಲಳ್ಳಿ ಗ್ರಾಮಸ್ಥರಿಂದ ಹೋರಾಟ – ಡಾಬಾಗೆ ಮುತ್ತಿಗೆ ಹಾಕಿ ಆಕ್ರೋಶ
ಕಾರ್ಮಿಕರು ಅದು ಗಾಂಜಾ ಅಲ್ಲ, ತಂಬಾಕು ಎಂದು ತಿಳಿಸಿದ್ದಾರೆ. ಗಾಂಜಾ ಮಾದರಿಯ ತಂಬಾಕು ಎನ್ನಲಾಗುತ್ತಿದೆ. ಸದ್ಯ ಪೊಲೀಸರು ಮಾದಕ ವಸ್ತುಗಳನ್ನು ಜಪ್ತಿ ಮಾಡಿ, ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂ ಯಾದಗಿರಿಯಲ್ಲಿಯೂ ಪೊಲೀಸರ ಹೈ ಅಲರ್ಟ್ ಘೋಷಿಸಿದ್ದು, ನಾರಾಯಣಪುರ ಡ್ಯಾಂನಲ್ಲಿ ಖಾಕಿ ಕಟ್ಟೆಚ್ಚರ ವಹಿಸಿದೆ. ಈ ಕುರಿತು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ದುರ್ಘಟನೆ ಆಗಿದೆ, ನಮ್ಮ ಕಚೇರಿಯಿಂದ ಅಲರ್ಟ್ ಆಗಿರಲು ಸೂಚಿಸಿದ್ದಾರೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಅಲರ್ಟ್ ಆಗಿ ಇರಲು ಕ್ರಮವಹಿಸಿದ್ದೇವೆ. ಸೂಕ್ಷ್ಮ ಸ್ಥಳವಾದ ನಾರಾಯಣಪುರ ಡ್ಯಾಂಗೆ ಹೆಚ್ಚಿನ ಭದ್ರತೆ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ವಿಜಯಪುರ | KBJNL ಎಡದಂಡೆ ಕಾಲುವೆಯಲ್ಲಿ ಕಾಲುಜಾರಿ ಬಿದ್ದು ಮೂವರು ನೀರುಪಾಲು – ಓರ್ವ ಬಾಲಕನ ಶವ ಪತ್ತೆ

