ಉಡುಪಿ: ದೆಹಲಿಯಲ್ಲಿ ಸ್ಪೋಟ ಸಂಭವಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ದೇಶದ ಗಡಿ ಕರಾವಳಿ ತೀರದಲ್ಲಿ ಕಾವಲು ಪಡೆಯ ಪೊಲೀಸರು ಕಣ್ಗಾವಲು ಇರಿಸಿದ್ದಾರೆ.
9 ಬೋಟುಗಳಲ್ಲಿ ನಿರಂತರ ಪೆಟ್ರೋಲಿಂಗ್ ಮಾಡಲಾಗುತ್ತದೆ. ಮೀನುಗಾರರಿಗೂ ಪ್ರತಿಯೊಂದು ಚಲನವಲದ ಮೇಲೆ ಗಮನ ಇರಿಸುವಂತೆ ಸೂಚಿಸಲಾಗಿದೆ.
ಕರಾವಳಿ ಕಾವಲು ಪಡೆಯ 9 ಬೋಟ್‌ಗಳು 300 ಕಿ.ಮೀ ಆಸುಪಾಸಿನಲ್ಲಿ ಗಸ್ತು ತಿರುಗುತ್ತಿವೆ. ಸಮುದ್ರ ತೀರದಲ್ಲಿ ಪೆಟ್ರೋಲಿಂಗ್ ನಡೆಯುತ್ತಿದೆ. ಮೂರು ಹಂತಗಳಲ್ಲಿ ಸೆಕ್ಯೂರಿಟಿ ಕೊಡಲಾಗಿದೆ. ಮೀನುಗಾರರಿಗೆ ವೈಯರ್‌ಲೆಸ್ ಮೂಲಕ ಸಂದೇಶ ರವಾನೆ ಮಾಡಲಾಗಿದೆ.
ಗುಜರಾತ್, ಮುಂಬೈ, ಮಹಾರಾಷ್ಟç ಗಡಿ ಭಾಗಕ್ಕೆ ಡೀಪ್ ಫಿಶಿಂಗ್ ಮಾಡುತ್ತಿರುವ ಮೀನುಗಾರರಿಗೆ ಸಿಎಸ್‌ಪಿ ಪೊಲೀಸರು ಸಂದೇಶ ರವಾನಿಸಿದ್ದಾರೆ. ಯಾವುದಾದರೂ ಅನುಮಾನಾಸ್ಪದ ಬೋಟ್ ಕಂಡುಬಂದರೆ, ತಕ್ಷಣ ಮಾಹಿತಿ ಕೊಡಬೇಕು. ದಾಖಲೆ ರವಾನಿಸಬೇಕು ಎಂದು ಸೂಚನೆ ಕೊಡಲಾಗಿದೆ.
ಕಾಪು ಮತ್ತು ಮಲ್ಪೆ ಬೀಚ್‌ನಲ್ಲಿ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹೀಗಾಗಿ, ಅಲ್ಲಿಯೂ ಹೈಅಲರ್ಟ್ ಘೋಷಿಸಲಾಗಿದೆ. ಕೋಸ್ಟ್ ಗಾರ್ಡ್ ಪೊಲೀಸರು ಶಸ್ತ್ರಸಜ್ಜಿತವಾಗಿ ಸಮುದ್ರದಲ್ಲಿ ಗುಸ್ತು ತಿರುಗುತ್ತಿದ್ದಾರೆ.

