ಚಿತ್ರದುರ್ಗ: ಐತಿಹಾಸಿಕ ಪ್ರವಾಸಿತಾಣ ಎನಿಸಿರುವ ಚಿತ್ರದುರ್ಗದ ಹಳ್ಳಿಹಳ್ಳಿಗಳಲ್ಲೂ ಅಕ್ರಮ ಮದ್ಯ (Alcohol) ತಾಂಡವವಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಅಕ್ರಮ ಮದ್ಯ ಸೇವಿಸಿ ಜೀವಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾದ ಪರಿಣಾಮ ರೊಚ್ಚಿಗೆದ್ದ ಜನರು, ಅಕ್ರಮ ಮದ್ಯಮಾರಾಟ ಮಾಡುತ್ತಿದ್ದ ಡಾಬಾಗೆ ಮುತ್ತಿಗೆ ಹಾಕಿ ಮದ್ಯವನ್ನೆಲ್ಲಾ ಬೀದಿಗೆಸೆದು ಆಕ್ರೋಶ ಹೊರಹಾಕಿರುವ ಪ್ರಕರಣ ಚಿತ್ರದುರ್ಗ (Chitradurga) ತಾಲೂಕಿನ ಹಲೇಕಲ್ಲಳ್ಳಿ (Hale Kallahalli) ಬಳಿ ಬೆಳಕಿಗೆ ಬಂದಿದೆ.
ಈ ಗ್ರಾಮದ ಸುತ್ತಮುತ್ತಲ ಗ್ರಾಮಗಳಾದ ಕೆಳಗಳಟ್ಟಿ, ಹೊಸಕಲ್ಲಳ್ಳಿ ಮತ್ತು ಜೋಡಿಚಿಕ್ಕೇನಳ್ಳಿ ಸೇರಿದಂತೆ ಎಲ್ಲಾ ಗ್ರಾಮಗಳಲ್ಲೂ ಈ ಹಿಂದೆ, ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿತ್ತು. ರಸ್ತೆಬದಿಯ ಗೂಡಂಗಡಿ ಹಾಗೂ ಕೆಲ ವಾಸದ ಮನೆಗಳಲ್ಲೂ ಎಣ್ಣೆ ವ್ಯಾಪಾರ ನಿರ್ಭಯವಾಗಿ ನಡೆಯುತ್ತಿತ್ತು. ಇದನ್ನೂ ಓದಿ: ವಿಜಯಪುರ | KBJNL ಎಡದಂಡೆ ಕಾಲುವೆಯಲ್ಲಿ ಕಾಲುಜಾರಿ ಬಿದ್ದು ಮೂವರು ನೀರುಪಾಲು – ಓರ್ವ ಬಾಲಕನ ಶವ ಪತ್ತೆ
ಹೀಗಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ವಯೋವೃದ್ಧರವರೆಗೆ ಎಣ್ಣೆಯ ದಾಸರಾದ ಪರಿಣಾಮ, ಕಳೆದ ಮೂರು ತಿಂಗಳಿಂದ ಈವರೆಗೆ ಹಲವು ಸಾವುನೋವುಗಳಾಗಿವೆ. ಇದರಿಂದಾಗಿ ಎಲ್ಲಾ ಗ್ರಾಮಗಳಲ್ಲೂ ಮದ್ಯ ಮಾರಾಟ ಮಾಡದಂತೆ ಗ್ರಾಮಸ್ಥರು ಖಡಕ್ ವಾರ್ನಿಂಗ್ ನೀಡಿದ್ದು, ಮದ್ಯ ಮಾರಾಟವನ್ನು ಈ ಗ್ರಾಮಗಳಲ್ಲಿ ಸಂಪೂರ್ಣ ನಿಷೇಧಿಲಾಗಿದೆ. ಇದನ್ನೂ ಓದಿ: ದೆಹಲಿ ಸ್ಫೋಟ; ಕರ್ನಾಟಕ ಕರಾವಳಿಯಲ್ಲಿ 3 ಬೋಟ್‌ಗಳ ಮೂಲಕ ಕಣ್ಗಾವಲು
ಆದರೆ ಚಿತ್ರದುರ್ಗ ಹಾಗೂ ಚಳ್ಳಕೆರೆ ಮಾರ್ಗದ ಮಧ್ಯೆ ಇರುವ ಖಾಸಗಿ ಡಾಬಾವೊಂದರಲ್ಲಿ ಎಣ್ಣೆ ಮಾರಾಟ ಮಿತಿಮೀರಿದ್ದು, ಅಲ್ಲಿಗೆ ತೆರಳಿ ಇಲ್ಲಿನ ಗ್ರಾಮಸ್ಥರು ಮದ್ಯ ಸೇವಿಸುತ್ತಿದ್ದ ಪರಿಣಾಮ, ಇಂದು ಯುವಕರು ಹಾಗೂ ಮಹಿಳೆಯರ ನೇತೃತ್ವದಲ್ಲಿ ಡಾಬಾಗೆ ಮುತ್ತಿಗೆ ಹಾಕಿ, ಡಾಬಾದಲ್ಲಿ ಮಾರಲು ತಂದಿದ್ದ ಮದ್ಯವನ್ನು ಬೀದಿಗೆಸೆದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಶಾಲೆಯ ಬಾತ್ರೂಮ್‌ನಲ್ಲಿ ಪಟಾಕಿ ಬ್ಲಾಸ್ಟ್ – ಭಾರೀ ಶಬ್ದಕ್ಕೆ ಬಾಂಬ್ ಅಂತ ಬೆಚ್ಚಿಬಿದ್ದ ವಿದ್ಯಾರ್ಥಿಗಳು, ಸ್ಥಳೀಯರು
ಬಳಿಕ ಆ ಮದ್ಯವನ್ನು ಚಿತ್ರದುರ್ಗ ಪೊಲೀಸರಿಗೆ ಒಪ್ಪಿಸಿ, ಮತ್ತೆ ಈ ಡಾಬಾದಲ್ಲಿ ಮದ್ಯ ಮಾರಾಟ ಮಾಡದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಹಲವು ಬಾರಿ ಪೊಲೀಸ್ ಹಾಗೂ ಅಬಕಾರಿ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಕಿಡಿಕಾರಿದರು. ಇದನ್ನೂ ಓದಿ: ಅನ್ನಭಾಗ್ಯದ ಅಕ್ಕಿ ಬದಲಾಗಿ `ಇಂದಿರಾ ಕಿಟ್’ ನೀಡಲು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ
ಈ ವೇಳೆ ಸ್ಥಳಕ್ಕೆ ದೌಡಾಯಿಸಿದ್ದ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು, ಈ ಡಾಬಾದಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿದ್ದ ಅಂದಾಜು 10 ಸಾವಿರ ರೂ. ಮೌಲ್ಯದ ಎಣ್ಣೆಯನ್ನು ವಶಪಡಿಸಿಕೊಂಡು, ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದನ್ನೂ ಓದಿ: ಇಸ್ಲಾಮಾಬಾದ್ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ಕಾರು ಬಾಂಬ್ ಸ್ಫೋಟ; 12 ಮಂದಿ ಸಾವು

