ಬೆಂಗಳೂರು: ಭಯೋತ್ಪಾದಕ ಕೃತ್ಯ ಮಾಡ್ತಿರೋರನ್ನು ಆ ಧರ್ಮದವರು ಮೊದಲು ಖಂಡಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಭಾರತದ ಮೇಲೆ ವಿಧ್ವಂಸಕ ಕೃತ್ಯಗಳು ನಡೆಯುತ್ತಿರುವುದು ಹೊಸದೇನು ಅಲ್ಲ. ಹೊರಗಿನ ಶಕ್ತಿಗಳು ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತವೆ. ಭಯೋತ್ಪಾದಕ ಕೃತ್ಯ ಮಾಡ್ತಿರೋರನ್ನು ಆ ಧರ್ಮದವರು ಖಂಡಿಸಬೇಕು, ಪುಲ್ವಾಮಾ ದಾಳಿಯಾದ ಮೇಲೆ ಭಾರತ ಎಚ್ಚೆತ್ತುಕೊಂಡಿದೆ. ಅವರಿಗೆ ತಕ್ಕ ಪಾಠ ಕಲಿಸುವ ಕೆಲಸ ಮೋದಿ ಮಾಡಿದ್ದಾರೆ. ಇನ್ನು ಅನೇಕ ನುಸುಳುಕೋರರು ಭಾರತದಲ್ಲಿದ್ದಾರೆ. ಅವರನ್ನು ಹುಡುಕಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಚಿನ್ನ ಮಾರಾಟ ಮಾಡಿ, ಹಣ ಕೊಡೋದಾಗಿ ವಂಚನೆ – 1.6 ಕೋಟಿ ಮೌಲ್ಯದ 1,300 ಗ್ರಾ0 ಲಪಟಾಯಿಸಿದ್ದ ಇಬ್ಬರು ಅರೆಸ್ಟ್
ಈ ಘಟನೆಯನ್ನ ಪ್ರತಿಯೊಬ್ಬ ಪ್ರಜೆ ಖಂಡಿಸುತ್ತಾನೆ. ನಾನು ಖಂಡಿಸುತ್ತೇನೆ. ಯಾರು ಕೃತ್ಯಕ್ಕೆ ಕೈ ಜೋಡಿಸಿದ್ದಾರೆ ಅವರನ್ನ ಬಂಧಿಸಬೇಕು. ಶಿಕ್ಷೆ ಕೊಡಿಸಬೇಕು. ಯಾರ ಕೈವಾಡ ಇದೆ ಅವರ ವಿರುದ್ಧವೂ ಕ್ರಮ ಆಗಬೇಕು. ಕರ್ನಾಟಕ ಸರ್ಕಾರ ಹೇಗೆ ನಡೆದುಕೊಳುತ್ತಿದೆ. ಜೈಲಿನಲ್ಲಿ ಇದ್ದರೂ ರಕ್ಷಣೆ ಕೊಡ್ತಿದೆ. ಇಂತಹ ಮನಸ್ಥಿತಿ ಇರೋರು ದೇಶದಲ್ಲಿ ಇರೋದು ಒಳ್ಳೆಯದಲ್ಲ. ಭಯೋತ್ಪಾದಕತೆ ಅನ್ನೋದು ಒಂದು ಧರ್ಮ. ಅದನ್ನ ಹತ್ತಿಕ್ಕೋ ಕೆಲಸ ಮಾಡಬೇಕು ಎಂದಿದ್ದಾರೆ.
ದೆಹಲಿಯಲ್ಲಿ ಭದ್ರತಾ ವೈಫಲ್ಯ ಆಗಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಭದ್ರತೆ ವೈಫಲ್ಯ ಅಲ್ಲ. ಕದ್ದು ಮುಚ್ಚಿ ಮಾಡಿರೋದು. ಇದು ಸದಾ ಕಾಲದಲ್ಲಿ ನಡೆಯುತ್ತದೆ. ಇದನ್ನ ಸರ್ಕಾರ ಹೇಗೆ ಸ್ವೀಕಾರ ಮಾಡುತ್ತೆ ಅನ್ನೋದು ಮುಖ್ಯ. ಪುಲ್ವಾಮಾ ಆದ ಬಳಿಕ ಸಿಂಧೂರ ಆಯ್ತು. ಇದು ವೈಫಲ್ಯ ಅಲ್ಲ. ಕದ್ದು ಮುಚ್ಚಿ ಮಾಡ್ತಾರೆ. ಇಂತಹವರನ್ನ ಹುಡುಕಿ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.ಇದನ್ನೂ ಓದಿ:ಉಮರ್ 2 ತಿಂಗಳ ಹಿಂದೆ ಮನೆಗೆ ಬಂದಿದ್ದ – ದೆಹಲಿ ಸ್ಫೋಟದಿಂದ ನಮಗೂ ಆಘಾತವಾಗಿದೆ ಎಂದ ಅತ್ತಿಗೆ

