ನವದೆಹಲಿ: ದೆಹಲಿ ಸ್ಫೋಟದಲ್ಲಿ (Delhi Blast) ಬಾಧಿತರಿಗೆ ನಮ್ಮ ಪ್ರಾರ್ಥನೆಗಳಿವೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಿಳಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆರ್‌ಸಿಬಿ, ದೆಹಲಿ ನಮ್ಮ ಹೃದಯದಲ್ಲಿದೆ. ದೆಹಲಿ ಸದೃಢವಾಗಿರಿ ಎಂದು ಹೇಳಿದೆ. ಇದನ್ನೂ ಓದಿ: ದೆಹಲಿ ಸ್ಫೋಟದ ಸಂಚುಕೋರರನ್ನು ಸುಮ್ಮನೆ ಬಿಡಲ್ಲ – ಭೂತಾನ್‌ನಲ್ಲಿ ಮೋದಿ ವಾರ್ನಿಂಗ್
Our thoughts and prayers are with everyone affected. Stay strong, Delhi. 🇮🇳🙏 pic.twitter.com/jOkrGISFIq
— Royal Challengers Bengaluru (@RCBTweets) November 11, 2025
ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಸೋಮವಾರ ಸಂಜೆ ಸ್ಫೋಟ ಸಂಭವಿಸಿತು. ಸ್ಫೋಟದ ತೀವ್ರತೆಗೆ ಹಲವು ದೇಹಗಳು ಛಿದ್ರವಾದವು. ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿತು. 6 ಕಾರುಗಳು, 3 ಆಟೋ ಸೇರಿ ಹಲವು ವಾಹನಗಳು ಬೆಂಕಿಯಿಂದ ಹೊತ್ತಿ ಉರಿದವು. ಘಟನೆ ನಂತರ ದೇಶಾದ್ಯಂತ ಪ್ರಮುಖ ಸ್ಥಳಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಉಮರ್ 2 ತಿಂಗಳ ಹಿಂದೆ ಮನೆಗೆ ಬಂದಿದ್ದ – ದೆಹಲಿ ಸ್ಫೋಟದಿಂದ ನಮಗೂ ಆಘಾತವಾಗಿದೆ ಎಂದ ಅತ್ತಿಗೆ

