ನವದೆಹಲಿ: ಕೆಂಪು ಕೋಟೆಯ (Red Fort) ಬಳಿ ಸ್ಫೋಟಗೊಂಡ ಐ20 ಕಾರಿನ ಮುಂಭಾಗದಲ್ಲೂ ಸ್ಫೋಟಕ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.
ಹೌದು. ಸ್ಫೋಟಕ್ಕೂ ಮೊದಲು ಸುನೇಹ್ರಿ ಮಸೀದಿಯ ಪಾರ್ಕಿಂಗ್ ಜಾಗದಲ್ಲಿ ಮೂರು ಗಂಟೆ ಕಾರು ಪಾರ್ಕ್ ಆಗಿತ್ತು. ಕಾರು ಪಾರ್ಕಿಂಗ್ (Parking) ಸ್ಥಳಕ್ಕೆ ಮಧ್ಯಾಹ್ನ 3:19 ಕ್ಕೆ ಪ್ರವೇಶಿಸಿ ಸಂಜೆ 6:30 ರ ವೇಳೆ ನಿರ್ಗಮಿಸಿದೆ. ನಿರ್ಗಮಿಸಿದ ನಂತರ ಕೆಂಪು ಕೋಟೆಯ ಬಳಿ ಸಂಜೆ 6:52ಕ್ಕೆ ಸ್ಫೋಟಗೊಂಡಿದೆ.
ಕಾರು ಪಾರ್ಕಿಂಗ್ ಜಾಗಕ್ಕೆ ಬರುವಾಗಲೇ ಎಂಜಿನ್‌ನಲ್ಲಿ ಸ್ಫೋಟಕ ತುಂಬಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಯಾಕೆಂದರೆ ಕಾರಿನ ಮುಂದುಗಡೆ ಬಾನೆಟ್ ಸರಿಯಾಗಿ ಲಾಕ್ ಆಗದೇ ಇರುವ ದೃಶ್ಯ ವಿಡಿಯೋದಲ್ಲಿ ಕಾಣುತ್ತದೆ. ಎಂಜಿನ್ ಮೇಲೆ ಸ್ಫೋಟಕ ಇಟ್ಟಾಗ ಅದರ ತೀವ್ರತೆ ಮತ್ತಷ್ಟು ಹೆಚ್ಚಾಗುತ್ತದೆ. ಹಿಂದುಗಡೆ ಡಿಕ್ಕಿಯಲ್ಲೂ ಸ್ಫೋಟಕ ಇಟ್ಟ ಕಾರಣ ಸ್ಫೋಟ ತೀವ್ರತೆಗೆ ಬೆಂಕಿ ಹಲವು ಕಾರುಗಳಿಗೆ ತಗುಲಿದೆ. ಇದನ್ನೂ ಓದಿ: Delhi Blast| ʻಫರಿದಾಬಾದ್ ಮಾಡ್ಯೂಲ್ʼ ಗ್ಯಾಂಗ್ ಅರೆಸ್ಟ್ ಆಗಿದ್ದಕ್ಕೆ ವೈದ್ಯ ಉಮರ್ ನಬಿಯಿಂದ ಕಾರು ಸ್ಫೋಟ!
ಸ್ಫೋಟಗೊಂಡ ಐ20 ಕಾರಿನಲ್ಲಿ ಫರಿದಾಬಾದ್ ವೈದ್ಯ ಡಾ. ಉಮರ್ ಯು ನಬಿ (Umar Nabi) ಸೂಸೈಡ್ ಬಾಂಬರ್ ಆಗಿ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: Delhi Explosion | ವೈದ್ಯ ಉಮರ್‌ನ ತಾಯಿ, ಇಬ್ಬರು ಸಹೋದರರು ಸೇರಿ 13 ಮಂದಿ ವಶಕ್ಕೆ

