ನವದೆಹಲಿ: ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದ ಹೊತ್ತಲ್ಲೇ ರಾಷ್ಟ್ರರಾಜಧಾನಿಯ ಹೃದಯಭಾಗ ಕೆಂಪು ಕೋಟೆ ಬಳಿ ಭೀಕರ ಸ್ಫೋಟ (Delhi Explosion) ಸಂಭವಿಸಿದೆ. ಸೋಮವಾರ ಸಂಜೆ 6:45 ರಿಂದ 7 ಗಂಟೆ ಅವಧಿಯಲ್ಲಿ ಸ್ಫೋಟ ಸಂಭವಿಸಿದ್ದು, ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟದ ತೀವ್ರತೆಗೆ ದೇಹಗಳು ಛಿದ್ರ ಛಿದ್ರವಾಗಿದೆ. ಇತಿಹಾಸವನ್ನೊಮ್ಮೆ ನೋಡಿದಾಗ ದೆಹಲಿಯಲ್ಲಿ ಭೀಕರ ಸ್ಫೋಟ ಸಂಭವಿಸಿರೋದು ಇದೇ ಮೊದಲೇನಲ್ಲ. 1997ರ ಬಳಿಕ ಕೆಂಪು ಕೋಟೆ ಬಳಿ 3ನೇ ಬಾರಿಗೆ ಸ್ಫೋಟ ಸಂಭವಿಸಿದ್ರೆ 1996ರಿಂದ ಈವರೆಗೆ ವಿವಿಧೆಡೆ 16 ಸ್ಫೋಟಗಳು ಸಂಭವಿಸಿದ್ದು, ಹತ್ತಾರು ಜೀವಗಳು ಬಲಿಯಾಗಿದೆ. ಇದು 17ನೇ ಸ್ಫೋಟ ಪ್ರಕರಣವಾಗಿದೆ. ಅದರ ಇತಿಹಾಸವನ್ನೊಮ್ಮೆ ನೋಡೋಣ..
- ಮೇ 25, 1996: ಲಜ್‌ಪತ್ ನಗರ ಸೆಂಟ್ರಲ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ – ಕನಿಷ್ಠ 16 ಜನರ ಸಾವು
- ಅಕ್ಟೋಬರ್ 1, 1997: ಸದರ್ ಬಜಾರ್ ಬಳಿ ಎರಡು ಬಾಂಬ್ ಸ್ಫೋಟ – ಸುಮಾರು 30 ಜನರಿಗೆ ಗಾಯ
- ಅಕ್ಟೋಬರ್ 10, 1997: ಶಾಂತಿವನ್, ಕೌಡಿಯಾ ಪುಲ್ ಮತ್ತು ಕಿಂಗ್ಸ್‌ವೇ ಕ್ಯಾಂಪ್ ಪ್ರದೇಶಗಳಲ್ಲಿ ಮೂರು ಸ್ಫೋಟಗಳು – ಒಬ್ಬರು ಸಾವನ್ನಪ್ಪಿದರು, ಸುಮಾರು 16 ಜನರಿಗೆ ಗಾಯ
- ಅಕ್ಟೋಬರ್ 18, 1997: ರಾಣಿ ಬಾಗ್ ಮಾರುಕಟ್ಟೆಯಲ್ಲಿ ಅವಳಿ ಸ್ಫೋಟಗಳು – ಒಬ್ಬರು ಸಾವನ್ನಪ್ಪಿದರು, ಸುಮಾರು 23 ಜನರಿಗೆ ಗಾಯ
- ಅಕ್ಟೋಬರ್ 26, 1997: ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ಎರಡು ಸ್ಫೋಟಗಳು – ಒಬ್ಬರು ಸಾವನ್ನಪ್ಪಿದರು, ಸುಮಾರು 34 ಜನರಿಗೆ ಗಾಯ
- ನವೆಂಬರ್ 30, 1997: ಕೆಂಪು ಕೋಟೆ ಪ್ರದೇಶದಲ್ಲಿ ಅವಳಿ ಸ್ಫೋಟಗಳು – ಮೂವರು ಸಾವನ್ನಪ್ಪಿದರು, 70 ಜನರಿಗೆ ಗಾಯ
- ಡಿಸೆಂಬರ್ 30, 1997: ಪಂಜಾಬಿ ಬಾಗ್ ಬಳಿ ಬಸ್ ಸ್ಫೋಟ – ನಾಲ್ವರು ಸಾವನ್ನಪ್ಪಿದರು, ಸುಮಾರು 30 ಜನರಿಗೆ ಗಾಯ
- ಜೂನ್ 18, 2000: ಕೆಂಪು ಕೋಟೆ ಬಳಿ ಎರಡು ಪ್ರಬಲ ಸ್ಫೋಟಗಳು – ಇಬ್ಬರು ಸಾವನ್ನಪ್ಪಿದರು, ಸುಮಾರು ಒಂದು ಡಜನ್ ಜನರಿಗೆ ಗಾಯ
- ಮಾರ್ಚ್ 16, 2000: ಸದರ್ ಬಜಾರ್‌ನಲ್ಲಿ ಸ್ಫೋಟ – 7 ಜನರಿಗೆ ಗಾಯ
- ಫೆಬ್ರವರಿ 27, 2000: ಪಹರ್‌ಗಂಜ್‌ನಲ್ಲಿ ಸ್ಫೋಟ – 8 ಜನರಿಗೆ ಗಾಯ
- ಏಪ್ರಿಲ್ 14, 2006: ಜಾಮಾ ಮಸೀದಿ ಆವರಣದಲ್ಲಿ ಎರಡು ಸ್ಫೋಟಗಳು – ಕನಿಷ್ಠ 14 ಜನರಿಗೆ ಗಾಯ
- ಮೇ 22, 2005: ಲಿಬರ್ಟಿ ಮತ್ತು ಸತ್ಯಂ ಸಿನಿಮಾ ಮಂದಿರಗಳಲ್ಲಿ ಎರಡು ಸ್ಫೋಟಗಳು – 1 ಸಾವು, ಸುಮಾರು 60 ಜನರಿಗೆ ಗಾಯ
- ಅಕ್ಟೋಬರ್ 29, 2005: ಸರೋಜಿನಿ ನಗರ, ಪಹರ್‌ಗಂಜ್ ಮತ್ತು ಗೋವಿಂದಪುರಿಯಲ್ಲಿ ಮೂರು ಸ್ಫೋಟಗಳು – ಸುಮಾರು 59-62 ಸಾವು, 100+ ಜನರಿಗೆ ಗಾಯ
- ಸೆಪ್ಟೆಂಬರ್ 13, 2008: ಕರೋಲ್ ಬಾಗ್ (ಗಫರ್ ಮಾರುಕಟ್ಟೆ), ಕನ್ನಾಟ್ ಪ್ಲೇಸ್ ಮತ್ತು ಗ್ರೇಟರ್ ಕೈಲಾಶ್-I ನಲ್ಲಿ ಐದು ಸಂಘಟಿತ ಸ್ಫೋಟಗಳು – ಕನಿಷ್ಠ 20-30 ಸಾವು, 90+ ಜನರಿಗೆ ಗಾಯ
- ಸೆಪ್ಟೆಂಬರ್ 27, 2008: ಮೆಹ್ರೌಲಿಯ ಹೂವಿನ ಮಾರುಕಟ್ಟೆಯಲ್ಲಿ (ಸಾರೈ) ಸ್ಫೋಟ – 3 ಸಾವು, 23 ಜನರಿಗೆ ಗಾಯ
- 25 ಮೇ 2011: ದೆಹಲಿ ಹೈಕೋರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಸ್ಫೋಟ – ಯಾವುದೇ ಸಾವು ನೋವುಗಳಿಲ್ಲ.
- ನವೆಂಬರ್ 10, 2025 – ಕೆಂಪು ಕೋಟೆ ಬಳಿ ಭೀಕರ ಸ್ಫೋಟ – 13 ಮಂದಿ ಸಾವು


