– ಉಗ್ರ ಕೃತ್ಯದ ಶಂಕೆ – ಎಲ್ಲಾ ಆಯಾಮದಲ್ಲೂ ತನಿಖೆ
ನವದೆಹಲಿ: ಸೋಮವಾರ ಸಂಜೆ ದೆಹಲಿಯ ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದ ಹಿಂದೆ ಉಗ್ರ ಕೃತ್ಯದ ಶಂಕೆ ವ್ಯಕ್ತವಾಗಿದ್ದು, ಜನರನ್ನ ಆತಂಕಕ್ಕೆ ದೂಡಿದೆ.
#WATCH | Delhi: Blast near Red Fort Metro Station | Union Home Minister Amit Shah arrives at the spot.
A blast took place in a Hyundai i20 car near the Red Fort in Delhi today at around 7 pm. Due to the blast, eight people have died so far. pic.twitter.com/QiDQrTJHXs
— ANI (@ANI) November 10, 2025
ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ತನಿಖಾಧಿಕಾರಿಗಳು ಸ್ಫೋಟದ ಸ್ಥಳಕ್ಕೆ ಧಾವಿಸಿದ್ದು, ಎಲ್ಲಾ ಆಯಾಮಗಳ ತನಿಖೆಗೆ ಮುಂದಾಗಿದ್ದಾರೆ. ಸ್ಥಳದಲ್ಲೇ ವಿಧಿವಿಜ್ಞಾನ ಪ್ರಯೋಗಾಲಯ ತಂಡದ ಅಧಿಕಾರಿಗಳೂ ಬೀಡುಬಿಟ್ಟಿದ್ದು, ಸ್ಫೋಟಕ್ಕೆ ಕಾರಣಗಳನ್ನ ಪತ್ತೆ ಮಾಡಲಾಗುತ್ತಿದೆ. ಈ ಮಧ್ಯೆ ನೆತ್ತರು ಹರಿದ ನೆಲದಲ್ಲಿ ಸಜೀವ ಗುಂಡು ಪತ್ತೆಯಾಗಿರುವುದು ಭಾರೀ ಕಳವಳ ಉಂಟುಮಾಡಿದೆ. ಇದನ್ನೂ ಓದಿ: Delhi Explosion | ಹುಂಡೈ I20 ಕಾರಿನಲ್ಲಿ ಸ್ಫೋಟ – ದೆಹಲಿ ಸ್ಫೋಟದ ಬಗ್ಗೆ ಅಮಿತ್ ಶಾ ಫಸ್ಟ್ ರಿಯಾಕ್ಷನ್
#WATCH | Delhi: Blast near Red Fort Metro Station | Union Home Minister Amit Shah arrives at the spot. pic.twitter.com/QDisHAEPpe
— ANI (@ANI) November 10, 2025
ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನ ಸ್ಫೋಟಗೊಂಡ ಸ್ಥಳದಲ್ಲಿ ಸಜೀವ ಗುಂಡು ಪತ್ತೆಯಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ತಿಳಿಸಿದ್ದಾರೆ. ಇದನ್ನೂ ಓದಿ: Delhi Explosion | ಕೆಂಪು ಕೋಟೆ ಬಳಿ ಭೀಕರ ಸ್ಫೋಟ – ಕಂಬನಿ ಮಿಡಿದ ಮೋದಿ, ರಾಜನಾಥ್ ಸಿಂಗ್
ಕೆಂಪುಕೋಟೆಯಲ್ಲಿ ಏನಾಯ್ತು?
ಕೆಂಪು ಕೋಟೆ ಸಮೀಪದ ಲಾಲ್ ಕಿಲಾ ಮೆಟ್ರೋ ನಿಲ್ದಾಣ ಗೇಟ್ ಸಂಖ್ಯೆ-1ರ ಬಳಿ ಸೋಮವಾರ ಸಂಜೆ 6:45 ರಿಂದ 7 ಗಂಟೆ ಅವಧಿಯಲ್ಲಿ ಸ್ಫೋಟ ಸಂಭವಿಸಿದ್ದು, ಸಾವಿನ ಸಂಖ್ಯೆ ಈವರೆಗೆ 14ಕ್ಕೆ ಏರಿಕೆಯಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 10ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, 6 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: Delhi Explosion | ಭಯಾನಕ ಸ್ಫೋಟಕ್ಕೆ ಬೆಚ್ಚಿಬಿದ್ದ ದೆಹಲಿ – ಸಾವಿನ ಸಂಖ್ಯೆ 8ಕ್ಕೆ ಏರಿಕೆ
#WATCH | Delhi: Blast near Red Fort Metro Station | Union Home Minister Amit Shah arrives at the spot. pic.twitter.com/iHQw342EcM
— ANI (@ANI) November 10, 2025
6 ಕಾರ್‌ಗಳು, 4 ಆಟೋ ಛಿದ್ರಛಿದ್ರವಾಗಿವೆ. ಕೆಂಪುಕೋಟೆ ಮೆಟ್ರೋದ ಗೇಟ್ ನಂ.1ರ ಪಾರ್ಕಿಂಗ್‌ನಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಆಕಸ್ಮಿಕ ಭೀಕರ ಸ್ಫೋಟದ ಸದ್ದು- ಬೆಂಕಿಗೆ ಜನ ನಡುಗಿಹೋಗಿದ್ದಾರೆ. 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ. ಇದು ಬಾಂಬ್ ಸ್ಫೋಟವಾ..? ಅಥವಾ ಸಿಎನ್‌ಜಿ ಸ್ಫೋಟವಾ..? ಏನು ಅನ್ನೋದು ನಿಖರವಾಗಿ ಗೊತ್ತಾಗ್ತಿಲ್ಲ. ದೆಹಲಿ ಪೊಲೀಸರು, ಸಿಆರ್‌ಪಿಎಫ್ ತಂಡ ಘಟನಾ ಸ್ಥಳದಲ್ಲಿ ಇದ್ದು, ಇಂಚಿಂಚೂ ಶೋಧ ನಡೆಸುತ್ತಿದ್ದಾರೆ.

