ನವದೆಹಲಿ/ಬೆಂಗಳೂರು: ರಾಷ್ಟ್ರರಾಜಧಾನಿಯ ಹೃದಯಭಾಗದಲ್ಲಿಂದು ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟ (Delhi Explosion) ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿ ವಿಶೇಷ ಘಟಕ ಅಧಿಕಾರಿಗಳ ತಂಡ ಓರ್ವ ಶಂಕಿತನ್ನ ವಶಕ್ಕೆ ಪಡೆದಿದೆ. ವಿಚಾರಣೆ ಬಳಿಕವೇ ಸ್ಪೋಟಕ ರಹಸ್ಯ ಹೊರಬೀಳಬೇಕಿದೆ.
ಕೆಂಪು ಕೋಟೆ ಸಮೀಪದ ಲಾಲ್ ಕಿಲಾ ಮೆಟ್ರೋ ನಿಲ್ದಾಣ (Lal Quila Metro Station) ಗೇಟ್ ಸಂಖ್ಯೆ-1ರ ಬಳಿ ಸೋಮವಾರ ಸಂಜೆ 6:45 ರಿಂದ 7 ಗಂಟೆ ಅವಧಿಯಲ್ಲಿ ಸ್ಫೋಟ ಸಂಭವಿಸಿದ್ದು, ಸಾವಿನ ಸಂಖ್ಯೆ ಈವರೆಗೆ 10ಕ್ಕೆ ಏರಿಕೆಯಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: Delhi Explosion | ಕೆಂಪು ಕೋಟೆ ಬಳಿ ಕಾರು ಸ್ಫೋಟ – ಇಬ್ಬರು ದುರ್ಮರಣ, ಸ್ಫೋಟದ ತೀವ್ರತೆಗೆ ದೇಹ ಛಿದ್ರ
10ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 6 ಕಾರ್‌ಗಳು, 4 ಆಟೋ ಛಿದ್ರಛಿದ್ರವಾಗಿವೆ. ಕೆಂಪುಕೋಟೆ ಮೆಟ್ರೋದ ಗೇಟ್ ನಂ.1ರ ಪಾರ್ಕಿಂಗ್‌ನಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಆಕಸ್ಮಿಕ ಭೀಕರ ಸ್ಫೋಟದ ಸದ್ದು- ಬೆಂಕಿಗೆ ಜನ ನಡುಗಿಹೋಗಿದ್ದಾರೆ. ಇದನ್ನೂ ಓದಿ: Explosion | ದೆಹಲಿಯಲ್ಲಿ ಭಯಾನಕ ಸ್ಫೋಟ; ಬೆಂಗಳೂರು, ಮುಂಬೈ, ಯುಪಿ ಸೇರಿ ದೇಶಾದ್ಯಂತ ಹೈಅಲರ್ಟ್
20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ. ಇದು ಬಾಂಬ್ ಸ್ಫೋಟವಾ..? ಅಥವಾ ಸಿಎನ್‌ಜಿ ಸ್ಫೋಟವಾ..? ಏನು ಅನ್ನೋದು ನಿಖರವಾಗಿ ಗೊತ್ತಾಗ್ತಿಲ್ಲ. ದೆಹಲಿ ಪೊಲೀಸರು, ಸಿಆರ್‌ಪಿಎಫ್ ತಂಡ ಘಟನಾ ಸ್ಥಳದಲ್ಲಿ ಇದ್ದು, ಇಂಚಿಂಚೂ ಶೋಧ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಕೂಡ ಧಾವಿಸಿದ್ದು, ಸ್ಫೋಟಕ್ಕೆ ಕಾರಣ ಪತ್ತೆಹೆಚ್ಚುವ ಕಾರ್ಯದಲ್ಲಿ ತೊಡಗಿದೆ. ಇದನ್ನೂ ಓದಿ: Delhi Explosion | ಭಯಾನಕ ಸ್ಫೋಟಕ್ಕೆ ಬೆಚ್ಚಿಬಿದ್ದ ದೆಹಲಿ – ಸಾವಿನ ಸಂಖ್ಯೆ 8ಕ್ಕೆ ಏರಿಕೆ


