– 8 ಕಾರುಗಳು, 5 ಆಟೋಗಳು ಅಗ್ನಿಗಾಹುತಿ
ನವದೆಹಲಿ: ಐತಿಹಾಸಿಕ ಕೆಂಪು ಕೋಟೆ ಬಳಿ ಸಂಭವಿಸಿರುವ ಭೀಕರ ಕಾರು ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸ್ಫೋಟದ ತೀವ್ರತೆಗೆ ದೇಹ ಛಿದ್ರಛಿದ್ರವಾಗಿದೆ. 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
A blast occurred in a parked car near Gate No. 1 of Delhi’s Red Fort Metro Station on Monday. The fire spread rapidly, engulfing three nearby vehicles. Firefighters controlled the blaze, and police have cordoned off the area. #Delhi #RedFort #BreakingNews #Fire #DelhiPolice pic.twitter.com/sDXyeK7ITf
— Sushil Manav (@sushilmanav) November 10, 2025
ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ-1ರ ಬಳಿ ಸಂಭವಿಸಿದ ಸ್ಫೋಟದಲ್ಲಿ 8 ಕಾರುಗಳು ಹಾಗೂ 5ಕ್ಕೂ ಹೆಚ್ಚು ಆಟೋಗಳೂ ಅಗ್ನಿ ಜ್ವಾಲೆಯಲ್ಲಿ ಧಗಧಗಿಸಿವೆ. ಈ ಕುರಿತ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲೂ ಭಾರೀ ಸದ್ದು ಮಾಡುತ್ತಿವೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ದೆಹಲಿ ಸಮೀಪ ವಿವಿಧೆಡೆ 2,900 ಕೆಜಿ ಸ್ಫೋಟಕ ವಸ್ತುಗಳನ್ನ ಪತ್ತೆಹಚ್ಚಿ ಜಪ್ತಿ ಮಾಡಿದ್ದರು. ಈ ಬೆಳವಣಿಗೆ ನಡೆದ ಕೆಲವೇ ಗಂಟೆಗಳಲ್ಲಿ ಭೀಕರ ಸ್ಫೋಟ ಸಂಭವಿಸಿರುವುದು ಜನರನ್ನ ಆತಂಕಕ್ಕೆ ಕಾರಣವಾಗಿದೆ.
Delhi: A blast reported in a car near Red Fort, close to Red Fort Metro Station. 17 person feared dead; 30 injured. Authorities have cordoned off the area and investigation is underway.
Developing Story…
#Delhi #RedFort #Blast #BreakingNews pic.twitter.com/Pc501gBMem
— Bhabi Banaras (@bhabibanaras) November 10, 2025
ಬಾಂಬ್ ನಿಷ್ಕ್ರಿಯ ದಳ, FSL ಟೀಂ ಪರಿಶೀಲನೆ:
ವಿಷಯ ತಿಳಿಯುತ್ತಿದ್ದಂತೆ ದೆಹಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ದೆಹಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನೂ ನಿಯಂತ್ರಣಕ್ಕೆ ತಂದಿದ್ದಾರೆ. ಈ ಬೆನ್ನಲ್ಲೇ ವಿಧಿವಿಜ್ಞಾನ ಪ್ರಯೋಗಾಲಯ ತಂಡ, ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಧಾವಿಸಿದ್ದು, ಕಾರು ಸ್ಫೋಟಕ್ಕೆ ಕಾರಣ ಪತ್ತೆಹಚ್ಚುವ ಕೆಲಸದಲ್ಲಿ ತೊಡಗಿವೆ. ಕಾರು ಸ್ಫೋಟಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

