ಪಾಟ್ನಾ: ಮೊದಲ ಹಂತದ ಚುನಾವಣೆ ನಡೆದು ಮೂರು ದಿನ ಕಳೆದರೂ ಮಹಿಳಾ ಮತ್ತು ಪುರುಷ ಮತದಾರರ ಮತದಾನ ಪ್ರಮಾಣ ಬಹಿರಂಗಪಡಿಸಿಲ್ಲ, ಬೀದಿಗಳಲ್ಲಿ ವಿವಿ ಪ್ಯಾಟ್ ಸಿಕ್ಕಿದೆ, ಹಲವು ಸ್ಟ್ರಾಂಗ್ ರೂಮ್‌ಗಳಲ್ಲಿ ಸಿಸಿಟಿವಿ ಯಾಕೆ ಬಂದ್ ಆಗಿದೆ? ಎಂದು ಮಹಾಘಟಬಂಧನ್ (Mahagathbandhan) ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ (Tejaswi Yadav)ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮೊದಲ ಹಂತದ ಚುನಾವಣೆ ಬಳಿಕ ಎನ್‌ಡಿಎಯಲ್ಲಿ ತುಂಬಾ ನಿರಾಶಾದಾಯಕ ವಾತಾವರಣವಿರುವುದು ಕಂಡುಬಂದಿದೆ. ಸೋಲಿನ ಭಯದಿಂದ ಗೃಹ ಸಚಿವರು ಅಧಿಕಾರಿಗಳನ್ನು ಭೇಟಿಯಾಗಿ ಹಾಗೂ ದೂರವಾಣಿ ಮೂಲಕ ಧಮ್ಕಿ ಹಾಕುತ್ತಿದ್ದಾರೆ. ತಾವು ತಂಗಿದ್ದ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾಗಳನ್ನ ಬಂದ್ ಮಾಡಿ ಅಧಿಕಾರಿಗಳನ್ನು ಕರೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: 15 ದಿನಗಳಿಂದ ಸದ್ದಿಲ್ಲದೇ ಕಾರ್ಯಾಚರಣೆ; ಪೋಸ್ಟರ್ ಜಾಡು ಹಿಡಿದು ತನಿಖೆಗಿಳಿದವರಿಗೆ ಸಿಕ್ಕಿದ್ದು 2,900 KG ಸ್ಫೋಟಕ..!
महत्वपूर्ण संदेश‼️
प्रथम चरण के बाद 𝐍𝐃𝐀 खेमे में भारी गमगीन माहौल है। हार के ख़ौफ़ से गृहमंत्री अधिकारियों से मिलकर एवं फ़ोन पर धमकी दे रहे है। जहां ठहरते है उस होटल के 𝐂𝐂𝐓𝐕 बंद करा देर रात्रि अधिकारियों को बुलाते है।
अभी 𝐂𝐌 आवास से बिना मुख्यमंत्री की जानकारी के भूंजा… pic.twitter.com/eS21Afx8D9
— Tejashwi Yadav (@yadavtejashwi) November 9, 2025
ಮೊದಲ ಹಂತದ ಚುನಾವಣೆ ನಡೆದು ಮೂರು ದಿನವಾಗಿದೆ. ಆದರೂ ಚುನಾವಣಾ ಆಯೋಗ ಈವರೆಗೂ ಮಹಿಳಾ ಮತ್ತು ಪುರುಷ ಮತದಾರರ ವೋಟಿಂಗ್ ಪ್ರಮಾಣ ಬಹಿರಂಗಪಡಿಸಿಲ್ಲ, ಯಾಕೆ ಈ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲ? ಬಿಹಾರ ಕಾಲೇಜಿನ ರಸ್ತೆಯಲ್ಲಿ ರಾಶಿ ರಾಶಿ ವಿವಿ ಪ್ಯಾಟ್ ಸಿಕ್ಕಿದೆ, ಹಲವು ಕಡೆ ಸ್ಟ್ರಾಂಗ್ ರೂಮ್‌ಗಳಲ್ಲಿ ಸಿಸಿಟಿವಿ ಯಾಕೆ ಬಂದ್ ಆಗಿದೆ? ಈ ಎಲ್ಲದ್ದಕ್ಕೂ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ತೇಜಸ್ವಿ ಯಾದವ್ ಪ್ರಶ್ನೆಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಚುನಾವಣೆಗೂ ಮೊದಲೇ ತೇಜಸ್ವಿ ಸುಳ್ಳು ಹೇಳುತ್ತಿದ್ದಾರೆ. ಇದು ಸೋಲಿನ ಸೂಚನೆ ಎಂದು ತಿರುಗೇಟು ನೀಡಿದೆ.
ಬಿಹಾರದಲ್ಲಿ ಮಂಗಳವಾರ (ನ.11) 122 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ನಡೆಯಲಿದೆ. ನ.6ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 18 ಜಿಲ್ಲೆಗಳ 123 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ದಾಖಲೆಯ ಶೇ.65.08ರಷ್ಟು ಮತದಾನವಾಗಿದೆ. ಮಂಗಳವಾರ 2ನೇ ಹಂತದ ಮತದಾನ ನಡೆಯಲಿದ್ದು, ಸಂಜೆ 6:30ಕ್ಕೆ ಎಕ್ಸಿಟ್ ಪೋಲ್ ಸರ್ವೆಗಳ ರಿಪೋರ್ಟ್ ಅನಾವರಣವಾಗಲಿದೆ. ನವೆಂಬರ್ 14ಕ್ಕೆ ಫಲಿತಾಂಶ ಪ್ರಕಟವಾಗಲಿದೆ.ಇದನ್ನೂ ಓದಿ:

