ನವದೆಹಲಿ: ಮತ ಕಳ್ಳತನ (Vote Chori) ವಿರುದ್ಧದ ಸಹಿ ಸಂಗ್ರಹ ಅಭಿಯಾನವನ್ನ ಕರ್ನಾಟಕದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ರಾಜ್ಯದಲ್ಲಿ ಸಂಗ್ರಹಿಸಲಾದ 1,12,41,000 ಸಹಿಗಳ ದಾಖಲೆಗಳನ್ನ ರಾಷ್ಟ್ರೀಯ ಕಾಂಗ್ರೆಸ್ ಘಟಕಕ್ಕೆ ಸಲ್ಲಿಸಿದರು.
1.12 Crore Signatures from Karnataka.
One Message: Protect Every Vote.
At the press conference at Indira Bhawan, New Delhi, I spoke about how our Leader of Opposition in the Lok Sabha, Shri Rahul Gandhi, and AICC President Shri Mallikarjun Kharge personally initiated an… pic.twitter.com/26MIgkFVjM
— DK Shivakumar (@DKShivakumar) November 10, 2025
ದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಮುಖಂಡರ ನಿಯೋಗವು ಸಹಿ ಸಂಗ್ರಹ ದಾಖಲೆಗಳ ಒಂದು ಪೆಟ್ಟಿಗೆಯನ್ನ ಸಾಂಕೇತಿಕವಾಗಿ ಸಲ್ಲಿಸಿದರು. ನಂತರ ಉಳಿದ ಪೆಟ್ಟಿಗೆಗಳನ್ನು ಎಐಸಿಸಿ ನೂತನ ಕಟ್ಟಡ ಇಂದಿರಾ ಭವನದಲ್ಲಿ ಎಐಸಿಸಿ ಕಾರ್ಯದರ್ಶಿ ನೆಟ್ಟ ಡಿಸೋಜ ಅವರಿಗೆ ಹಸ್ತಾಂತರಿಸಲಾಯಿತು. ಇದನ್ನೂ ಓದಿ: ʻವೈಟ್ ಕಾಲರ್ ಉಗ್ರರ ಜಾಲʼದಲ್ಲಿ ವಿದ್ಯಾರ್ಥಿಗಳೂ ಭಾಗಿ – IED ತಯಾರಿಸುವ 2,900 Kg ಸ್ಫೋಟಕ ಪತ್ತೆ, 7 ಉಗ್ರರು ಅರೆಸ್ಟ್!
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ (Congress Party) 40 ಜಿಲ್ಲೆಗಳಲ್ಲಿ (ರಾಜಕೀಯ ಉದ್ದೇಶಕ್ಕಾಗಿ ರಚಿಸಿಕೊಂಡಿರುವ ಜಿಲ್ಲೆಗಳು) ಸಹಿ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ನಡೆದ ಅಭಿಯಾನದಲ್ಲಿ ಅತಿ ಹೆಚ್ಚು ಸಹಿ ಸಂಗ್ರಹಿಸಿದ ಜಿಲ್ಲಾಧ್ಯಕ್ಷರುಗಳು ಕೂಡ ಶಿವಕುಮಾರ್ ಅವರ ಜೊತೆಯಲ್ಲಿ ದೆಹಲಿಗೆ ಹೋಗಿ ಸಹಿ ಸಂಗ್ರಹ ದಾಖಲೆಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರ ನಿಗದಿ ಮಾಡಿದ ದರ ನೀಡಬೇಕು – ಕಬ್ಬು ಬೆಳೆಗಾರರಿಂದ ನಾಳೆ ಹೈವೇ ಬಂದ್ ಎಚ್ಚರಿಕೆ
ಈ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ವೋಟ್ ಚೋರಿ ಬಗ್ಗೆ ಹೈಕಮಾಂಡ್ ನಾಯಕರಿಗೆ ವಿವರಿಸಿದರು. ನಾವು ಕೂಡ ಸ್ಥಳಕ್ಕೆ ಹೋಗಿ ತನಿಖೆ ಮಾಡಿದ್ದೇವೆ, ರಾಜರಾಜೇಶ್ವರಿ ನಗರದಲ್ಲಿ ಒಂದು ಸಮುದಾಯದ ವೋಟ್ ಶಿಫ್ಟ್ ಮಾಡಲಾಗಿದೆ. ಚಿಲುಮೆ ಹಗರಣ ಕರ್ನಾಟಕ ಆಯ್ತು ಸಂಸತ್ ಚುನಾವಣೆಯಲ್ಲಿ ಹೇಗೆ ಆಯ್ತು ಅಂತಾ ನಾವು ನೋಡಿದ್ವಿ. ದೇಶದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಲ್ಲಿ ನಾವು ಸಹಿ ಸಂಗ್ರಹ ಅಭಿಯಾನ ಮಾಡಿದ್ದೇವು. ಈ ಅಭಿಯಾನವನ್ನ ಒಂದು ವಾರ ಅವಧಿಗೆ ವಿಸ್ತರಣೆ ಮಾಡಲಾಗಿದೆ. ಒನ್ ಮ್ಯಾನ್ ಒನ್ ವೋಟ್ ಇರಬೇಕು ಎಂದು ಕರೆ ನೀಡಿದರು.
Together with KPCC leaders, we submitted the signatures collected in our campaign against #VoteChori to the AICC in Delhi, in the presence of President Shri Mallikarjun Kharge. These signatures represent the voices of 1,12,41,000 citizens from Karnataka, placed firmly before the… pic.twitter.com/9IVesFOoAw
— DK Shivakumar (@DKShivakumar) November 10, 2025
ಮುಂದುವರಿದು.. ಬಿಹಾರದಲ್ಲೂ ರಾಹುಲ್ ಗಾಂಧಿ (Rahul Gandhi) ವೋಟ್ ಚೋರಿ ಅಭಿಯಾನ ನಡೆಸಿದ್ದಾರೆ. ಒಳ್ಳೆಯ ದಿನಗಳು ದೇಶಕ್ಕೆ ಬರುತ್ತಿವೆ. ಈ ದೇಶದ ಸಂವಿಧಾನ, ರಾಷ್ಟ್ರಗೀತೆ, ನಮ್ಮ ಬಾವುಟ ರಕ್ಷಣೆಗೆ ನಾವು ಬದ್ಧ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ದೇಶದ್ರೋಹಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ – ಸಿಎಂ ನಿವಾಸಕ್ಕೆ ಬಿಜೆಪಿಯಿಂದ ಮುತ್ತಿಗೆ ಯತ್ನ
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ ಜಿ.ಸಿ ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಸೊರಕೆ ಮತ್ತಿತರರು ಉಪಸ್ಥಿತರಿದ್ದರು.


