ಬೆಂಗಳೂರು: ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಜಿಟಿ ದೇವೇಗೌಡರಿಗೆ (GT Devegowda) ಕೊನೆಗೂ ಜೆಡಿಎಸ್ (JDS) ಶಾಕ್ ಕೊಟ್ಟಿದೆ. ಜಿಟಿ ದೇವೇಗೌಡರಿಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಕೊಕ್ ನೀಡಲಾಗಿದೆ. ನೂತನ ಕೋರ್ ಕಮಿಟಿ ಅಧ್ಯಕ್ಷರಾಗಿ ಮಾಜಿ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ (M Krishna Reddy) ನೇಮಕ ಮಾಡಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ (HD Kumaraswamy) ಆದೇಶ ಹೊರಡಿಸಿದ್ದಾರೆ.
ಜಿಟಿ ದೇವೇಗೌಡರು ಕೋರ್ ಕಮಿಟಿ (JDS Core Committee) ಅಧ್ಯಕ್ಷ ಆಗಿದ್ದರೂ ಯಾವುದೇ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಅಲ್ಲದೇ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಪಕ್ಷದ ನಾಯಕರ ವಿರುದ್ಧವೇ ಮಾತನಾಡುತ್ತಿದ್ದರು. ಅಂತಿಮವಾಗಿ ಜಿಟಿ ದೇವೇಗೌಡರನ್ನು ಬಿಟ್ಟು ಕೃಷ್ಣಾರೆಡ್ಡಿಗೆ ಜೆಡಿಎಸ್ ವರಿಷ್ಠರು ಸ್ಥಾನ ನೀಡಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಬಿಂದಾಸ್ ಲೈಫ್ – ಕಾಂಗ್ರೆಸ್‌ನ ಹೊಸ ಗ್ಯಾರಂಟಿ ಎಂದು ಕುಟುಕಿದ ಶೆಹಜಾದ್ ಪೂನಾವಾಲಾ
ಕೋರ್ ಕಮಿಟಿ ಜೊತೆ ಜೆಡಿಎಸ್ ರಾಜಕೀಯ ವ್ಯವಹಾರಗಳ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಪಾಲನ ಸಮಿತಿಗಳಿಗೂ ಅಧ್ಯಕ್ಷರು, ಸದಸ್ಯರನ್ನ ನೇಮಕ ಮಾಡಲಾಗಿದೆ. ರಾಜಕೀಯ ವ್ಯವಹಾರ ಸಮಿತಿಗೆ ಕುಮಾರಸ್ವಾಮಿ ಅವರನ್ನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪ್ರಚಾರ ಸಮಿತಿಗೆ ವೈ.ಎಸ್.ವಿ. ದತ್ತಾ, ಶಿಸ್ತುಪಾಲನ ಸಮಿತಿಗೆ ಮಾಜಿ ಸಚಿವ ನಾಗರಾಜಯ್ಯ ಅವರನ್ನ ನೇಮಕ ಮಾಡಲಾಗಿದೆ. ಇದನ್ನೂ ಓದಿ: ʻವೈಟ್ ಕಾಲರ್ ಉಗ್ರರ ಜಾಲʼದಲ್ಲಿ ವಿದ್ಯಾರ್ಥಿಗಳೂ ಭಾಗಿ – IED ತಯಾರಿಸುವ 2,900 Kg ಸ್ಫೋಟಕ ಪತ್ತೆ, 7 ಉಗ್ರರು ಅರೆಸ್ಟ್!
20 ಸದಸ್ಯರು ಒಳಗೊಂಡ ಕೋರ್ ಕಮಿಟಿ, 16 ಸದಸ್ಯರು ಒಳಗೊಂಡ ಪ್ರಚಾರ ಸಮಿತಿ ರಚನೆ ಮಾಡಿದ್ದು, ಹಾಲಿ,ಮಾಜಿ ಶಾಸಕರು,ಸಚಿವರು, ಪಕ್ಷದ ಹಿರಿಯ ನಾಯಕರಿಗೆ ಕಮಿಟಿಗಳಲ್ಲಿ ಸ್ಥಾನ ನೀಡಲಾಗಿದೆ. ಹೆಚ್‌ಡಿ ರೇವಣ್ಣಗೆ ಕೋರ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ.ಪ್ರಚಾರ ಸಮಿತಿಯಲ್ಲಿ ಸೂರಜ್ ರೇವಣ್ಣಗೆ ಸ್ಥಾನ ಕೊಟ್ಟರೆ ಜಿಟಿ ದೇವೇಗೌಡ ಪುತ್ರ ಹರೀಶ್ ಗೌಡಗೆ ಪ್ರಚಾರ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಇದನ್ನೂ ಓದಿ: ಅಮೆರಿಕದ ಜನತೆಗೆ 1.77 ಲಕ್ಷ ರೂ. ಡಿವಿಡೆಂಡ್ : ಟ್ರಂಪ್ ಘೋಷಣೆ

