ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದೂರು ದಾಖಲಾಗಿದೆ.
ಜೈಲಿನಲ್ಲಿ ನಿಷೇಧ ಇದ್ದರೂ ಮೊಬೈಲ್ ಬಳಕೆ ಮಾಡಿ ವಿಡಿಯೋ ಚಿತ್ರೀಕರಣವಾಗಿದೆ. ರೇಪಿಸ್ಟ್ ಉಮೇಶ್ ರೆಡ್ಡಿ, ಐಸಿಸ್ ಟೆರರಿಸ್ಟ್ ಜುಹಾದ್ ಹಮೀಲ್ ಶಕೀಲ್ ಮನ್ನಾ ಹಾಗೂ ಗೋಲ್ಡ್ ಸ್ಮಗ್ಲರ್ ತರುಣ್ ಕೊಂಡೂರ್‌ನಿಂದ ಮೊಬೈಲ್ ಬಳಕೆ ಮಾಡಲಾಗಿತ್ತು. ಟಿವಿ ನೋಡ್ತಾ ಮೊಬೈಲ್‌ನಲ್ಲಿ ಮಾತಾಡ್ತಿದ್ದ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಲಾಗಿದೆ.
ಅನುಮತಿ ಇಲ್ಲದೆ ಬಳಕೆ ಹಾಗೂ ವಿಡಿಯೋ ಚಿತ್ರೀಕರಣ ಹಿನ್ನೆಲೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ. ದೂರಿನ ಅನ್ವಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

