ಚಿಕ್ಕಬಳ್ಳಾಪುರ: ಹಳೆಯ ಪ್ರೇಯಸಿಯ (Lovers) ಜೊತೆ ತೆಗೆಸಿಕೊಂಡಿದ್ದ ಫೋಟೋಗಳನ್ನ ಊರಿಗೆಲ್ಲ ಹಂಚಿದ ಭಗ್ನ ಪ್ರೇಮಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ಕಟಮಾಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಲ್ಲಗುಟ್ಟಪಲ್ಲಿ ಗ್ರಾಮದ ಆನಂದ್ ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ. ಅಂದಹಾಗೆ ಆನಂದ್ ವಿವಾಹಿತನಾಗಿದ್ರೂ ವಿವಾಹಿತವಾಗಿರದ ಶ್ರಾವಣಿ ಎಂಬ ಯುವತಿ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ರು, ಕಳೆದ 6 ತಿಂಗಳ ಹಿಂದೆ ಬೇರೆಯಾಗಿದ್ರು ಎನ್ನಲಾಗಿದೆ. ಇದನ್ನೂ ಓದಿ: Anekal | ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ
ಶ್ರಾವಣಿ ಬೇರೊಬ್ಬ ಯುವಕನೊಂದಿಗೆ 2 ತಿಂಗಳ ಹಿಂದೆ ವಿವಾಹಿತಳಾಗಿದ್ದಳು. ಇದರಿಂದ ಕುಪಿತಗೊಂಡಿರೋ ಆನಂದ್ ಇಬ್ಬರು ಜೊತೆಯಲ್ಲಿದ್ದ ಫೋಟೋಗಳನ್ನ ಊರಿಗೆಲ್ಲ ಹಂಚಿ ವೈರಲ್ ಮಾಡಿದ್ದಾನೆ. ಹೀಗಾಗಿ ಶ್ರಾವಣಿ ಸಂಬಂಧಿಕರು ಆನಂದ್‌ನನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸಂಬಂಧ ಶ್ರಾವಣಿ ನೀಡಿದ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆನಂದ್ ನೀಡಿದ ದೂರಿನ ಮೇರೆಗೆ ಸಹ ಹಲ್ಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೊಡಗು | ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ರೈತನ ಏಲಕ್ಕಿ ತೋಟ ನಾಶ!


