ಮೈಸೂರು: ಪ್ರಶ್ನೆ ಮಾಡಿದ 13 ವರ್ಷದ ಬಾಲಕನ ಮೇಲೆ ಮೂವರು ಬಾಲಕರು ದಾಳಿ ಮಾಡಿ ಬಾಲಕನ ಗುಪ್ತಾಂಗಕ್ಕೆ ಒದ್ದು ಗಂಭೀರ ಗಾಯಗೊಳಿಸಿದ ಘಟನೆ ನಗರದಲ್ಲಿ ನಡೆದಿದೆ.
ಮೈಸೂರು (Mysuru) ಜಯಲಕ್ಷ್ಮಿ ಪುರಂನಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ (School) ಈ ಘಟನೆ ನಡೆದಿದೆ. ಬಾಲಕನಿಗೆ ಪ್ರತಿನಿತ್ಯ ಹಣಕೊಡು, ಮೊಬೈಲ್ ತೆಗೆದುಕೊಂಡು ಬಾ, ನಾವು ಹೇಳಿದ ಹಾಗೇ ಮಾಡು ಎಂದು ಮೂವರು ಬಾಲಕರು ರ‍್ಯಾಗಿಂಗ್ ಮಾಡುತ್ತಿದ್ದರು. ಇದನ್ನೂ ಓದಿ: ದರ್ಶನ್ ಹಾಸಿಗೆ, ದಿಂಬಿಗಾಗಿ ಕೋರ್ಟ್‌ಹೋಗ್ತಾರೆ, ಆದರೆ ಈ ಕೈದಿಗಳಿಗೆ ಎಲ್ಲವೂ ಸಿಗುತ್ತೆ: ಪರಂ ಸಿಟ್ಟು
ಅಕ್ಟೋಬರ್ 25 ರಂದು ಬಾಲಕನನ್ನು ಮೂವರು ಬಾಲಕರು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಇದರಿಂದ ಬಾಲಕನ ವೃಷಣಕ್ಕೆ ಗಂಭೀರ ಗಾಯವಾಗಿದೆ.
ಮೂವರ ಬಾಲಕರ ವಿರುದ್ಧ ದೂರು ತೆಗೆದುಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಬಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಾಲಕ ಹಾಗೂ ಆತನ ಸಂಬಂಧಿಕರು ಆಗ್ರಹಿಸಿದ್ದಾರೆ.

