ಆನೇಕಲ್: ಅಪಹರಣ (Kidnap) ಮತ್ತು ಕೊಲೆ (Murder) ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಬೊಮ್ಮಸಂದ್ರ (Bommasandra) ಸ್ಮಶಾನದ ಬಳಿ ಶನಿವಾರ ರಾತ್ರಿ ನಡೆದಿದೆ.
ಹೆಬ್ಬಗೋಡಿ ಇನ್ಸ್ಪೆಕ್ಟರ್ ಸೋಮಶೇಖರ್ ಅವರು ಆರೋಪಿ ರವಿ ಪ್ರಸಾದ್ ರೆಡ್ಡಿ ಕಾಲಿಗೆ ಗುಂಡು ಹಾರಿಸಿ ರಾತ್ರಿ ವಶಕ್ಕೆ ಪಡೆದಿದ್ದಾರೆ. ಜಿಗಣಿ ರಿಂಗ್ ರೋಡ್ ನಲ್ಲಿ ಬಾಲಪ್ಪ ರೆಡ್ಡಿ ಎಂಬವರನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದನ್ನೂ ಓದಿ: ದರ್ಶನ್ ಹಾಸಿಗೆ, ದಿಂಬಿಗಾಗಿ ಕೋರ್ಟ್‌ಹೋಗ್ತಾರೆ, ಆದರೆ ಈ ಕೈದಿಗಳಿಗೆ ಎಲ್ಲವೂ ಸಿಗುತ್ತೆ: ಪರಂ ಸಿಟ್ಟು
ಹಣ ಕೊಡದಿದ್ದಾಗ ತಮಿಳುನಾಡಿನ ಶಾನಮಾವು ಕಾಡಿನಲ್ಲಿ ಬಾಲಪ್ಪ ರೆಡ್ಡಿ ಅವರನ್ನು ಕತ್ತು ಸೀಳಿ ಸಾಯಿಸಿ ಮೃತ ದೇಹವನ್ನು ಕಾಡಿನಲ್ಲಿ ಎಸೆದು ರವಿ ಪರಾರಿಯಾಗಿದ್ದ. ಇದಕ್ಕೂ ಮೊದಲು ಮಾದೇಶ ಎಂಬವರನ್ನು ರವಿ ಕೊಲೆ ಮಾಡಿದ್ದ.
ಟೆಕ್ನಿಕಲ್ ದಾಖಲೆ ಆಧಾರಿಸಿ ಆರೋಪಿ ರವಿಯನ್ನು ಬಂಧಿಸಲಾಗಿತ್ತು. ಸ್ಥಳ ಮಹಜರು ಮಾಡುವ ವೇಳೆ ಆರೋಪಿ ಕಾನ್‌ಸ್ಟೇಬಲ್ ಮೇಲೆ ದಾಳಿ ನಡೆಸಿದ್ದಾನೆ. ದಾಳಿ ನಿಲ್ಲಿಸದೇ ಇದ್ದಾಗ ಇನ್ಸ್ಪೆಕ್ಟರ್ ಸೋಮಶೇಖರ್ ಅವರು ಎರಡು ಕಾಲಿಗೆ ಗುಂಡು ಹೊಡೆದು ಅವನನ್ನು ಬಂಧಿಸಿದ್ದಾರೆ.


