ಟಾಲಿವುಡ್ ಬ್ಯೂಟಿ c (Samantha Ruth Prabhu) ಹಾಗೂ ರಾಜ್ ನಿಧಿಮೋರು (Raj Nidimoru) ಒಟ್ಟೊಟ್ಟಿಗೆ ಕಾಣಿಸಿಕೊಂಡ ಹಲವಾರು ಸಂದರ್ಭಗಳು ಕ್ಯಾಮರಾದ ಕಣ್ಣಲ್ಲಿ ಸೆರೆಯಾಗಿವೆ. ಹಾಗೆ ಸೆರೆಯಾದ ಫೋಟೋಗಳು, ಸುಂದರ ಕ್ಷಣಗಳು ಸಮಂತಾ ಅವರ ಸಾಮಾಜಿಕ ಜಾಲತಾಣದ ಮುಖಾಂತರ ಜಗಜ್ಜಾಹೀರಾಗಿವೆ. ಒಂದೊಂದು ಫೋಟೋಗಳು ನೂರೆಂಟು ಕಹಾನಿಗಳನ್ನ ಹೇಳಿವೆ.
ಸಮಂತಾ ನಾಗಚೈತನ್ಯರಿಂದ ವಿಚ್ಛೇದನ ಪಡೆದ ಬಳಿಕ ಒಬ್ಬಂಟಿಯಾಗಿದ್ದಾರೆ. ಕಳೆದ ವರ್ಷ ಅವರ ತಂದೆ ಕೂಡಾ ಅವರಿಂದ ಅಗಲಿದ್ದಾರೆ. ಅವರಿಗೆ ಆರೋಗ್ಯ ಕೂಡಾ ಸರಿಯಿಲ್ಲ. ಜೀವನದ ಆಗು ಹೋಗುಗಳನ್ನ ಹೇಳಿಕೊಳ್ಳಲು ಒಬ್ಬ ಗೆಳೆಯ ಬೇಕೇ ಬೇಕಲ್ಲವೇ. ಹೀಗಾಗಿ ಆಗಾಗ ಫ್ಯಾಮಿಲಿ ಮ್ಯಾನ್ ನಿರ್ದೇಶಕ ರಾಜ್ ನಿಧಿಮೋರು ಜೊತೆ ಕಾಣಿಸಿಕೊಳ್ಳುತ್ತಾರೆ.ಇದನ್ನೂ ಓದಿ: `ನನ್ನ ಜೀವ ನೀನು’ ಹಾಡಿಗೆ ಕುಣಿದ ಅಭಿಷೇಕ್, ಹೃತಿಕಾ
ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್ ದೇವಸ್ಥಾನಗಳಿಗೂ ಭೇಟಿ ಮಾಡಿದ್ದಾರೆ. ಕ್ರಿಕೆಟ್ ಮ್ಯಾಚ್, ಇವೆಂಟ್, ಪಾರ್ಟಿಗಳಲ್ಲಿ ತೊಡಗಿಕೊಂಡ ಹಲವಾರು ನಿದರ್ಶನಗಳು ಕಾಣಸಿಗುತ್ತವೆ. ಇದೀಗ ಸಮಂತಾ ಹಂಚಿಕೊಂಡ ಫೋಟೋದಲ್ಲಿ ರಾಜ್ ಹಾಗೂ ಸಮಂತಾ ಅತೀ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿ ಸಮಂತಾ ರಾಜ್ ಸದ್ಯದಲ್ಲಿಯೇ ಮದುವೆ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಈ ಮೂಲಕ ಸಮಂತಾ 2ನೇ ಮದ್ವೆಗೆ ತಯಾರಾಗಿದ್ದಾರೆ ಎನ್ನುವ ಪ್ರಶ್ನೆ ಸಹಜವಾಗಿ ಅವರ ಅಭಿಮಾನಿ ಬಳಗದಲ್ಲಿ ಮೂಡಿದೆ.

