ನವದೆಹಲಿ: ಡಿಸೆಂಬರ್ 1ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು (Parliament Winter Session) ಕರೆಯುವ ಸರ್ಕಾರದ ಪ್ರಸ್ತಾವನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅನುಮೋದಿಸಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ತಿಳಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಕರೆಯುವ ಸರ್ಕಾರದ ಪ್ರಸ್ತಾಪವನ್ನು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮತ್ತು ಜನರ ಆಕಾಂಕ್ಷೆಗಳನ್ನು ಈಡೇರಿಸುವ ರಚನಾತ್ಮಕ ಮತ್ತು ಫಲಪ್ರದ ಅಧಿವೇಶನವನ್ನು ಎದುರು ನೋಡುತ್ತಿದ್ದೇನೆ ಎಂದು ಕಿರಣ್ ರಿಜುಜು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಬ್ಬು ಕದನ | ರೈತರ ಪ್ರತಿಭಟನೆ ವೇಳೆ ಕಲ್ಲು ತೂರಾಟ; 11 ಜನರ ವಿರುದ್ಧ FIR
ಕಳೆದ ಆಗಸ್ಟ್ 21ರಂದು ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಎಸ್‌ಐಆರ್ ವಿರುದ್ಧ ಪ್ರತಿಪಕ್ಷಗಳ ಗದ್ದಲದಿಂದಾಗಿ, ಸಂಸತ್ತಿನ 166 ಗಂಟೆಗಳ ಕಾಲ ವ್ಯರ್ಥವಾಯಿತು. ಇದರಿಂದಾಗಿ ಸುಮಾರು 248 ಕೋಟಿ ರೂ. ಸಾರ್ವಜನಿಕ ತೆರಿಗೆ ಹಣ ನಷ್ಟವಾಯಿತು. ಗದ್ದಲದಿಂದಾಗಿ ಲೋಕಸಭೆಯ 84.5 ಗಂಟೆಗಳ ಕಾಲ ವ್ಯರ್ಥವಾಯಿತು, ರಾಜ್ಯಸಭೆಯ 81.12 ಗಂಟೆಗಳ ಕಾಲ ವ್ಯರ್ಥವಾಯಿತು. ಇದನ್ನೂ ಓದಿ: ದೆಹಲಿ ಎಟಿಸಿ ತಾಂತ್ರಿಕ ಸಮಸ್ಯೆಗೆ ಪರಿಹಾರ – ಸಹಜ ಸ್ಥಿತಿಗೆ ವಿಮಾನಗಳ ಹಾರಾಟ

