– ಪೊಲೀಸರ ಹತ್ಯೆಗೆ ಯತ್ನಿಸಿ ಕಲ್ಲು ತೂರಾಟ ಅಂತ ದೂರಿನಲ್ಲಿ ಉಲ್ಲೇಖ
– ಘಟನೆಯಲ್ಲಿ ಗಾಯಗೊಂಡ ಪೊಲೀಸರ ಆರೋಗ್ಯ ವಿಚಾರಿಸಿದ ಎಡಿಜಿಪಿ
ಬೆಳಗಾವಿ: ಕಬ್ಬಿನ (Sugarcane) ಬೆಂಬಲ ನಿಗದಿಗಾಗಿ ನಿನ್ನೆ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ರೈತರು ಪ್ರತಿಭಟನೆ (Farmers Protest) ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಪೊಲೀಸರತ್ತ ರೈತರು ಕಲ್ಲು ತೂರಿದ್ದರು. ಈ ಸಂಬಂಧ ಇಂದು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR( ದಾಖಲು ಮಾಡಲಾಗಿದೆ.
ಕಲ್ಲು ತೂರಿದ 11 ಮಂದಿ ವಿರುದ್ಧ ಪಿಎಸ್‌ಐ ಆರ್.ವಿ ಪಾಟೀಲ್ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ಪ್ರತಿಭಟನೆ ವೇಳೆ ಪೊಲೀಸರನ್ನ (Belagavi Police) ಕೊಲೆ ಮಾಡುವ ಉದ್ದೇಶದಿಂದ ಕಲ್ಲು ತೂರಾಟ ಮಾಡಿ, ಪೊಲೀಸರನ್ನ ಒದ್ದು ಹಲ್ಲೆ ಮಾಡಿ ತೀವ್ರ ಗಾಯ ಗೊಳಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಇದನ್ನೂ ಓದಿ: 50:50 ಸೂತ್ರಕ್ಕೆ ವಿರೋಧ ಇಲ್ಲ – ಕಾರ್ಖಾನೆ ಮಾಲೀಕರ ಬೇಡಿಕೆ ಕುರಿತು ಪ್ರತ್ಯೇಕ ಸಭೆ: ಸಿಎಂ
ಪೊಲೀಸರ ಆರೋಗ್ಯ ವಿಚಾರಿಸಿದ ಎಡಿಜಿಪಿ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಡಿಜಿಪಿ ಹಿತೇಂದ್ರ ಆರ್ ಪರಿಶೀಲನೆ ನಡೆಸಿದ್ರು. ಯಮಕನಮರಡಿ ಠಾಣೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಿಸಿಟಿವಿ ಪರಿಶೀಲನೆ ನಡೆಸಿ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ರು. ಇದನ್ನೂ ಓದಿ: ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡಗೆ ಶಾಕ್ – ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ
ಹತ್ತರಗಿ ಟೋಲ್ ಬಳಿ ಕಲ್ಲುತೂರಾಟ
ನಿನ್ನೆ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ರು. ಕೆಎಲ್‌ಇ ಆಸ್ಪತ್ರೆಯಲ್ಲಿ ಗಾಯಾಳು ಸಿಬ್ಬಂದಿ ಚಿಕಿತ್ಸೆ ನೀಡಲಾಗ್ತಿದ್ದು. ಆಸ್ಪತ್ರೆಗೆ ಭೇಟಿ ನೀಡಿದ ಎಡಿಜಿಪಿ ಹಿತೇಂದ್ರ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ರು. ಬಳಿಕ ಪ್ರತಿಕ್ರಿಯಿಸಿದ ಎಡಿಜಿಪಿ. ಕಲ್ಲು ತೂರಾಟದಲ್ಲಿ ನಮ್ಮ 11 ಸಿಬ್ಬಂದಿಗೆ ಗಾಯವಾಗಿದೆ. 4-5 ಸರ್ಕಾರಿ ವಾಹನ, ಇನ್ನಿತರ ವಾಹನ ಸೇರಿ 10ಕ್ಕೂ ಹೆಚ್ಚು ವಾಹನಗಳಿಗೆ ಹಾನಿ ಆಗಿದೆ. ಘಟನಾ ಸ್ಥಳದಲ್ಲಿದ್ದ 40-50 ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದೇವೆ. ಪ್ರತಿಭಟನೆ ವೇಳೆ ದೊಡ್ಡ ಜನಸಮೂಹ ಸೇರಿದ್ದರಿಂದ ಘಟನೆ ನಡೆದಿದೆ. ಈ ಬಗ್ಗೆ ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋ ಪರಿಶೀಲಿಸಿ ಕ್ರಮ ಕೈಗೊಳ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಐಸಿಸ್‌ಗೆ ಮುಸ್ಲಿಂ ಯುವಕರನ್ನ ನೇಮಿಸುತ್ತಿದ್ದ ಉಗ್ರನಿಗೆ ಬೆಂಗಳೂರು ಸೆಂಟ್ರಲ್ ಜೈಲಲ್ಲಿ ರಾಜಾತಿಥ್ಯ!
50 ರೂ. ಹೆಚ್ಚುವರಿ ನೀಡಲು ಮಾಲೀಕರ ವಿರೋಧ
ಇನ್ನೂ ಪ್ರತಿ ಟನ್ ಕಬ್ಬಿಗೆ 50 ರೂ. ಹೆಚ್ಚುವರಿ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು ವಿರೋಧ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಮಾಲೀಕರು 50 ರೂ. ಕೊಡಬೇಕು. ಸರ್ಕಾರ ಸಹ 50 ರೂ. ಕೊಡಲಿದೆ. ಇದು ಮಾಲೀಕರ ಎದುರೇ ಮಾಡಿರುವ ನಿರ್ಧಾರ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಲಿದೆ. ಮಾಲೀಕರ ಬೇಡಿಕೆ ಕುರಿತು ಪ್ರತ್ಯೇಕ ಸಭೆ ಮಾಡಿ ತೀರ್ಮಾನ ಮಾಡ್ತೀವಿ ಎಂದಿದ್ದಾರೆ. ಇನ್ನು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಎಲ್ಲರೂ ವಿರೋಧ ಮಾಡಿಲ್ಲ. ಕೆಲ ಮಾಲೀಕರು ವಿರೋಧಿಸಿದ್ದಾರೆ. ಅವರನ್ನೂ ಒಪ್ಪಿಸುವಂತಹ ಕೆಲಸ ಮಾಡ್ತೇವೆ ಎಂದಿದ್ದಾರೆ. ಜೊತೆಗೆ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿ. ಸಿಎಂ ಸ್ಪಷ್ಟವಾಗಿ 3,300 ರೂ ಬೆಂಬಲ ಬೆಲೆ ಘೋಷಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಇಳುವರಿ ಸ್ವಲ್ಪ ಕಡಿಮೆ ಬರುತ್ತೆ. ಅದಕ್ಕೆ ಸ್ವಲ್ಪ ಗೊಂದಲ ಇದೆ. ಸಕ್ಕರೆ ಸಚಿವರೊಂದಿಗೆ ಚರ್ಚಿಸಿ ನಂತರ ರೈತರಿಗೆ ಸ್ಪಷ್ಟನೆ ನೀಡ್ತೇನೆ ಎಂದಿದ್ದಾರೆ.
ವಿಜಪುರದಲ್ಲಿ ಮುಂದುವರಿದ ಪ್ರತಿಭಟನೆ
ವಿಜಯಪುರದಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಸಿಎಂ ಘೋಷಿಸಿರುವ 3,300 ರೂ ಬೆಂಬಲ ಬೆಲೆಗೆ ಜಿಲ್ಲೆಯ ರೈತರು ಒಪ್ಪಿದ್ದಾರೆ. ಆದ್ರೆ ಅಧಿಕೃತ ಆದೇಶ ಪ್ರತಿ ಸಿಗುವವರೆಗೂ ಹೋರಾಟ ಮುಂದುವರೆಸಲು ರೈತರು ನಿರ್ಧರಿಸಿದ್ದು, ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ. ಇಂದು ಸಂಜೆವರೆಗೆ ಅಧಿಕೃತ ಆದೇಶ ತಲುಪಿಸಲು ರೈತರು ಗಡುವು ನೀಡಿದ್ದಾರೆ. ಇಲ್ಲದಿದ್ದರೆ ನಾಳೆಯಿಂದ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ.


