– ಸ್ನೇಹಿತನನ್ನ ಕರೆಸಿ ಚಳಿಬಿಡಿಸಿದ ಯುವತಿ, ತಪ್ಪೊಪ್ಪಿಕೊಂಡ ಕಾಮುಕ
ಬೆಂಗಳೂರು: ನಗರದಲ್ಲಿ ಬೈಕ್ ಟ್ಯಾಕ್ಸಿ (Bike Taxi) ಹೆಣ್ಮಕ್ಕಳಿಗೆ ಸೇಫ್ ಅಲ್ವಾ ಅನ್ನೋ ಅನುಮಾನ ಶುರುವಾಗಿದೆ. ಇಲ್ಲೊಬ್ಬ ಕಾಮುಕ ಬೈಕ್ ಟ್ಯಾಕ್ಸಿ ಚಾಲಕ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.
ರೈಡ್ ಉದ್ದಕ್ಕೂ ಯುವತಿಯ ಕಾಲು, ತೊಡೆ ಸವರಿ ದುರ್ವರ್ತನೆ ತೋರಿದ್ದಾನೆ. ಯುವತಿ ಕಾಲಿನ ಮೇಲೆ ಚಾಲಕ ಕೈ ಇಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ನವೆಂಬರ್ 6ರಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಜಾಮೀನು ನಿರೀಕ್ಷೆಯಲ್ಲಿದ್ದ ಪವಿತ್ರಾ ಗೌಡಗೆ ಶಾಕ್ – ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ
ಘಟನೆಯ ವಿಡಿಯೋ ಮಾಡಿ ಯುವತಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. KA55 EA4344 ಬೈಕ್ ರೈಡ್ ಮಾಡುತ್ತಿದ್ದ ಚಾಲಕ ಲೋಕೇಶ್ ದುರ್ವರ್ತನೆ ತೋರಿದ್ದಲ್ಲದೇ, ಪ್ರಶ್ನಿಸಿದ್ರೂ ಮತ್ತೆ ಯುವತಿಯ ಮೈ ಮುಟ್ಟಿ ಕಿರುಕುಳ ನೀಡಿದ್ದಾನೆ.
ಸ್ಥಳಕ್ಕೆ ತಲುಪಿದ ಬಳಿಕ ಯುವತಿಯ ಸ್ನೇಹಿತ ಚಾಲಕನನ್ನ ತರಾಟೆ ತೆಗೆದುಕೊಂಡಿದ್ದು, ಚಾಲಕ ತಪ್ಪಾಯ್ತು ಎಂದು ಒಪ್ಪಿಕೊಂಡಿದ್ದಾನೆ. ಬೈಕ್ ಟ್ಯಾಕ್ಸಿ ಚಾಲಕನ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಬಹು ಕೋಟಿ ವಂಚನೆ ಕೇಸ್ – ರೋಷನ್ ಸಲ್ಡಾನ 2.85 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

