ಬಮಾಕೊ: ಪಶ್ಚಿಮ ಮಾಲಿಯ (Mali) ಕೋಬ್ರಿಯಲ್ಲಿ ಭಾರತೀಯ (India) ಮೂಲದ ಐವರು ಕಾರ್ಮಿಕರನ್ನು ಬಂದೂಕುಧಾರಿಗಳು ಅಪಹರಿಸಿದ್ದಾರೆ. ಹೆಚ್ಚುತ್ತಿರುವ ಅಶಾಂತಿ ಮತ್ತು ಜಿಹಾದಿ ಹಿಂಸಾಚಾರದ ನಡುವೆ ಈ ಅಪಹರಣ ನಡೆದಿದೆ.
ಗುರುವಾರ ಕಾರ್ಮಿಕರನ್ನು ಬಂದೂಕುಧಾರಿಗಳು ಅಪಹರಿಸಿದ್ದಾರೆ. ಅವರೆಲ್ಲ ವಿದ್ಯುತ್ ಯೋಜನೆಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಐವರು ಕಿಡ್ನ್ಯಾಪ್ ಆಗಿರುವ ಬಗ್ಗೆ ಕಂಪನಿ ಮತ್ತು ಭದ್ರತಾ ಮೂಲಗಳು ದೃಢಪಡಿಸಿವೆ. ಇಲ್ಲಿಯವರೆಗೆ ಯಾವುದೇ ಗುಂಪು ಅಪಹರಣದ ಹೊಣೆ ಹೊತ್ತುಕೊಂಡಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತಕ್ಕೆ ಕೌಂಟರ್ ಕೊಡಲು ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸಿದೆ: ಮಾಜಿ ಸಿಐಎ ಅಧಿಕಾರಿ
ಮುನ್ನೆಚ್ಚರಿಕಾ ಕ್ರಮವಾಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಇತರ ಭಾರತೀಯರನ್ನು ರಾಜಧಾನಿಯಾದ ಬಮಾಕೊಗೆ ಸ್ಥಳಾಂತರಿಸಲಾಗಿದೆ.
ಪ್ರಸ್ತುತ ಮಿಲಿಟರಿ ಆಡಳಿತವಿರುವ ಮಾಲಿ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಿಸಲು ಹೆಣಗಾಡುತ್ತಿದೆ. 2012 ರಿಂದ ದಂಗೆಗಳು ಮತ್ತು ಸಂಘರ್ಷಗಳಿಂದ ಬಳಲುತ್ತಿರುವ ಇಲ್ಲಿ ವಿದೇಶಿಯರನ್ನು ಗುರಿಯಾಗಿಸಿ ನಡೆಯುವ ಅಪಹರಣಗಳು ಸಾಮಾನ್ಯವಾಗಿದೆ. ಜೆಎನ್‌ಐಎಂ ಜಿಹಾದಿಗಳು ಸೆಪ್ಟೆಂಬರ್‌ನಲ್ಲಿ ಬಮಾಕೊ ಬಳಿ ಇಬ್ಬರು ಎಮಿರಾಟಿ ಪ್ರಜೆಗಳು ಮತ್ತು ಒಬ್ಬ ಇರಾನಿಯನ್ನರನ್ನು ಅಪಹರಿಸಿದ್ದರು.
ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್‌ಗೆ ಸೇರಿದ ಗುಂಪುಗಳು ಕಾರಣ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಷ್ಯಾದಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ವೈದ್ಯ ವಿದ್ಯಾರ್ಥಿಯ ಶವ ಡ್ಯಾಮ್‌ನಲ್ಲಿ ಪತ್ತೆ

