ಬೆಂಗಳೂರು: ಯುವಕ ಪ್ರೀತಿ ನಿರಾಕರಿಸಿದ್ದಕ್ಕೆ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ಹುಸಿಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಮಾತು ಕೇಳಿ ಟೆಕ್ಕಿ ಎಡವಟ್ಟು ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಪ್ರಿಯಕರನಿಂದ ಪ್ರೇಮ ವಂಚನೆಗೊಳಗಾದ ಸಾಫ್ಟ್‌ವೇರ್ ಎಂಜಿನಿಯರ್ ರೆನಿ ಜೊಶೀಲ್ಡಾನ್ನು ಗುರುವಾರ (ನ.7) ಉತ್ತರ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದರು.ಇದನ್ನೂ ಓದಿ: ಕಬ್ಬು ಬೆಳೆಗಾರರ ಪ್ರತಿಭಟನೆ | ಕೇಂದ್ರ ಸರ್ಕಾರ ಕಡ್ಲೇಕಾಯಿ ತಿನ್ನುತ್ತಿದೆಯೇ: ಕೃಷ್ಣ ಬೈರೇಗೌಡ ಪ್ರಶ್ನೆ
ಪೊಲೀಸರ ಮಾಹಿತಿ ಪ್ರಕಾರ, ಯುವಕ ಪ್ರೀತಿಯನ್ನು ನಿರಾಕರಿಸಿದ್ದಲ್ಲದೇ, ಆತನಿಗೆ ಬೇರೆ ಮದುವೆ ಕೂಡ ನಿಗದಿಯಾಗಿತ್ತು. ಇದರಿಂದ ಕೋಪಗೊಂಡಿದ್ದ ಟೆಕ್ಕಿ ಆತನಿಗೆ ಪಾಠ ಕಲಿಸಬೇಕೆಂದು ಜ್ಯೋತಿಷಿ ಬಳಿ ಹೋಗಿದ್ದಳು. ಆಗ ಜ್ಯೋತಿಷಿ ಮಾತು ಕೇಳಿ ಅವನೊಬ್ಬ ರೇಪಿಸ್ಟ್, ಕ್ಯಾರೆಕ್ಟರ್ ಸರಿಯಿಲ್ಲ ಅಂತ ಇಲ್ಲಸಲ್ಲದ ಆರೋಪ ಹೊರಿಸಲು ಯತ್ನಿಸಿದ್ದಳು. ಆದರೆ ಅದು ವಿಫಲವಾಗಿತ್ತು. ಬಳಿಕ ಮತ್ತೆ ಜ್ಯೋತಿಷಿ ಬಳಿ ಹೋಗಿದ್ದಳು. ಆಗ ಜ್ಯೋತಿಷಿ ಅವನೊಬ್ಬ ಭಯೋತ್ಪಾದಕನಂತೆ ಬಿಂಬಿಸಲು ತಿಳಿಸಿದ್ದರು.
ಜ್ಯೋತಿಷಿ ಮಾತಿನಂತೆ ಯುವಕನ ಇಮೇಲ್ ಐಡಿಯಿಂದ ಬೆಂಗಳೂರಿನ ಶಾಲಾ-ಕಾಲೇಜಿಗೆ ಬಾಂಬ್ ಬೆದರಿಕೆ ಮೇಲ್ ಕಳುಹಿಸಿದ್ದಳು. ಆದರೆ ಅಸಲಿಗೆ ಆರೋಪಿತೆ ತನ್ನನ್ನು ಪ್ರೀತಿಸುತ್ತಿದ್ದಾಳೆಂಬ ವಿಷಯ ಯುವಕನಿಗೆ ಗೊತ್ತಿರಲಿಲ್ಲ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಆರೋಪಿತೆ VPN, ಇಂಟರನೆಟ್ ಬಳಕೆ ಮಾಡುತ್ತಿದ್ದಳು. ಗೇಟ್ ಕೋಡ್ ಎಂಬ ಅಪ್ಲೀಕೇಶನ್‌ನ ವರ್ಚುವಲ್ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದಳು. ಸುಮಾರು ಆರರಿಂದ ಏಳು ವಾಟ್ಸಪ್ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದಳು. ಬಾಡಿ ವಾರೆಂಟ್ ಮುಖಾಂತರ ಗುಜರಾತ್‌ನಿಂದ ಕರೆದುಕೊಂಡು ಬಂದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಬೆಂಗಳೂರಿನ ಕಲಾಸಿಪಾಳ್ಯ ಸೇರಿ ಇತರೆ ಆರು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆರೋಪಿತೆ ವಿರುದ್ಧ ಗುಜರಾತ್, ಮೈಸೂರು, ತಮಿಳುನಾಡಿನ ಚೆನ್ನೈನಲ್ಲಿ ಹುಸಿಬಾಂಬ್ ಬೆದರಿಕೆ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ – ನ.13ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ

