ಇಸ್ಲಾಮಾಬಾದ್: ಭಾರತವನ್ನು (India) ಎದುರಿಸಲು ಪಾಕಿಸ್ತಾನ (Pakistan) ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ ಎಂದು ಮಾಜಿ ಸಿಐಎ ಅಧಿಕಾರಿ ರಿಚರ್ಡ್ ಬಾರ್ಲೋ (Richard Barlow) ತಿಳಿಸಿದ್ದಾರೆ.
1980 ರ ದಶಕದಲ್ಲಿ ಪಾಕಿಸ್ತಾನದ ರಹಸ್ಯ ಪರಮಾಣು ಚಟುವಟಿಕೆಗಳ ಸಮಯದಲ್ಲಿ ಗುಪ್ತಚರ ಸಂಸ್ಥೆಯ ಭಾಗವಾಗಿದ್ದ ರಿಚರ್ಡ್ ಬಾರ್ಲೋ ಮಾತನಾಡಿ, 1974 ರಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆದ ಭಾರತದ ಸಾಮರ್ಥ್ಯಕ್ಕೆ ಕೌಂಟರ್ ಆಗಿ ಪಾಕಿಸ್ತಾನದ ಕಾರ್ಯಕ್ರಮ ರೂಪಿಸಲು ಉದ್ದೇಶಿಸಲಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷ ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ
ಭಾರತವನ್ನು ಎದುರಿಸುವುದು ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಪಡಿಸುವುದು ಪಾಕ್ನ ಪ್ರಾಥಮಿಕ ಉದ್ದೇಶವಾಗಿತ್ತು. ಆದರೆ, ಪಾಕ್ನ ಪರಮಾಣು ಬಾಂಬ್ನ ಪಿತಾಮಹ ಅಬ್ದುಲ್ ಖದೀರ್ ಖಾನ್ ನೇತೃತ್ವದಲ್ಲಿ, ಇರಾನ್ ಸೇರಿದಂತೆ ಇತರ ಇಸ್ಲಾಮಿಕ್ ರಾಷ್ಟ್ರಗಳಿಗೆ ತಂತ್ರಜ್ಞಾನವನ್ನು ವಿಸ್ತರಿಸಲು ಮತ್ತು ವೇಗಗೊಳಿಸಲು ಉದ್ದೇಶಿಸಲಾಯಿತು. ಮುಂದೆ ಈ ಪರಿಕಲ್ಪನೆ ‘ಇಸ್ಲಾಮಿಕ್ ಬಾಂಬ್’ ಆಗಿ ವಿಕಸನಗೊಂಡಿತು ಎಂದು ನೆನಪಿಸಿಕೊಂಡಿದ್ದಾರೆ.
ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಪ್ರಾಥಮಿಕ ಉದ್ದೇಶ ಭಾರತವನ್ನು ಎದುರಿಸುವುದಾಗಿತ್ತು. ಆದರೆ, ಎಕ್ಯೂ ಖಾನ್ ಮತ್ತು ಜನರಲ್ಗಳ ದೃಷ್ಟಿಕೋನದಿಂದ ‘ಅದು ಕೇವಲ ಪಾಕಿಸ್ತಾನಿ ಬಾಂಬ್ ಅಲ್ಲ; ಅದು ಇಸ್ಲಾಮಿಕ್ ಬಾಂಬ್, ಮುಸ್ಲಿಂ ಬಾಂಬ್ ಎಂಬುದು ಸ್ಪಷ್ಟವಾಗಿತ್ತು’ ಎಂದಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್ನ ಮೇಯರ್ ಆಗಿ ಮೊದಲ ಭಾರತೀಯ-ಅಮೆರಿಕನ್ ಮುಸ್ಲಿಂ ಜೊಹ್ರಾನ್ ಮಾಮ್ದಾನಿ ಆಯ್ಕೆ
‘ನಮ್ಮಲ್ಲಿ ಕ್ರಿಶ್ಚಿಯನ್ ಬಾಂಬ್ ಇದೆ. ನಮ್ಮ ಬಳಿ ಯಹೂದಿ ಬಾಂಬ್ ಇದೆ ಮತ್ತು ಹಿಂದೂ ಬಾಂಬ್ ಇದೆ. ನಮಗೆ ಮುಸ್ಲಿಂ ಬಾಂಬ್ ಬೇಕು’ ಎಂದು ಎಕ್ಯೂ ಖಾನ್ ಒಮ್ಮೆ ಹೇಳಿದ್ದರು. ಪಾಕಿಸ್ತಾನವು ಇತರ ಮುಸ್ಲಿಂ ರಾಷ್ಟ್ರಗಳಿಗೆ ಪರಮಾಣು ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ ಎಂಬುದು ನನಗೆ ಸ್ಪಷ್ಟವಾಗಿತ್ತು. ಮುಂದೆ ಅದೇ ಆಯಿತು ಎಂದು ತಿಳಿಸಿದ್ದಾರೆ.
1936 ರಲ್ಲಿ ಅವಿಭಜಿತ ಭಾರತದ ಭೋಪಾಲ್ನಲ್ಲಿ ಖಾನ್ ಜನಿಸಿದ್ದರು. ವಿಭಜನೆಯ ನಂತರ 1952 ರಲ್ಲಿ ತನ್ನ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ವಲಸೆ ಬಂದರು. ಉತ್ತರ ಕೊರಿಯಾ, ಇರಾನ್ ಮತ್ತು ಲಿಬಿಯಾದಂತಹ ರಾಕ್ಷಸ ರಾಷ್ಟ್ರಗಳಿಗೆ ತಂತ್ರಜ್ಞಾನವನ್ನು ಕಳ್ಳಸಾಗಣೆ ಮಾಡಿದ್ದರಿಂದ ಅವರು ವಿಶ್ವದ ಅತ್ಯಂತ ಕುಖ್ಯಾತ ಪರಮಾಣು ಕಳ್ಳಸಾಗಣೆದಾರರಲ್ಲಿ ಒಬ್ಬರಾಗಿದ್ದರು.


