Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್‌ ಕನ್ನಡಿಗರು!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್‌ ಕನ್ನಡಿಗರು!

Sports

ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್‌ ಕನ್ನಡಿಗರು!

Public TV
Last updated: November 7, 2025 3:30 pm
Public TV
Share
3 Min Read
RCB Champions
SHARE

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB) ತಂಡವನ್ನು ಖರೀದಿಸಲು ಇಬ್ಬರು ಕನ್ನಡಿಗರು ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ.

ಆರ್‌ಸಿಬಿ ತಂಡವನ್ನು ಡಿಯಾಜಿಯೊ (Diageo) ಮಾರಾಟ ಮಾಡಲಿದೆ ಎಂದು ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ (United Spirits) ಅಧಿಕೃತವಾಗಿ ಹೇಳಿದ ಬೆನ್ನಲ್ಲೇ ಹಲವು ಖರೀದಿದಾರರ ಹೆಸರು ಓಡಾಡುತ್ತಿದೆ. ಈ ಪಟ್ಟಿಗೆ ಈಗ ಇಬ್ಬರು ಕನ್ನಡಿಗ ಶತಕೋಟ್ಯಧಿಪತಿಗಳು ಹೆಸರು ಸೇರ್ಪಡೆಯಾಗಿದೆ.

ಡಿಸ್ಕೌಂಟ್ ಬ್ರೋಕರೇಜ್ ಪ್ಲಾಟ್‌ಫಾರ್ಮ್ ಜೆರೋಧಾದ (Zerodha) ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಮತ್ತು ಮಣಿಪಾಲ್ ಎಜುಕೇಶನ್ ಅಂಡ್ ಮೆಡಿಕಲ್ ಗ್ರೂಪ್ (MEMG) ಅಧ್ಯಕ್ಷ ರಂಜನ್ ಪೈ (Ranjan Pai) ಆರ್‌ಸಿಬಿ ತಂಡವನ್ನು ಖರೀದಿಸಲು ಆಸಕ್ತಿ ವಹಿಸಿದ್ದಾರೆ ಎಂದು ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಆರ್‌ಸಿಬಿಯಲ್ಲಿ ಬೆಂಗಳೂರು ಇದೆ. ಹೀಗಾಗಿ ಕರ್ನಾಟಕದ ವ್ಯಕ್ತಿಗಳು ಮಾಲೀಕತ್ವ ಹೊಂದಿದರೆ ಅದರ ಬ್ರ್ಯಾಂಡ್‌ ಮೌಲ್ಯ ಮತ್ತಷ್ಟು ಹೆಚ್ಚಾಗಬಹುದು ಮತ್ತು ಅಭಿಮಾನಿಗಳು ಇಷ್ಟಪಡಬಹುದು ಎನ್ನುವ ಕಾರಣಕ್ಕೆ ಆರ್‌ಸಿಬಿ ಖರೀದಿಗೆ ಕನ್ನಡಿಗ ಉದ್ಯಮಿಗಳು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:  ಆರ್‌ಸಿಬಿಯಲ್ಲೇ ಉಳಿಯಲಿದ್ದಾರೆ ಸ್ಮೃತಿ, ಪೆರ್ರಿ – ಯಾವ ತಂಡದಲ್ಲಿ ಯಾರು? ಯಾರಿಗೆ ಎಷ್ಟು ಕೋಟಿ?

ಜೆರೋಧಾ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಮತ್ತು ಮಣಿಪಾಲ ಗ್ರೂಪ್‌ ಮುಖ್ಯಸ್ಥ ರಂಜನ್‌ ಪೈ
ಜೆರೋಧಾ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಮತ್ತು ಮಣಿಪಾಲ ಗ್ರೂಪ್‌ ಮುಖ್ಯಸ್ಥ ರಂಜನ್‌ ಪೈ

ಕೋವಿಡ್‌ ಲಸಿಕೆ (Covid Vaccine) ಕೋವಿಶೀಲ್ಡ್‌ ತಯಾರಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನವಾಲಾ (Adar Poonawalla) ಅವರು ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಈ ಮೂವರು ಒಳಗೊಂಡ ಒಕ್ಕೂಟವು ಆರ್‌ಸಿಬಿ ಖರೀದಿಗೆ ಬಿಡ್‌ ಮಾಡಬಹುದು ಎನ್ನಲಾಗುತ್ತಿದೆ. ಆದರೆ ಇಲ್ಲಿಯವರೆಗೆ ನಿಖಿಲ್‌ ಕಾಮತ್‌ ಮತ್ತು ರಂಜನ್‌ ಪೈ ಆರ್‌ಸಿಬಿ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫೋರ್ಬ್ಸ್ ಪ್ರಕಾರ ರಂಜನ್ ಪೈ ಅವರ ಅಂದಾಜು ಸಂಪತ್ತಿನ ನಿವ್ವಳ ಮೌಲ್ಯ 2.8 ಬಿಲಿಯನ್ ಡಾಲರ್‌ ಆಗಿದ್ದರೆ, ಕಾಮತ್ ಅವರ ಸಂಪತ್ತಿನ ಮೌಲ್ಯ 2.5 ಬಿಲಿಯನ್ ಡಾಲರ್‌ ಆಗಿದೆ. ಪೂನವಾಲ್ಲಾ 20 ಬಿಲಿಯನ್‌ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ.

ವರ್ಷದಿಂದ ವರ್ಷಕ್ಕೆ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ ಏರಿಕೆಯಾಗುತ್ತಿದೆ. 17 ವರ್ಷದ ಬಳಿಕ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಆರ್‌ಸಿಬಿ ಅತ್ಯಂತ ಮೌಲ್ಯಯುತ ತಂಡಗಳಲ್ಲಿ ಒಂದಾಗಿದೆ. ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ಆರ್‌ಸಿಬಿಯನ್ನು ಅತ್ಯಂತ ಮೌಲ್ಯಯುತ ಐಪಿಎಲ್ ಫ್ರಾಂಚೈಸಿ ಎಂದು ಶ್ರೇಣೀಕರಿಸಿದೆ. ಚಾಂಪಿಯನ್‌ಶಿಪ್ ವಿಜಯದ ನಂತರ ಅದರ ಮೌಲ್ಯ ಸುಮಾರು 269 ಮಿಲಿಯನ್ ಡಾಲರ್‌ಗೆ (ಅಂದಾಜು 23 ಸಾವಿರ ಡಾಲರ್‌) ಏರಿಕೆಯಾಗಿದೆ ಎಂದು ಅಂದಾಜಿಸಿದೆ. ಪುರುಷರ ಮತ್ತು ಮಹಿಳೆಯರ ಎರಡೂ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಕಾರಣ ಈಗ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದೆ. ಇದನ್ನೂ ಓದಿ:  ರಂಜನ್‌ ಪೈ ಒಡೆತನದ ಮಣಿಪಾಲ ಗ್ರೂಪ್‌ ತೆಕ್ಕೆಗೆ ಹೋಗುತ್ತಾ ಬೈಜೂಸ್‌ ಕಂಪನಿ?

special RCB victory parade in Bengaluru on Wednesday

ಯಾವ ತಂಡದ ಮೌಲ್ಯ ಎಷ್ಟು?
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 269 ಮಿಲಿಯನ್‌ ಡಾಲರ್‌
ಮುಂಬೈ ಇಂಡಿಯನ್ಸ್‌ – 242 ಮಿಲಿಯನ್‌ ಡಾಲರ್‌
ಚೆನ್ನೈ ಸೂಪರ್‌ ಕಿಂಗ್ಸ್‌ – 235 ಮಿಲಿಯನ್‌ ಡಾಲರ್‌
ಪಂಜಾಬ್‌ ಕಿಂಗ್ಸ್‌ – 141 ಮಿಲಿಯನ್‌ ಡಾಲರ್‌

ಐಪಿಎಲ್‌ ಒಂದರ ಬ್ರ್ಯಾಂಡ್‌ ಮೌಲ್ಯ 3.9 ಬಿಲಿಯನ್‌ ಡಾಲರ್‌ ಎಂದು ಅಂದಾಜಿಸಲಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷ 13.8% ಹೆಚ್ಚಳ ಕಂಡಿದೆ. ಎಲ್ಲಾ ತಂಡಗಳು, ವ್ಯವಹಾರ ಎಲ್ಲಾ ಸೇರಿ ಒಟ್ಟಾರೆ ಎಂಟರ್‌ಪ್ರೈಸಸ್‌ ಮೌಲ್ಯ 18.5 ಬಿಲಿಯನ್‌ ಡಾಲರ್‌ ಎಂದು ಅಂದಾಜಿಸಲಾಗಿದೆ.

RCB Team

ಖರೀದಿಗೆ ಯಾರೆಲ್ಲಾ ಆಸಕ್ತಿ ತೋರಿಸಿದ್ದಾರೆ?
ಆರ್‌ಸಿಬಿಯನ್ನು ಖರೀದಿಸಲು ಹಲವು ಸಂಸ್ಥೆಗಳು ಆಸಕ್ತಿಯನ್ನು ತೋರಿಸಿವೆ. ಅಮೆರಿಕ ಮೂಲದ ಖಾಸಗಿ ಹೂಡಿಕೆ ಸಂಸ್ಥೆ, ಅದಾನಿ ಗ್ರೂಪ್, ಜಿಂದಾಲ್ ಕುಟುಂಬದ ನೇತೃತ್ವದ ಜೆಎಸ್‌ಡಬ್ಲ್ಯೂ ಗ್ರೂಪ್, ದೇವಯಾನಿ ಇಂಟರ್‌ನ್ಯಾಷನಲ್ ಗ್ರೂಪ್‌ನ ರವಿ ಜೈಪುರಿಯಾ ಖರೀದಿಸಲು ಆಸಕ್ತಿ ತೋರಿಸಿದ್ದಾರೆ.

TAGGED:nikhil kamathRanjan PaiUnited Spiritsಆರ್‍ಸಿಬಿಐಪಿಎಲ್ನಿಖಿಲ್‌ ಕಾಮತ್‌ಬೆಂಗಳೂರುರಂಜನ್‌ ಪೈ
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

Tejasvi Surya
Bengaluru City

TCS World 10K: 10 ಕಿ.ಮೀ. ರಸ್ತೆಯನ್ನು ಶೀಘ್ರವೇ ರಿಪೇರಿ ಮಾಡಿ – ಸರ್ಕಾರಕ್ಕೆ ತೇಜಸ್ವಿ ಸೂರ್ಯ ಮನವಿ

Public TV
By Public TV
12 minutes ago
shivamogga hulikal ghat hill collapse three labours died
Districts

ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮಣ್ಣಿನಡಿ ಸಿಲುಕಿದ್ದ ಮೂರು ಮೃತದೇಹಗಳು ಪತ್ತೆ

Public TV
By Public TV
14 minutes ago
Khawaja Asif Benjamin Netanyahu
Latest

ಶಾಂತಿ ಮಾತುಕತೆ ಮಧ್ಯೆ ಪಾಕ್‌, ಇಸ್ರೇಲ್‌ ಮಧ್ಯೆ ಭಯಂಕರ ಕಿತ್ತಾಟ

Public TV
By Public TV
48 minutes ago
10th student from Kerala Missing In Chikkamagaluru Mullayanagiri
Chikkamagaluru

ದತ್ತಪೀಠದ ತಪ್ಪಲಿನಲ್ಲಿ ಬಾಲಕಿ ನಾಪತ್ತೆ ಕೇಸ್‌ – ಕಿಡ್ನ್ಯಾಪ್‌ ಶಂಕೆ ವ್ಯಕ್ತಪಡಿಸಿದ ವಿದ್ಯಾರ್ಥಿನಿ ತಾಯಿ

Public TV
By Public TV
1 hour ago
daily horoscope dina bhavishya
Astrology

ದಿನ ಭವಿಷ್ಯ 10-04-2026

Public TV
By Public TV
2 hours ago
Landslide
Districts

ಶಿವಮೊಗ್ಗದ ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮೂವರು ಕಾರ್ಮಿಕರು ಸಾವು

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?