ಬೆಂಗಳೂರು: ಪ್ರತಿ ಟನ್ ಕಬ್ಬಿಗೆ (Sugarcane) 3,500 ರೂ. ದರ ನಿಗದಿ ಮಾಡಬೇಕು ಅಂತಾ ಪಟ್ಟು ಹಿಡಿದಿರುವ ರೈತರ ಹೋರಾಟ ತೀವ್ರಗೊಂಡಿದೆ. ಇಂದು ಪ್ರಮುಖ ಬೇಡಿಕೆಗಳನ್ನ ಈಡೇರಿಸುವಂತೆ ರೈತ ಹೋರಾಟಗಾರರು ಡೆಡ್‌ಲೈನ್ ನೀಡುರುವ ಹಿನ್ನೆಲೆ ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ತುರ್ತು ಸಭೆ ನಡೆಸುತ್ತಿದೆ.
ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಹೆಚ್.ಕೆ ಪಾಟೀಲ್, ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಸತೀಶ್ ಜಾರಕಿಹೊಳಿ, ಆರ್.ಬಿ ತಿಮ್ಮಾಪುರ, ಶರಣ್ ಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್, ರಾಜ್ಯಸಭೆ ಸದಸ್ಯರಾದ ಈರಣ್ಣ ಕಡಾಡಿ, ಲೆಹರ್ ಸಿಂಗ್, ಮುರುಗೇಶ್ ನಿರಾಣಿ ಇತರ ಸಚಿವರು ಪಾಲ್ಗೊಂಡಿದ್ದಾರೆ. ಜೊತೆಗೆ 82 ಮಾಲೀಕರ ಪೈಕಿ 52 ಸಕ್ಕರೆ ಕಾರ್ಖಾನೆ ಮಾಲೀಕರು ಸಭೆಯಲ್ಲಿ ಪಾಲ್ಗೊಂಡು ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಬ್ಬು ಬೆಳಗಾರರ ಕಿಚ್ಚು ಆರಿಸಲು ಖುದ್ದು ಅಖಾಡಕ್ಕಿಳಿದ ಸಿದ್ದರಾಮಯ್ಯ – ಕೇಂದ್ರ ನೆರವಿಗೆ ಬರುವಂತೆ ಮೋದಿಗೆ ಪತ್ರ
ಸಕ್ಕರೆ ದರ ಏರಿಕೆ ಮಾಡಲು ಆಗ್ರಹ
ಸಭೆಯ ಆರಂಭದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ವಾದ ಮಂಡಿಸಿದರು. ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಉತ್ತಮ ಆಗಲು ರಾಜ್ಯ ಸರ್ಕಾರ ಸಹಕರಿಸಬೇಕು, ಜೊತೆಗೆ ಕಾರ್ಖಾನೆಗಳಿಂದ ಖರೀದಿ ಮಾಡುವ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 5.50 ರೂ. ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಇಂದಿನಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ, ಟ್ರಕ್ಕಿಂಗ್ ಬಂದ್ – ರೈತನನ್ನು ಕೊಂದ ಹುಲಿ ಸೆರೆಗೆ ಈಶ್ವರ್ ಖಂಡ್ರೆ ಆದೇಶ
ಅಷ್ಟೇ ಅಲ್ಲದೇ ಸಕ್ಕರೆ ದರ ಏರಿಕೆ ಮಾಡಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತರಬೇಕು. ವಾಣಿಜ್ಯ ಮತ್ತು ಗೃಹಬಳಕೆ ಸಕ್ಕರೆ ಪ್ರತ್ಯೇಕವಾಗಿ ದರ ಏರಿಕೆ ಮಾಡಬೇಕು. ಎಥೆನಾಲ್ ಹಂಚಿಕೆ ಪ್ರಮಾಣದಲ್ಲಿ ಏರಿಕೆ ಮಾಡಬೇಕು ಎಂದು ಮಾಲೀಕರು ಸರ್ಕಾರಕ್ಕೆ ಆಗ್ರಹಿಸಿದರು. ಇದನ್ನೂ ಓದಿ: ಆರ್‌ಸಿಬಿಯಲ್ಲೇ ಉಳಿಯಲಿದ್ದಾರೆ ಸ್ಮೃತಿ, ಪೆರ್ರಿ – ಯಾವ ತಂಡದಲ್ಲಿ ಯಾರು? ಯಾರಿಗೆ ಎಷ್ಟು ಕೋಟಿ?

